For Quick Alerts
  ALLOW NOTIFICATIONS  
  For Daily Alerts

  ಕಾಫಿನಾಡು ಚಂದುವನ್ನು ಅಡ್ಡಗಟ್ಟಿ ನಿಂದನೆ: ವಿಡಿಯೋ ವೈರಲ್

  |

  ಸಾಮಾಜಿಕ ಜಾಲತಾಣ ಸೆನ್ಸೇಶನ್ ಕಾಫಿನಾಡು ಚಂದುವನ್ನು ತಿಳಿಯದ ಕರ್ನಾಟಕದ ನೆಟ್ಟಿಗರು ಕಡಿಮೆ. ಅತ್ಯಂತ ಕಡಿಮೆ ಅವಧಿಯಲ್ಲಿ ಬಹುದೊಡ್ಡ ಜನಪ್ರಿಯತೆಯನ್ನು ಕಾಪಿನಾಡು ಚಂದು ಪಡೆದುಕೊಂಡಿದ್ದಾರೆ.

  ಕಾಪಿನಾಡು ಚಂದು ಅದೆಷ್ಟು ಜನಪ್ರಿಯರಾಗಿದ್ದಾರೆಂದರೆ ಅವರ ಆರಾಧ್ಯ ದೈವ ನಟ ಶಿವರಾಜ್ ಕುಮಾರ್ ಅವರ ಇನ್‌ಸ್ಟಾಗ್ರಾಂ ಫಾಲೋವರ್‌ಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಫಾಲೋವರ್‌ಗಳನ್ನು ಚಂದು ಹೊಂದಿದ್ದಾರೆ.

  ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ

  ಭಾರಿ ಸಂಖ್ಯೆಯ ಅಭಿಮಾನಿಗಳನ್ನು, ಜನಪ್ರಿಯತೆಯನ್ನು ಗಳಿಸಿರುವ ಕಾಪಿನಾಡು ಚಂದು ಇದರಿಂದ ಸಾಕಷ್ಟು ಕಿರಿ-ಕಿರಿ, ಅಸೂಯೆ ತುಂಬಿದ ನಿಂದನೆಗಳನ್ನೂ ಸಹ ಅನುಭವಿಸುತ್ತಿದ್ದಾರೆ.

  ಇದೀಗ ಕಾಫಿನಾಡು ಚಂದು ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಕೆಲವರು ಕಾಫಿನಾಡು ಚಂದುಗೆ ಕಿರಿಕಿರಿ ಉಂಟುಮಾಡುತ್ತಿರುವ ದೃಶ್ಯವಿದೆ. ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವ ಕಾಫಿನಾಡು ಚಂದುವನ್ನು ಅಡ್ಡಗಟ್ಟಿದ ಕೆಲವರು ಲೈವ್ ಹೋಗುವಂತೆ ಬಲವಂತ ಮಾಡಿದ್ದಾರೆ. ಆದರೆ ತಾನು ಈಗ ಕೆಲಸದಲ್ಲಿದ್ದು, ಸಂಜೆ ನಾಲ್ಕು ಗಂಟೆ ಮೇಲಷ್ಟೆ ಅದನ್ನೆಲ್ಲ ಮಾಡುವುದಾಗಿ ಹೇಳಿದ್ದಾರೆ.

  ಕಾಫಿನಾಡು ಚಂದುವಿನ ಈ ಉತ್ತರದಿಂದ ಸಮಾಧಾನಗೊಳ್ಳದ ಅವರು ''ಏನೋ ನಿನಗೆ ಚಿಕ್ಕಮಗಳೂರಿನವರ್ಯಾರು ಬೇಡವೇನೊ?'' ಎಂದಿದ್ದಾರೆ. ಅದಕ್ಕೆ ಕಾಫಿನಾಡು ಚಂದು, ''ನಾನೀಗ ಬಾಡಿಗೆ ಹೊಡೆಯಲು ಬಂದಿರೋದು. ನೀವ್ಯಾಕೆ ಹಾಡು ಮಾಡಿಕೊಡು ಎಂದು ಕೇಳಿದ್ದು? ಅದೆಲ್ಲ ಈಗ ಆಗಲ್ಲ ನಾಲ್ಕು ಗಂಟೆಗೆ ಎಂದು ಹೇಳಿರುವುದು'' ಎಂದಿದ್ದಾರೆ. ಅದಕ್ಕೆ ಆ ಅಗಂತುಕ ಚಂದುವನ್ನು ಕೆಟ್ಟದಾಗಿ ನಿಂದಿಸಿ, ''ಅಪಾಯ್ಮೆಂಟ್ ತೆಗೆದುಕೊಂಡು ಬರಬೇಕೇನೋ ನಿನ್ನ ಹತ್ರ'' ವಿಡಿಯೋದಲ್ಲಿ ಸೆರೆಯಾಗಿದೆ.

  ಕಾಫಿನಾಡು ಚಂದು ಈ ಮೊದಲೇ ವಿಡಿಯೋ ಒಂದರಲ್ಲಿ, ತಾನು ಜೀವನ ನಿರ್ವಹಣೆಗೆ ಆಟೋ ಓಡಿಸುತ್ತಿರುವುದಾಗಿಯೂ, ಹಾಡು ಮಾಡುವುದು, ಬರ್ತ್‌ಡೇ ವಿಶ್ ಮಾಡುವುದು ನಾಲ್ಕು ಗಂಟೆಯ ಮೇಲೆ ಮಾತ್ರವೇ ಮಾಡುವುದಾಗಿ ಹೇಳಿದ್ದರು. ಆದರೆ ಕೆಲವರು ಬಲವಂತದಿಂದ ತಮಗೆ ಹಾಡು ಮಾಡುವಂತೆ, ತಮ್ಮ ಜೊತೆ ವಿಡಿಯೋ ಮಾಡುವಂತೆ ಕಾಫಿನಾಡು ಚಂದುವನ್ನು ಒತ್ತಾಯಿಸುತ್ತಿರುತ್ತಾರೆ.

  English summary
  Social media sensation Coffeenadu Chandu faced abuse from stranger video went viral on social media.
  Tuesday, August 23, 2022, 23:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X