twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕ ವಿಚಾರದಲ್ಲಿ ಗೊಂದಲ ಬೇಡ: ಸಿಎಂ ಟ್ವೀಟ್

    |

    Recommended Video

    Dr Vishnuvardhan: ವಿಷ್ಣು ಸ್ಮಾರಕ ವಿಚಾರದಲ್ಲಿ ಗೊಂದಲ ಬೇಡ: ಸಿಎಂ ಟ್ವೀಟ್ | FILMIBEAT KANNADA

    ಡಾ ವಿಷ್ಣು ಸ್ಮಾರಕ ವಿಚಾರವಾಗಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಟ್ವಿಟ್ಟರ್ ಮೂಲಕ ಮತ್ತೊಮ್ಮೆ ಸಮಾಧಾನದ ಮಾತುಗಳನ್ನಾಡಿದ್ದಾರೆ.

    ಅಂಬರೀಶ್ ನಿಧನ ವೇಳೆ, ಮುಖ್ಯಮಂತ್ರಿ ನೀಡಿದ್ದ ಹೇಳಿಕೆಯಿಂದ ಅಭಿಮಾನಿ ಮತ್ತು ಕುಟುಂಬ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿ, ಸಿಎಂ ವಿರುದ್ಧ ವಿಷ್ಣು ಅಳಿಯ ಅನಿರುದ್ದ್ ಕಿಡಿಕಾರಿದ್ದರು.

    'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ 'ನಮ್ಮ ತಂದೆಗೆ ಅನ್ಯಾಯವಾಗ್ತಿದೆ': ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಷ್ಣು ಪುತ್ರಿ

    ರಾಜ್ ಕುಮಾರ್, ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರ ಸ್ಮಾರಕವನ್ನ ಒಂದೆ ಕಡೆ ಇರಲಿ ಎಂಬ ಚಿಂತನೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಒಪ್ಪದ ಅನಿರುದ್ಧ್ ಸಿಎಂ ವಿರುದ್ಧ ಹರಿಹಾಯ್ದಿದ್ದರು.

    ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?ಕಂಠೀರವ ಸ್ಟುಡಿಯೋಗೆ ವಿಷ್ಣು ಸ್ಮಾರಕ ಸ್ಥಳಾಂತರ ಖಂಡಿತ ಆಗಲ್ಲ, ಯಾಕೆ.?

    CM tweet on dr vishnuvardhan memorial

    'ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ' ಎಂದು ಆಕ್ರೋಶ ಹೊರಹಾಕಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಭಾರತಿ ವಿಷ್ಣುವರ್ಧನ್, 'ಮೈಸೂರಲ್ಲಿ ಸ್ಮಾರಕ ಕೆಲಸ ಆರಂಭವಾಗಿದೆ. ಅಲ್ಲಿ ಉಂಟಾಗಿಸರುವ ಸಮಸ್ಯೆ ಬಗೆಹರಿಸಿಕೊಟ್ಟರೇ ಸಾಕು. ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯ ಭೂಮಿ ಆದರೂ ಸಂತಸವೇ, ಅಥವಾ ಅಭಿಮಾನ್ ಸ್ಡುಡಿಯೋದಲ್ಲೇ ಸ್ಮಾರಕ ಮಾಡುವುದಾದರೇ ಆಗಲಿ' ಎಂದಿದ್ದರು.

    ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ

    ಇದೀಗ, ಮತ್ತೆ ಈ ವಿಷ್ಯದ ಬಗ್ಗೆ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಮಾತನಾಡಿದ್ದು, ''ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ''ಎಂದಿದ್ದಾರೆ.

    English summary
    CM Kumaraswamy today (november 29th) tweet about Vishnuvardhan memorial. He said government committed to build Vishuvardhan memorial.
    Thursday, November 29, 2018, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X