Leo: ಕರ್ನಾಟಕದಲ್ಲಿ 'ಲಿಯೋ' ಹಗಲು ದರೋಡೆ!: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿಎಂ ಸಿದ್ದು 200 ರೂ. ಟಿಕೆಟ್ ದರ ಆದೇಶ ಏನಾಯ್ತು?
ದಶಕಗಳಿಂದ ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಜೋರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ. ಲಂಗು ಲಗಾಮಿಲ್ಲದೇ ತೆಲುಗು, ತಮಿಳು ಸಿನಿಮಾಗಳು ಕರ್ನಾಟಕದಲ್ಲಿ ಪ್ರದರ್ಶನವಾಗುತ್ತದೆ. ಅಷ್ಟೇ ಟಿಕೆಟ್ ದರವನ್ನು 5 ಪಟ್ಟು ಹೆಚ್ಚಿಸಿ ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕಲಾಗುತ್ತದೆ.
ಬಹುನಿರೀಕ್ಷಿತ ಸಿನಿಮಾಗಳನ್ನೇ ಟಾರ್ಗೆಟ್ ಆಗಿ ಇಟ್ಟುಕೊಂಡು ದಿಢೀರನೇ ಟಿಕೆಟ್ ದರ ಹೆಚ್ಚಿಸಿಬಿಡುವ ಕೆಲಸ ನಡೀತಿದೆ. ಇದೀಗ ತಮಿಳಿನ 'ಲಿಯೋ' ಚಿತ್ರ ಬಹಳ ದೊಡ್ಡಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ವಾರಕ್ಕೂ ಮೊದ್ಲೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಕೆಲವರು ಟಿಕೆಟ್ ದರ ನೋಡಿ ಶಾಕ್ ಆಗಿದ್ದಾರೆ. ಇನ್ನು ಕನ್ನಡದ 'ಘೋಸ್ಟ್' ಚಿತ್ರಕ್ಕಿಂತಲೂ 'ಲಿಯೋ'ಗೆ ಹೆಚ್ಚು ಶೋಗಳು ಸಿಗುವ ಲೆಕ್ಕಾಚಾರ ನಡೀತಿದೆ.

3 ತಿಂಗಳ ಹಿಂದೆ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕೂಡ ಇದೇ ರೀತಿ ಸದ್ದು ಮಾಡಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 1500 ರೂ. ದಾಟಿತ್ತು. ಇದೀಗ 'ಲಿಯೋ' ವಿಚಾರದಲ್ಲೂ ಅದು ಪುನರಾವರ್ತನೆ ಆಗುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳನ್ನು 'ಲಿಯೋ' ಆವರಿಸಿಕೊಳ್ಳುತ್ತಿದೆ. ಟಿಕೆಟ್ ದರ ಕೂಡ ಬಹಳ ಹೆಚ್ಚಾಗಿದೆ. ನಗರದ ಊರ್ವಶಿ ಥಿಯೇಟರ್‌ನಲ್ಲಿ ಸೆಕೆಂಡ್ ಕ್ಲಾಸ್ ಟಿಕೆಟ್ ದರ 1000 ರೂ. ಇದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಕೂಡ ಟಿಕೆಟ್ ಬೆಲೆ ಇಷ್ಟು ಇರುವುದಿಲ್ಲ. ಟಿಕೆಟ್ ದರ ಹೆಚ್ಚಾಗಿದ್ದರೂ ಕೂಡ ಪ್ರೇಕ್ಷಕರು ಬುಕ್ ಮಾಡುತ್ತಿದ್ದಾರೆ.
ಮೂರು ದಿನ ಮೊದ್ಲೆ ಅಡ್ವಾನ್ಸ್ ಬುಕ್ಕಿಂಗ್‌ನಿಂದ 'ಲಿಯೋ' ಸಿನಿಮಾ 7 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಈ ವರ್ಷ ದಸರಾ ಸಂಭ್ರಮದಲ್ಲಿ ಕನ್ನಡ 'ಘೋಸ್ಟ್' ಜೊತೆಗೆ ತಮಿಳಿನ 'ಲಿಯೋ' ಹಾಗೂ ತೆಲುಗಿನ 'ಟೈಗರ್ ನಾಗೇಶ್ವರರಾವ್', 'ಭಗವಂತ್ ಕೇಸರಿ' ಸಿನಿಮಾಗಳು ರಿಲೀಸ್ ಆಗುತ್ತಿವೆ. ಇನ್ನು ತಮಿಳುನಾಡಿನಲ್ಲೂ 'ಲಿಯೋ' ಅರ್ಲಿ ಮಾರ್ನಿಂಗ್ ಶೋಗೆ ಅವಕಾಶ ಸಿಕ್ಕಿಲ್ಲ. ಆದರೆ ಕರ್ನಾಟಕದಲ್ಲಿ ಬೆಳಗ್ಗೆ 4 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ.
ಹಲವು ವರ್ಷಗಳಿಂದ ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಿಸಲಾಗುತ್ತಿದೆ. ಇದೇ ಕಾರಣಕ್ಕೆ ಜನ ಚಿತ್ರಮಂದಿರಗಳಿಗೆ ಬರುವುದಿಲ್ಲ ಎನ್ನುವ ಆರೋಪವೂ ಇದೆ. ಒಂದೊಂದು ಮಲ್ಟಿಪ್ಲೆಕ್ಸ್‌ನಲ್ಲಿ ಒಂದೊಂದು ಟಿಕೆಟ್ ದರ ಇದೆ ಎನ್ನುವ ಕಾರಣಕ್ಕೆ 7 ವರ್ಷಗಳ ಹಿಂದೆ ಏಕರೂಪ ಟಿಕೆಟ್ ದರ ಜಾರಿಗೆ ಪ್ರೇಕ್ಷಕರು ಆಗ್ರಹಿಸಿದ್ದರು. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಿ ಸರ್ಕಾರ ಆದೇಶ ನೀಡಿತ್ತು. ಜೊತೆಗೆ ಪ್ರೈ ಟೈಮ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳು ಕನ್ನಡ ಸಿನಿಮಾ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿತ್ತು.
ಬಹಳ ದಿನಗಳ ಕಾಲ ಸರ್ಕಾರದ ಆದೇಶವನ್ನು ಮಲ್ಟಿಪ್ಲೆಕ್ಸ್‌ಗಳು ಅನುಸರಿಸಲಿಲ್ಲ. ಮತ್ತೆ ಮೊದಲಿನಂತೆ ಟಿಕೆಟ್ ದರ ಹೆಚ್ಚಿಸಲು ಆರಂಭಿಸಿದರು. ಇನ್ನು ದೊಡ್ಡ ಸಿನಿಮಾಗಳು ಬಂದರೆ 5 ಪಟ್ಟು 7 ಪಟ್ಟು ಹೆಚ್ಚಿಸಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. 'ಲಿಯೋ' ವಿಚಾರದಲ್ಲಿ ಅದೇ ನಡೆಯುತ್ತಿದೆ. ಬರೀ ಮಲ್ಟಿಪೆಕ್ಸ್ಸ್ ಅಲ್ಲ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೂ 500 ರೂ. 1000 ರೂ. ಟಿಕೆಟ್ ದರ ಮಾಡಿರುವುದು ಎಲ್ಲೆ ಹುಬ್ಬೇರಿಸಿದೆ.
ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಟಿಕೆಟ್ ದರ 150 ರಿಂದ 200 ರೂ. ಮಾತ್ರ ಇದೆ. ಆದರೆ ಕರ್ನಾಟಕದಲ್ಲಿ ಅದು ಕೂಡ ಪರಭಾಷಾ ಸಿನಿಮಾಗಳಿಗೆ ಟಿಕೆಟ್ ದರ ಈ ಪಾಟಿ ಹೆಚ್ಚಿಸುವುದು ಬೇಸರದ ಸಂಗತಿ. ಇನ್ನು ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಅರ್ಜುನ್ ಸರ್ಜಾ, ಸಂಜಯ್ ದತ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.


Click it and Unblock the Notifications











