»   » ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು

ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು

Posted By:
Subscribe to Filmibeat Kannada
ಡಾ ರಾಜ್ ಕುಮಾರ್ ಕನಸು ನನಸು ಮಾಡಿದ ಕಲಾವಿದರು | Filmibeat Kannada

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘಕ್ಕೆ ಪ್ರತ್ಯೇಕ ಕಟ್ಟಡ ಬೇಕು ಎನ್ನುವ ಬಹುದಿನದ ಕನಸು ಇಂದು ನನಸಾಗಿದೆ. ಸಾಕಷ್ಟು ವರ್ಷಗಳಿಂದ ಪಟ್ಟಶ್ರಮಕ್ಕೆ ಇಂದು ಫಲ ಸಿಕ್ಕಿದ್ದು ಸಿ ಎಂ ಸಿದ್ದರಾಮಯ್ಯ ಅವರು ನೂತನ ಕಟ್ಟಡವನ್ನ ಉದ್ಘಾಟನೆ ಮಾಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳಕೂಟದ ಬಳಿ ನಿರ್ಮಾಣವಾಗಿರುವ ಕಲಾವಿದರ ಸಂಘದ ಕಟ್ಟಡ ಮುಂದೆ ಚಿತ್ರರಂಗಕ್ಕೆ ಬರುವ ಯುವ ಕಲಾವಿದರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ನಿರ್ಮಾಣವಾಗಿದೆ. ನೂತನ ಕಟ್ಟಡ ಉದ್ಘಾಟನೆಗೆ ಚಿತ್ರರಂಗದ ಬಹುತೇಕ ಸ್ಟಾರ್ ಕಲಾವಿದರು ಭಾಗಿ ಆಗಿದ್ದು ಡಾ ರಾಜ್ ಕುಮಾರ್ ಕಂಡಿದ್ದ ಕನಸನ್ನು ಇಂದು ನನಸು ಮಾಡುವಲ್ಲಿ ಕಲಾವಿದರು ಯಶಸ್ಸು ಕಂಡಿದ್ದಾರೆ.

ಹಾಗಾದರೆ ಡಾ ರಾಜ್ ಕುಮಾರ್ ಅವರು ಕಲಾವಿದರ ಬಗ್ಗೆ ಕಂಡಿದ್ದ ಕನಸು ಏನು? ನೂತನವಾಗಿ ನಿರ್ಮಾಣ ಆಗಿರುವ ಕಟ್ಟಡ ಹೇಗಿದೆ? ಯಾರೆಲ್ಲಾ ಸಮಾರಂಭದಲ್ಲಿ ಭಾಗಿ ಆಗಿದ್ದರು? ಯಾವ ರೀತಿಯಲ್ಲಿ ಈ ಕಟ್ಟಡ ಉಪಯೋಗ ಆಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

ಸಿ ಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕಾಗಿ ನಿರ್ಮಾಣವಾಗಿರುವ ನೂತನವಾದ ಕಟ್ಟಡ ಇಂದು(ಫೆ 8) ಉದ್ಘಾಟನೆ ಆಗಿದೆ. ಸಿ ಎಂ ಸಿದ್ದರಾಮಯ್ಯ, ತನ್ವೀರ್ ಸೇಠ್, ಅಂಬರೀಶ್, ಪುನೀತ್ ರಾಜ್ ಕುಮಾರ್, ಶಿವಣ್ಣ. ರಮೇಶ್ ಅರವಿಂದ್, ರಾಘವೇಂದ್ರ ರಾಜ್ ಕುಮಾರ್ ,ವಿಜಯ್ ಲಕ್ಷ್ಮಿ ಸಿಂಗ್ ,ದುನಿಯಾ ವಿಜಿ , ಜೈ ಜಗದೀಶ್, ತಾರಾ ಇನ್ನು ಅನೇಕ ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಿದ್ದರು.

ಅಣ್ಣಾವ್ರ ಕನಸನ್ನು ನನಸು ಮಾಡಿದ ಕಲಾವಿದರು

ಕಲಾವಿದರ ಸಂಘ ಕಟ್ಟಲು ಸೈಟ್ ತೆಗೆದುಕೊಂಡಿದ್ದು ಡಾ ರಾಜ್ ಕುಮಾರ್. ಆದರೆ ಕಾರಣಾಂತರಗಳಿಂದ ಅವ್ರ ಕನಸು ಈಡೇರಿರಲಿಲ್ಲ, ಜಾಗ ವಿವಾದದಲ್ಲಿತ್ತು. ನಂತರ ಜೆ ಎಚ್ ಪಾಟೀಲ್ ಕಲಾವಿದರ ಸಂಘಕ್ಕಾಗಿ ಮಂಜೂರು ಮಾಡಿದ್ರು. ಅಂಬರೀಶ್ ವಸತಿ ಸಚಿವರಾದ ನಂತರ ಕಟ್ಟಡದ ಕೆಲಸ ಶುರು ಮಾಡಿದರು.

ರಾಜ್ ಕುಮಾರ್ ಅವರಿಗೆ ಕಲಾವಿದರಿಗೆ ಸಂಘ ಕಟ್ಟಬೇಕು ಎಂಬ ಬಹುದೊಡ್ಡ ಇತ್ತು. ಆ ಕನಸನ್ನ ಇಂದು ಕಲಾವಿದರೆಲ್ಲರೂ ಸೇರಿ ನನಸು ಮಾಡಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಪರಿಶ್ರಮ

ಕಲಾವಿದರ ಸಂಘದ ಕಟ್ಟಡ ನಿರ್ಮಾಣ ಮಾಡಲು ನಿರ್ಮಾಪಕ , ನಟ ರಾಕ್ಲೈನ್ ವೆಂಕಟೇಶ್ ತುಂಬಾ ಪರಿಶ್ರಮ ವಹಿಸಿದ್ದಾರೆ. ಹಿರಿಯ ನಟ ದೊಡ್ಡಣ್ಣ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ.

ಹೊಸ ಕಲಾವಿದರಿಗೆ ಉಪಯೋಗ

ಕನ್ನಡ ಸಿನಿಮಾರಂಗಕ್ಕೆ ಮುಂದೆ ಬರಲಿರುವ ಹೊಸ ಕಲಾವಿದರು ಕಲಾವಿದರ ಸಂಘದ ಸೌಲಭ್ಯಗಳನ್ನ ಪಡೆದುಕೊಳ್ಳಬಹುದು. ಸಂಗೀತ, ನಟನೆ.ಯೋಗ, ಜಿಮ್ ಹೀಗೆ ಸಾಕಷ್ಟು ತರಬೇತಿಯನ್ನ ಇಲ್ಲಿಯೇ ಪಡೆಯಬಹುದು. ಥಿಯೇಟರ್ ಕೂಡ ಮಾಡಲಾಗಿದ್ದು ಸೆನ್ಸಾರ್ ಹಾಗೂ ಸಿನಿಮಾ ಪ್ರಿಮಿಯರ್ ಗಾಗಿ ಉಪಯೋಗಿಸಿಕೊಳ್ಳಬಹುದು.

ಚಿತ್ರ ಕೃಪೆ- ಮನು

English summary
CM Siddaramaiah inaugurated the new building of Karnataka Film Artists' Association. The new building of Artists' Association near Chamarajpet in Bangalore. Sandalwood's many artists were involved in the opening of the new building.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada