twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಪುಣ್ಯ ತಿಥಿ: ಅಣ್ಣಾವ್ರನ್ನು ನೆನೆದ ಸಿಎಂ ಯಡಿಯೂರಪ್ಪ

    |

    ವರನಟ, ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿಕೊಂಡಿದ್ದಾರೆ.

    ಏಪ್ರಿಲ್ 12 ರಂದು ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ. ಅಭಿಮಾನಿಗಳ ಪಾಲಿನ ದೇವರು ಅಣ್ಣಾವ್ರು ಅಗಲಿ ಇಂದಿಗೆ ಹದಿನೈದು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಡಾ ರಾಜ್ ಅವರನ್ನು ಸಿಎಂ ನೆನೆಪಿಸಿಕೊಂಡು ಟ್ವಿಟ್ಟರ್‌ನಲ್ಲಿ ನಮನ ಸಲ್ಲಿಸಿದ್ದಾರೆ.

    ಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋ

    'ಅಪ್ರತಿಮ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ 'ಅಣ್ಣಾವ್ರು', ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

    CM Yediyurappa Remembers Dr Rajkumar on Death Anniversary

    1929ರಲ್ಲಿ ಗಾಜನೂರಿನಲ್ಲಿ ಹುಟ್ಟಿದ ರಾಜ್ ಕುಮಾರ್ ಅವರು 1954ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದರು. ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ಅಣ್ಣಾವ್ರು ನಟಿಸಿದ್ದಾರೆ. ಅನೇಕ ಹಾಡುಗಳನ್ನು ಹಾಡಿದ್ದಾರೆ. ಡಾಕ್ಟರೇಟ್, ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಹಲವು ಅತ್ಯುನ್ನತ ಗೌರವ ಪಡೆದುಕೊಂಡಿದ್ದಾರೆ.

    Recommended Video

    ಅಕಾಶ ನೋಡಿ ದೇವರಿಗೆ ಏನಂತ ಬೈದ್ರು ಧನ್ಯಾ ರಾಮ್ ಕುಮಾರ್ | Filmibeat Kannada

    ಅಣ್ಣಾವ್ರು 2006ರ ಏಪ್ರಿಲ್ 12 ರಂದು ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ರಾಜ್ ಕುಮಾರ್ ಅಂತಿಮಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಆ ದಿನ ಬೆಂಗಳೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು.

    English summary
    Karnataka Chief Minister Yediyurappa Remembered Dr Rajkumar on Death Anniversary.
    Monday, April 12, 2021, 8:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X