twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ರಾಜ್ ಕುಮಾರ್ ನೆನಪಲ್ಲಿ ಕಂಬಳ: ಕರೆಗಿಳಿದ ಕೋಣಗಳು!

    By ಮಂಗಳೂರು ಪ್ರತಿನಿಧಿ
    |

    ಕರಾವಳಿಯಲ್ಲಿ ಕಂಬಳ ಋತು ಆರಂಭವಾಗಿದೆ. ಮೊದಲ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಎಂಬಲ್ಲಿ ನಡೆಯುತ್ತಿದೆ. ಹೊಕ್ಕಾಡಿಗೋಳಿಯ ವೀರ-ವಿಕ್ರಮ ಕಂಬಳ ಕರೆಯಲ್ಲಿ ನೂರಾರು ಜೋಡಿ ಕೋಣಗಳು ಪ್ರತಿಷ್ಠಿತ ಕಂಬಳ ಸ್ಪರ್ಧೆಯಲ್ಲಿ ಸೆಣಸಾಟ ನಡೆಸುತ್ತಿವೆ. ಅದರಲ್ಲೂ ಈ ಬಾರಿ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಕೋಣಗಳು ಸ್ಪರ್ಧೆಗೆ ಇಳಿದಿವೆ. ಮರೋಡಿ ಕೃಷ್ಣ ಕೋಟ್ಯಾನ್ ನೇತೃತ್ವದಲ್ಲಿ ಕಂಬಳ ಕೋಣಗಳು ಸ್ಪರ್ಧೆಗೆ ಇಳಿದಿವೆ.

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳು ಕಳೆದಿದ್ದು ಅವರಿಲ್ಲದ ನೋವು ಇನ್ನೂ ಮಾಸಿಲ್ಲ. ಹೀಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಅಪ್ಪುವಿನ ನೆನಪನ್ನು ಮತ್ತಷ್ಟು ಜೀವಂತವಾಗೀಡುವುದಕ್ಕೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂದುವರಿದ ಭಾಗವಾಗಿ ಮಂಗಳೂರಿನ ಕಂಬಳದಲ್ಲೂ ಪುನೀತ್ ರಾಜ್‌ಕುಮಾರ್ ಹೆಸರು ಕೇಳಿಬಂದಿದೆ.

    ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಓಟಕ್ಕಿಳಿದ ಕೋಣಗಳು

    ತೋಡಾರ್ ಪಂಚಶಕ್ತಿ ಪಾಂಡು, ಕರ್ನಿರೆ ಬೈಲು ಮನೆ ಚಂದು ಎಂಬ ಹೆಸರಿನ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ರೇಸ್‌ಗೆ ಇಳಿದಿದೆ. ಈ ಎರಡು ಕೋಣಗಳು ಕಂಬಳ ಓಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಮೊದಲ ಕಂಬಳದಲ್ಲಿ ಬೆಂಗಳೂರು ದೊಡ್ಮನೆ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಈ ಬಾರಿ ಓಟಕ್ಕಿಳಿದಿದೆ.

    Coastal Karnataka Kambala in the name of Puneeth Rajkumar

    ನೋಣೇಲು ಗುತ್ತು ರಶ್ಮಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ನಡೆಯುತ್ತಿದ್ದು, ಕರಾವಳಿಗಲ್ಲಿ ಕಂಬಳ ಋತು ಆರಂಭವಾಗೋದು ಈ ಕಂಬಳದ ಮೂಲಕ ಅನ್ನೋದು ವಿಶೇಷವಾಗಿದೆ. ಮೊದಲ ಕಂಬಳಕ್ಕೆ ದಕ್ಷಿಣ ಕನ್ನಡ, ಉಡುಪಿ ಭಾಗಗಳಿಂದ 200ಕ್ಕೂ ಅಧಿಕ ಜೋಡಿಗಳು‌ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಎಲ್ಲಾ ಕೋಣಗಳ ಪೈಕಿ ಈ ಅಪ್ಪು ಹೆಸರಿನ ಜೋಡಿ ಕಂಬಳ ಪ್ರಿಯರನ್ನು ಆಕರ್ಷಿಸಿದೆ. ಕಂಬಳ ಪ್ರತಿಷ್ಠೆಯ ಕಣವಾಗಿದ್ದು,ಇಲ್ಲಿ ಹಲವು ಮನೆತನಗಳು ಹೆಸರಿಗಾಗಿ ಕೋಣಗಳನ್ನು ಓಡಿಸುತ್ತವೆ. ಯಾವ ಹೆಸರಿನ ಕೋಣಗಳು ಕಂಬಳದಲ್ಲಿ ವಿಜಯಶಾಲಿಗಳಾಗುತ್ತದೋ ಆ ಯಶಸ್ಸು ಕೋಣ ಹಾಗೂ ಸಾಕಿದ ಮನೆತನಕ್ಕೆ ಸಲ್ಲುತ್ತದೆ. ಹೀಗಾಗಿ ಕಂಬಳ ಒಂದು ಪ್ರತಿಷ್ಟೆಯ ಕಣವಾಗಿದೆ. ಈ ಬಾರಿ ಮೊದಲ ಕಂಬಳ ನವೆಂಬರ್27 ಮತ್ತು 28ರಂದು ನಡೆಯ ಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಕಂಬಳ ಒಂದು ವಾರ ತಡವಾಗಿ ಆರಂಭವಾಗಿದೆ.

    Coastal Karnataka Kambala in the name of Puneeth Rajkumar

    ಎಲ್ಲೆಲ್ಲಿ ಯಾವಾಗ ಪ್ರತಿಷ್ಟಿತ ಕಂಬಳ ನಡೆಯಲಿದೆ?

    ಡಿಸೆಂಬರ್ 5 ರಿಂದ ಮಾರ್ಚ್ 26ರವರೆಗೆ ದಕ್ಷಿಣ ಕನ್ನಡ-ಉಡುಪಿ-ಮತ್ತು ಕಾಸರಗೋಡು ಭಾಗದಲ್ಲಿ ಕಂಬಳ ಕೂಟ ನಡೆಯಲಿದೆ. ಡಿ.5 ರಂದು ಹೊಕ್ಕಾಡಿಗೋಳಿ ಯಲ್ಲಿ ಪ್ರಥಮ ಕಂಬಳ ನಡೆದರೆ, ಡಿ.11 ಶನಿವಾರ ಮೂಡಬಿದಿರೆ ನಡೆಯಲಿದೆ. ಡಿ.18ರ ಶನಿವಾರ ಮಿಯಾರ್ ಕಂಬಳ, ಡಿ.19ರ ಆದಿತ್ಯವಾರ ಬಳ್ಳಮಂಜ ಕಂಬಳ, ಡಿ.26ರ ಆದಿವಾರ ಮುಲ್ಕಿ ಅರಸು ಕಂಬಳ, ಜನವರಿ 1ರ ಶನಿವಾರ ಕಕ್ಕೆ ಪದವು ಕಂಬಳ, ಜನವರಿ 8ರ ಶನಿವಾರ ಅಡ್ವೆ ಕಂಬಳ, ಜನವರಿ 15ರ ಶನಿವಾರ ಪುತ್ತೂರು ಕಂಬಳ, ಜನವರಿ 22ರ ಶನಿವಾರ ಮಂಗಳೂರು ಕಂಬಳ,ಜನವರಿ 29 ಶನಿವಾರ ಐಕಳಬಾವ ಕಂಬಳ, ಫೆಬ್ರವರಿ 5ರ ಶನಿವಾರ ಬಾರಾಡಿ ಬೀಡು ಕಂಬಳ, ಫೆಬ್ರವರಿ 13ರ ಆದಿ‌ ಜಪ್ಪಿನ ಮೊಗರು ಕಂಬಳ, ಫೆಬ್ರವರಿ 19ರ ಶನಿವಾರ ವಾಮಂಜೂರು ಕಂಬಳ, ಫೆಬ್ರವರಿ 26ರ ಶನಿವಾರ ಕಾಸರಗೋಡು ವಿನ ಪೈವಳಿಕೆ ಕಂಬಳ, ಮಾರ್ಚ್ 5ರ ಶನಿವಾರ ವೇಣೂರು ಕಂಬಳ, ಮಾರ್ಚ್ 12ರ ಶನಿವಾರ ಉಪ್ಪಿನಂಗಡಿ ಕಂಬಳ, ಮಾರ್ಚ್ 19 ರ ಶನಿವಾರ ಕಟಪಾಡಿ ಕಂಬಳ, ಮಾರ್ಚ್ 26ರ ಶನಿವಾರ ಬಂಗಾಡಿ ನಡೆಯಲಿದೆ.

    ಪರಮಾತ್ಮ ಸಿನಿಮಾದಲ್ಲೂ ಇತ್ತು ಕೆಸರು ಗದ್ದೆ ಓಟ

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾಗಳಿಗೂ ಕರಾವಳಿ ನಂಟಿದೆ. ಯೋಗ್‌ರಾಜ್ ಭಟ್ ನಿರ್ದೇಶಿಸಿದ್ದ 'ಪರಮಾತ್ಮ' ಸಿನಿಮಾದ ಒಂದು ದೃಶ್ಯದಲ್ಲಿ ನಾಯಕಿಯನ್ನು ಪುನೀತ್ ಹೆಗಲ ಮೇಲೆ ಹೊತ್ತಿಕೊಂಡು ಕೆಸರು ಗದ್ದೆಯಲ್ಲಿ ಓಡುವ ದೃಶ್ಯವಿತ್ತು. ಅದೇ ಕೆಸರು ಗದ್ದೆಯಲ್ಲಿ ಸಾಹಸ ದೃಶ್ಯವನ್ನೂ ಇಡಲಾಗಿತ್ತು.

    English summary
    In the memory of puneeth rajkumar famous Kambala has started in Coastal Karnataka.
    Monday, December 6, 2021, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X