ಡಾ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ, ಹೊರ ಬಂದು ಹೇಳಿದ್ದೇನು ?
ಅಮೆರಿಕಾಗೆ ಶಿವಣ್ಣ ಚಿಕಿತ್ಸೆ ಪಡೆಯಲು ತೆರಳುವಾಗ ಅನೇಕರಲ್ಲಿ ಆತಂಕ ಇತ್ತು. ಖುದ್ದು ಶಿವಣ್ಣ ಮೊಗದಲ್ಲಿ ಕೂಡ ಭಯ ಇತ್ತು. ಆದರೆ, ಅಭಿಮಾನಿಗಳ ಹರಕೆ-ಪ್ರಾರ್ಥನೆ ಮತ್ತು ವೈದ್ಯರ ಶ್ರಮ ಶಿವಣ್ಣ ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಒಂದು ತಿಂಗಳ ನಂತರ ನಿನ್ನೆ ತಾಯ್ನಾಡಿಗೆ ಮರಳಿದ್ದಾರೆ. ಅಭಿಮಾನಿಗಳ ಅಭಿಮಾನದ ಹೂಮಳೆಯಲ್ಲಿ ಮಿಂದೆದ್ದಿದ್ದಾರೆ.
ಇನ್ನು, ಶಿವಣ್ಣ ಕನ್ನಡ ಚಿತ್ರರಂಗದ ಅಪರೂಪದ ನಾಯಕ. ಅಜಾತ ಶತ್ರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಶಿವಣ್ಣ ಅವರನ್ನು ನಿನ್ನೆ ಸ್ವಾಗತಿಸಲು ಶ್ರೀನಗರ ಕಿಟ್ಟಿ, ಅರ್ಜುನ್ ಜನ್ಯ ಸೇರಿ ಅನೇಕರು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆತ್ಮೀಯವಾದ ಸ್ವಾಗತ ಕೋರಿದರು. ಇಂದು ಕೂಡ ಅನೇಕರು ಶಿವಣ್ಣ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ. ಕುಶಲೋಪರಿ ವಿಚಾರಿಸಿದ್ದಾರೆ.

ಬಾಗಿಲು ಬಳಿ ತಾವೇ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸ್ವಾಗತಿಸಿದ ಶಿವಣ್ಣ ಆ ನಂತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ಸಮಯದಲ್ಲಿ ಗಿಡ ನೀಡುವ ಮೂಲಕ ಸಿದ್ಧರಾಮಯ್ಯ ಶಿವಣ್ಣ ಅವರಿಗೆ ಸ್ವಾಗತ ಕೋರಿದ್ದಾರೆ. ಈ ಸಮಯದಲ್ಲಿ ಸಿದ್ಧರಾಮಯ್ಯ ಅವರ ಜೊತೆ ಭೈರತಿ ಸುರೇಶ್ ಕೂಡ ತೆರಳಿ ಶಿವಣ್ಣ ಆರೋಗ್ಯ ವಿಚಾರಿಸಿದ್ದಾರೆ
ಆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಪರೇಷನ್ ಆದ ಮರುದಿನವೇ ಫೋನ್ ಮಾಡಿದ್ದೆ, ಆಪರೇಷನ್ ಚೆನ್ನಾಗಿ ಆಗಿದೆ ಯಾವ ತೊಂದರೆ ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ಹೇಳಿದ್ದರು, ಈಗ ಬಂದು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಆತಂಕ ಪಡುವ ಅಗತ್ಯ ಇಲ್ಲ ಅವರು ಆರಾಮಾಗಿದ್ದಾರೆ ಎಂದು ಹೇಳಿರುವ ಸಿದ್ಧರಾಮಯ್ಯ ಮುಂದಿನ ತಿಂಗಳಿಂದ ಚಿತ್ರೀಕರಣಕ್ಕೆ ಹೋಗ್ತಾರಂತೆ ಎಂದು ಹೇಳುವ ಮೂಲಕ ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಇನ್ನು ತಮ್ಮ ಆರೋಗ್ಯದ ಬಗ್ಗೆ ನಿನ್ನೆ ಮಾತನಾಡಿದ ಶಿವಣ್ಣ ಇಲ್ಲಿಂದ ಹೋಗಬೇಕಾದರೆ ಸ್ವಲ್ಪ ಎಮೋಷನಲ್ ಆಗಿದ್ದೆ, ಆಫರೇಷನ್ ಅಂದರೆ ಅಷ್ಟು ಸುಲಭ ಅಲ್ಲ ಎಂದು ಹೇಳಿದ್ದರು. ಅಮೆರಿಕಾಗೆ ಹೋಗುವಾಗ ಸ್ವಲ್ಪ ಭಯ ಇತ್ತುಆದರೆ ವೈದ್ಯರು ಧೈರ್ಯ ತುಂಬಿದರು ಎಂದು ಹೇಳಿದ್ದ ಶಿವಣ್ಣ ಸಂಬಂಧಿಕರು, ಗೆಳೆಯರು, ಹೆಚ್.ಡಿ.ಪ್ರಕಾಶ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಮೇಶ್ ರೆಡ್ಡಿ, ಶ್ರೀಕಾಂತ್, ನಾಗಿ ಹೀಗೆ ತುಂಬಾ ಜನ ನನ್ನ ಬೆಂಬಲವಾಗಿ ಹಿಂದೆ ಇದ್ದರು ಎಂದು ಹೇಳಿದ್ದರು.
ಚಿತ್ರರಂಗ ಮತ್ತು ಅಭಿಮಾನಿಗಳ ಪ್ರೀತಿ ಹಾರೈಕೆಯಿಂದ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಹೇಳಿದ ಶಿವಣ್ಣ ಸರ್ಜರಿ ಮುಗಿದ ನಂತರ ಮೂರು-ನಾಲ್ಕು ದಿನಗಳ ಅಂತರದಲ್ಲಿ ಕ್ಯಾನ್ಸರ್ ಫ್ರೀ ಅಂತ ವರದಿ ಬಂತು.
ಆಗ ಮನಸು ನಿರಾಳವಾಯ್ತು ಖುಷಿಯಾಯ್ತು ಎಂದು ಹೇಳಿದರು. ಇನ್ನು ಅತ್ತ ಶಿವಣ್ಣ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ಶಿವಣ್ಣಗೆ 190 ಹೊಲಿಗೆ ಹಾಕಲಾಗಿದೆ ಎಂದು ಸುದ್ದಿಯಾಗಿತ್ತು. ಈ ಕುರಿತು ಕೂಡ ಪ್ರತಿಕ್ರಿಯೆ ನೀಡಿದ್ದ ಶಿವಣ್ಣ ಆರು ಸರ್ಜರಿ ಮಾಡಿದ್ದಾರೆ, ಆದರೆ ಸ್ಟಿಚ್ ಸಂಖ್ಯೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಆಸ್ಪತ್ರೆಯಲ್ಲಿ ಅದೆಲ್ಲ ಕೇಳುವ ಪರಿಸ್ಥಿತಿ ಇರಲಿಲ್ಲ ಡಾಕ್ಟರ್ ಕೂಡ ಆ ವಿಚಾರ ನಮ್ಮ ಬಳಿ ಹೇಳಿಲ್ಲ ಎಂದಿರುವ ಶಿವಣ್ಣ ಎರಡನೇ ದಿನನೇ ವಾಕ್ ಮಾಡಲು ಶುರು ಮಾಡಿದೆ ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ ಎಂದು ಹೇಳಿದ್ದರು.


Click it and Unblock the Notifications











