»   » ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!

ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬ್ಲಾಕ್ ಬಸ್ಟರ್ ಆದ್ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ ಮಾಡಿದ ಸಿನಿಮಾ 'ರಾಜಕುಮಾರ'.

ಅಪ್ಪು ಚಿತ್ರಕ್ಕೆ 'ರಾಜಕುಮಾರ' ಅಂತ ಶೀರ್ಷಿಕೆ ಇಟ್ಟು... ಪುನೀತ್ ಭುಜದ ಮೇಲೆ ಪಾರಿವಾಳ ಕೂರಿಸಿ... ಥೇಟ್ 'ಕಸ್ತೂರಿ ನಿವಾಸ' ಚಿತ್ರದಲ್ಲಿನ ಡಾ.ರಾಜ್ ಕುಮಾರ್ ಸ್ಟೈಲ್ ನಲ್ಲಿ... ನಿರ್ದೇಶಕ ಸಂತೋಷ್ ಆನಂದ್ ರಾಮ್ ಯಾವಾಗ ಫೋಟೋಶೂಟ್ ಮಾಡಿಸಿದ್ರೋ... ಆಗ್ಲೇ ಇದು ಅಪ್ಪಾಜಿ ಆದರ್ಶಗಳನ್ನ ಹೊತ್ತಿರುವ ಸಿನಿಮಾ ಅಂತ ಅನೇಕರು ಲೆಕ್ಕಾಚಾರ ಹಾಕಿದ್ದರು.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]


'ರಾಜಕುಮಾರ' ಚಿತ್ರದಲ್ಲಿ 'ಕಸ್ತೂರಿ ನಿವಾಸ' ಫೀಲ್ ಇರಬಹುದು.! ಆದರೆ, 'ರಾಜಕುಮಾರ' ಮತ್ತು 'ಕಸ್ತೂರಿ ನಿವಾಸ' ಮಧ್ಯೆ ನೀವ್ಯಾರೂ ಗಮನಿಸದ ಸಾಮ್ಯತೆ ಒಂದು ಇದೆ. ಅದೇನು ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, ಸಂಪೂರ್ಣ ಸ್ಟೋರಿ ಓದಿ....


ನೀವ್ಯಾರೂ ಗಮನಿಸಿದ ಸಾಮ್ಯತೆ

'ರಾಜಕುಮಾರ' ಮತ್ತು 'ಕಸ್ತೂರಿ ನಿವಾಸ' ಚಿತ್ರದಲ್ಲಿರುವ ಸಾಮ್ಯತೆ ಏನು ಅಂದ್ರೆ ಎಲ್ಲರ ತಲೆಯಲ್ಲೂ ಥಟ್ ಅಂತ 'ಬೊಂಬೆ' ನೆನಪಾಗಬಹುದು. ಆದ್ರೆ, ಎರಡು ಚಿತ್ರಗಳ ನಡುವೆ ನಿಮಗೆ ಗೊತ್ತಿಲ್ಲದ ಎರಡು ಸಾಮ್ಯತೆಗಳಿವೆ.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!]


1 ಮತ್ತು 7 ರ ನಂಟು

ಡಾ.ರಾಜ್ ಕುಮಾರ್ ಅಭಿನಯದ 'ಕಸ್ತೂರಿ ನಿವಾಸ' ಬಿಡುಗಡೆ ಆಗಿದ್ದು 1971 ರಲ್ಲಿ. ಇನ್ನೂ ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಬಿಡುಗಡೆ ಆಗಿರುವುದು 2017ರಲ್ಲಿ. 71 ಮತ್ತು 17... 1 ಮತ್ತು 7 ರ ನಂಟು ಎರಡು ಚಿತ್ರಗಳಲ್ಲಿವೆ.


ಕಾಕತಾಳೀಯ ಅಂದ್ರೆ ಇದೇ ನೋಡಿ...

'ಕಸ್ತೂರಿ ನಿವಾಸ' ಬಿಡುಗಡೆ ಆದಾಗ ಡಾ.ರಾಜ್ ಕುಮಾರ್ ರವರಿಗೆ 42 ವರ್ಷ. 'ರಾಜಕುಮಾರ' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಯ್ತು. ಅದಕ್ಕೂ ಮುನ್ನ ಅಪ್ಪು 42ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನೆನಪಿದೆ ತಾನೆ.? ಕಾಕತಾಳೀಯ ಅಂದ್ರೆ ಇದೇ ಅಲ್ಲವೇ.!


ಸೂಪರ್ ಹಿಟ್ ಹಾದಿಯಲ್ಲಿ

1971 ರಲ್ಲಿ ತೆರೆಕಂಡ 'ಕಸ್ತೂರಿ ನಿವಾಸ' ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಇನ್ನೂ ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ 'ರಾಜಕುಮಾರ'ನ ರಾಜ್ಯಭಾರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಆಗಿ ನಡೆಯುತ್ತಿದೆ.


ಡಾ.ರಾಜ್ ಕುಮಾರ್ ರವರನ್ನ ನೆನಪಿಸುವ 'ರಾಜಕುಮಾರ'

ಶೀರ್ಷಿಕೆ ತಕ್ಕಂತೆ ಅಣ್ಣಾವ್ರ ಆದರ್ಶಗಳನ್ನ ಎತ್ತಿ ಹಿಡಿಯುವ 'ರಾಜಕುಮಾರ' ಅಣ್ಣಾವ್ರ ಕುಟುಂಬ ಸೇರಿದಂತೆ ಕನ್ನಡಿಗರ ಮನಗೆದ್ದಿದೆ.


English summary
Co-incidence between Puneeth Rajkumar starrer 'Raajakumara' and Dr.Rajkumar starrer 'Kasthuri Nivasa'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada