For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಗೆ 22 ಕ್ಯಾರೆಟ್ ಬಂಗಾರದ ನಾಣ್ಯದ ಗೌರವ

  |

  ಡಾ.ರಾಜ್ ಕುಮಾರ್ ಅವರ ಅಪರಿಮಿತ ಸೇವೆಗೆ ಕಲೆಕ್ಟಿಬಲ್ ಮಿಂಟ್ ಕಂಪನಿ ಅಣ್ಣಾವ್ರಿಗೆ 22 ಕ್ಯಾರೆಟ್ ಬಂಗಾರದ ಗೌರವ ಸಲ್ಲಿಸಿದ್ದಾರೆ. ಡಾ.ರಾಜ್ ಕುಮಾರ್ ಕುಟುಂಬದ ಅನುಮತಿ ಪಡೆದು, ಕಲೆಕ್ಟಿಬಲ್ ಮಿಂಟ್ ಕಂಪನಿ ಅಣ್ಣಾವ್ರ ಚಿತ್ರಗಳಿರುವ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಮುದ್ರಿಸಿದೆ.

  ಅಣ್ಣಾವ್ರ ಚಿತ್ರವಿರುವ ನಾಣ್ಯದಲ್ಲಿ ಡಾ.ರಾಜ್ ಕುಮಾರ್ ಎಂದು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ. 25 ಗ್ರಾಂಗಳಲ್ಲಿ ಚಿನ್ನದ ನಾಣ್ಯ ತಯಾರಾಗಿದೆ. ಆಕರ್ಷಕವಾಗಿರುವ ನಾಣ್ಯಗಳು ಎಲ್ಲರ ಗಮನ ಸೆಳೆಯುತ್ತಿವೆ. ಕರ್ನಾಟಕದ ಅಪ್ಪಟ ಬಂಗಾರದ ಮನುಷ್ಯನಿಗೆ ಬಂಗಾರದ ಗೌರವ ಸಲ್ಲಿಸಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

  ಅಪರೂಪದ ಫೋಟೋ: ಒಂದೇ ವೇದಿಕೆಯಲ್ಲಿ ಮೂರು ಹಿಟ್ ಚಿತ್ರಗಳ ಸಕ್ಸಸ್ ಕಾರ್ಯಕ್ರಮ

  ವರನಟ ಡಾ.ರಾಜ್ ಎಲ್ಲರಿಗೂ ಮಾದರಿ. ಈಗಾಗಲೇ ಅಣ್ಣಾವ್ರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಪಾಲ್ಕೆ, ಪದ್ಮ ಭೂಷಣ, ಕರ್ನಾಟಕ ರತ್ನ, ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಸಾಕಷ್ಟು ಪುಸ್ಥಳಿ, ರಾಜ್ ಕುಮಾರ್ ರಸ್ತೆ, ಸರ್ಕಲ್ ಗಳಿವೆ ಇದೀಗ ನಾಣ್ಯದ ಗೌರವ ಸಿಕ್ಕಿದೆ.

  Rocking Star Yash son, ಅಪ್ಪ-ಮಗನ ಕ್ಯೂಟ್ ವಿಡಿಯೋ ರಾಧಿಕಾ ಪಂಡಿತ್ | Filmibeat Kannada

  ಡಾ.ರಾಜ್ ಕುಮಾರ್ ಚಿನ್ನದ ನಾಣ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಲವು ದಿನಗಳಿಂದ ಮುತುವರ್ಜಿವಹಿಸಿ ಕಲೆಕ್ಟಿಬಲ್ ಮಿಂಟ್ ಕಂಪನಿ ಈ ನಾಣ್ಯಗಳನ್ನು ತಯಾರಿಸಿದೆ.

  English summary
  Collectible Mint Released Dr Rajkumar Gold and Silver Coins in Bengaluru. Dr Rajkumar Coins goes viral in Social meda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X