ವಿಡಿಯೋ : 'ಕಾಲೇಜ್ ಕುಮಾರ್' ಸಿನಿಮಾ ಟ್ರೇಲರ್ ಬಿಡುಗಡೆ
'ಕಾಲೇಜ್ ಕುಮಾರ್' ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಟ್ರೇಲರ್ ಮೊದಲ ನೋಟದಲ್ಲಿಯೇ ಇಷ್ಟ ಆಗುವಂತ್ತಿದ್ದು, ಚಿತ್ರದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.
ಟ್ರೇಲರ್ ನಲ್ಲಿ ತುಂಬ ಇಷ್ಟ ಆಗುವುದು ರವಿಶಂಕರ್. ಕಾಲೇಜ್ ಕುಮಾರನ ತಂದೆ ಪಾತ್ರ ಮಾಡಿರುವ ರವಿಶಂಕರ್ ಲುಕ್ ಮತ್ತು ಅವರ ಅಭಿನಯ ಸೂಪರ್ ಆಗಿದೆ. ಟ್ರೇಲರ್ ಒಂದು ಪಕ್ಕಾ ಕಮರ್ ಶಿಯಲ್ ಸಿನಿಮಾದ ಫೀಲ್ ನೀಡಿದೆ.

'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ಇಲ್ಲಿ ಕಾಲೇಜ್ ಕುಮಾರನಾಗಿದ್ದಾರೆ. ಖಡಕ್ ಹುಡುಗಿಯಾಗಿ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಲೆಮಾರಿ ಸಂತು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದಲ್ಲಿದೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೃತಿ, ಸಾಧು ಕೋಕಿಲ ಸಿನಿಮಾದಲ್ಲಿ ನಟಿಸಿದ್ದಾರೆ.
English summary
Watch video : 'College Kumar' kannada movie trailer out. 'ಕಾಲೇಜ್ ಕುಮಾರ್' ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.


Click it and Unblock the Notifications