ಸಂಪುಟ ಸಹೋದ್ಯೋಗಿಯೊಂದಿಗೆ ಧಾರಾವಾಹಿ ನೋಡಿದ ಸಿಎಂ ಯಡಿಯೂರಪ್ಪ
ಸಿಎಂ ಆದವರಿಗೆ ಸಮಯ ದೊರೆಯುವುದೇ ವಿರಳ, ದೊರೆತ ಸಮಯವನ್ನೂ ವಿಶ್ರಾಂತಿಗಾಗಿಯೇ ಕಳೆಯಬೇಕು ಅಷ್ಟು ಶ್ರಮದ ದಿನಚರಿ ಅವರದ್ದು.
Recommended Video
ಅದರಲ್ಲಿಯೂ ಈ ಕೊರೊನಾ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಬಿಡುವಿಲ್ಲದ, ಮಾನಸಿಕವಾಗಿ ಒತ್ತಡ ಉಂಟುಮಾಡುತ್ತಿರುವಷ್ಟೆ ಕೆಲಸ ಕಾರ್ಯಗಳು.
ದಿನದ ಬಹುತೇಕ ಗಂಟೆ ಬ್ಯುಸಿಯಾಗಿಯೇ ಇರುವ ಸಿಎಂ ಯಡಿಯೂರಪ್ಪ ಅವರು, ತಮಗೆ ಸಿಕ್ಕ ಸಮಯದಲ್ಲಿ ತದೇಕಚಿತ್ತದಿಂದ ಕೂತು ಕನ್ನಡ ಧಾರಾವಾಹಿಯೊಂದನ್ನು ವೀಕ್ಷಿಸಿದ್ದಾರೆ. ಧಾರಾವಾಹಿ ನೋಡುವ ಸಮಯದಲ್ಲಿ ಸಂಪುಟ ಸಹೋದ್ಯೋಗಿ ಸಾಥ್ ನೀಡಿದ್ದಾರೆ. ಯಾವುದಾ ಧಾರಾವಾಹಿ?

ನಿವಾಸದಲ್ಲಿ ಧಾರಾವಾಹಿ ನೋಡಿದ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ ಅವರು ತಮ್ಮ ಸಂಪುಟದ ಸಹೊದ್ಯೋಗಿಯೊಂದಿಗೆ ಕೂತು ತಮ್ಮ ನಿವಾಸದಲ್ಲಿಯೇ 'ಮಹಾಭಾರತ' ಧಾರಾವಾಹಿ ನೋಡಿದ್ದಾರೆ. ಹಿಂದಿಯ ಈ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ.

ಎಸ್.ಆರ್.ವಿಶ್ವನಾಥ್ ಜೊತೆಗಿದ್ದರು
ಬಹಳ ವಿರಳವಾಗಿ ಸಿನಿಮಾಗಳನ್ನು ನೋಡುವ ಯಡಿಯೂರಪ್ಪ ಅವರು ಧಾರಾವಾಹಿ ನೋಡಿರುವುದು ಕೆಲವರಿಗೆ ಆಶ್ಚರ್ಯದೊಂದಿಗೆ ಖುಷಿ ತಂದಿದೆ. ಧಾರಾವಾಹಿ ನೋಡುವಾಗ ಜೊತೆಗೆ ಸಿಎಂ ಅವರ ರಾಜಕೀಯ ಕಾರ್ಯದರ್ಶೀ ಎಸ್.ಆರ್.ವಿಶ್ವನಾಥ್ ಸಹ ಇದ್ದರು.

ವಿಡಿಯೋ ಸಂದೇಶ ನೀಡಿರುವ ಯಡಿಯೂರಪ್ಪ
ಡಬ್ಬಿಂಗ್ ಧಾರಾವಾಹಿ ಮಹಾಭಾರತ ಕನ್ನಡದಲ್ಲಿ ಪ್ರಸಾರವಾದಾಗ ಚಾನೆಲ್‌ನಲ್ಲಿ ವಿಡಿಯೋ ಸಂದೇಶ ನೀಡಿದ್ದ ಯಡಿಯೂರಪ್ಪ ಅವರು, ಎಲ್ಲರೂ ಮಹಾಭಾರತವನ್ನು ನೋಡಿ, ಮಕ್ಕಳಿಗೆ ನೊಡಲು ಹೇಳಿ, ನಾನೂ ಪ್ರತಿದಿನ ನೋಡುತ್ತಿದ್ದೇನೆ ಎಂದು ಹೇಳಿದ್ದರು.

ಹೆಚ್ಚು ಸಿನಿಮಾ ನೋಡುವುದಿಲ್ಲ ಯಡಿಯೂರಪ್ಪ
ಯಡಿಯೂರಪ್ಪ ಅವರು ಸಿನಿಮಾಗಳಿಗೆ ಹೋಗುವುದು ಬಹು ಅಪರೂಪ. ನಿಖಿಲ್ ಕುಮಾರಸ್ವಾಮಿ ಅಭಿನಯಿಸಿದ್ದ 'ಸೀತಾರಾಮ ಕಲ್ಯಾಣ' ಸಿನಿಮಾದ ಪ್ರೀಮಿಯರ್ ಶೋ ನಲ್ಲಿ ಬಿಜೆಪಿಯ ಹಲವು ನಾಯಕರು ಭಾಗಿದ್ದರು ಆದರೆ ಯಡಿಯೂರಪ್ಪ ಅವರು ಭಾಗವಹಿಸಿರಲಿಲ್ಲ.


Click it and Unblock the Notifications











