For Quick Alerts
  ALLOW NOTIFICATIONS  
  For Daily Alerts

  ಕಲಾವಿದ ಮತ್ತು ಕಲಾತಂಡಗಳಿಗೆ 3 ಸಾವಿರ ರೂ ನೆರವು ಘೋಷಿಸಿದ ಸಿಎಂ

  |

  ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಕರ್ನಾಟಕದ ಸರ್ಕಾರ ಮೇ 10 ರಿಂದ ಮೇ 24ರವರೆಗೂ ಲಾಕ್‌ಡೌನ್ ಘೋಷಣೆ ಮಾಡಿದೆ. ಈ ಲಾಕ್‌ಡೌನ್ ಜಾರಿಯಾದ ಹಿನ್ನೆಲೆ ದುಡಿಯುವ ಕಾರ್ಮಿಕ ವರ್ಗಕ್ಕೆ ಹಾಗೂ ಸಾರ್ವಜನಿಕರಿಗೆ ಆರ್ಥಿಕವಾಗಿ ತೊಂದರೆಯಾಗಿದೆ.

  ಜನಸಾಮಾನ್ಯರ ಈ ತೊಂದರೆಗಳನ್ನು ಗಮನಿಸಿದ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿದರು.

  ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ

  ಹೂವು ಬೆಳೆಗಾರರು, ಹಣ್ಣು-ತರಕಾರಿ ಬೆಳೆದ ರೈತರು, ಬೀದಿ ಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ ಸಮಾಜದ ಹಲವು ವರ್ಗಗಳಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯಧನ ಸಿಗಲಿದೆ.

  ಸಿಎಂ ಘೋಷಿಸಿದ ಪ್ಯಾಕೇಜ್‌ನಲ್ಲಿ ಕಲಾವಿದರಿಗೂ ಧನ ಸಹಾಯ ಸಿಗಲಿದೆ. ಕಲಾವಿದರು ಹಾಗೂ ಕಲಾವಿದ ತಂಡಗಳಿಗೆ ತಲಾ 3 ಸಾವಿರ ರೂಪಾಯಿ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ.

  ಒಟ್ಟು 16,095 ಫಲಾನುಭವಿಗಳು ಈ ಯೋಜನೆಯನ್ನು ಪಡೆಯಲಿದ್ದಾರೆ. ಇದಕ್ಕಾಗಿ ಸರ್ಕಾರ 4.82 ಕೋಟಿ ವೆಚ್ಚ ಭರಿಸಲಿದೆ ಎಂದು ತಿಳಿಸಿದರು. ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.

  Kotigobba3: ಸಿನಿಮಾದಲ್ಲಿ Sudeep ತಾಯಿ ಪಾತ್ರದಲ್ಲಿ ಅಭಿರಾಮಿ | Filmibeat Kannada

  ಕಲಾವಿದರು ಅಂದಾಕ್ಷಣ ಸಿನಿಮಾ ಕಲಾವಿದರು, ಕಾರ್ಮಿಕರು, ತಂತ್ರಜ್ಞರು, ಟಿವಿ ಕಾರ್ಮಿಕ-ಕಲಾವಿದರು, ಆರ್ಕೆಸ್ಟ್ರಾ ಕಲಾವಿದರು, ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು ಹೀಗೆ ಬಹಳಷ್ಟು ಕಲಾವಿದರು ಇದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ಸರ್ಕಾರ ತಿಳಿಸಿಲ್ಲ.

  English summary
  Karnataka CM Yediyurappa Announces 3000 rupees to Artist and Artist Team in lockdown special package.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X