»   » ಬಿ ಟೌನ್ 'ಪದ್ಮಾವತಿ'ಯನ್ನು ಹಿಂದಿಕ್ಕಿದ ಕನ್ನಡದ 'ಕಾಲೇಜ್ ಕುಮಾರ್'!

ಬಿ ಟೌನ್ 'ಪದ್ಮಾವತಿ'ಯನ್ನು ಹಿಂದಿಕ್ಕಿದ ಕನ್ನಡದ 'ಕಾಲೇಜ್ ಕುಮಾರ್'!

Posted By:
Subscribe to Filmibeat Kannada
ಬಿ ಟೌನ್ 'ಪದ್ಮಾವತಿ'ಯನ್ನು ಹಿಂದಿಕ್ಕಿದ ಕನ್ನಡದ 'ಕಾಲೇಜ್ ಕುಮಾರ್'! | Filmibeat Kannada

ಯೂಟ್ಯೂಬ್ ನಲ್ಲಿ ಈಗೀಗ ಕನ್ನಡ ಸಿನಿಮಾಗಳದ್ದೇ ಹವಾ ಆಗಿದೆ. ಇದೀಗ ಕನ್ನಡ ಚಿತ್ರದ ಪವರ್ ಎಂತಹುದು ಎಂಬುದನ್ನು 'ಕಾಲೇಜ್ ಕುಮಾರ್' ಸಾಬೀತು ಮಾಡಿದೆ.

ವಿಡಿಯೋ : 'ಕಾಲೇಜ್ ಕುಮಾರ್' ಸಿನಿಮಾ ಟ್ರೇಲರ್ ಬಿಡುಗಡೆ

ಅಕ್ಟೋಬರ್ 25ಕ್ಕೆ ರಿಲೀಸ್ ಆಗಿದ್ದ 'ಪದ್ಮಾವತಿ' ಚಿತ್ರದ ಹಾಡು ಯೂಟ್ಯೂಬ್ ನಲ್ಲಿ ನಂ.1 ಸ್ಥಾನದಲ್ಲಿ ಇತ್ತು. ಆದರೆ 'ಕಾಲೇಜ್ ಕುಮಾರ್' ಚಿತ್ರದ ಟ್ರೇಲರ್ ಈಗ ಅದನ್ನು ಹಿಂದಿಕ್ಕಿದೆ. ಸದ್ಯ ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ವಿಡಿಯೋ ಆಗಿ 'ಕಾಲೇಜ್ ಕುಮಾರ್' ಟ್ರೇಲರ್ ಇದೆ.

'College Kumar' trailer no 1 trending in youtube

ಅಂದಹಾಗೆ, 'ಕೆಂಡಸಂಪಿಗೆ' ಖ್ಯಾತಿಯ ವಿಕ್ಕಿ ಇಲ್ಲಿ 'ಕಾಲೇಜ್ ಕುಮಾರ'ನಾಗಿದ್ದಾರೆ. ಖಡಕ್ ಹುಡುಗಿಯಾಗಿ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು 'ಅಲೆಮಾರಿ' ಸಂತು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದಲ್ಲಿದೆ.

ಟ್ರೇಲರ್ ನಲ್ಲಿ ತುಂಬ ಇಷ್ಟ ಆಗುವುದು ರವಿಶಂಕರ್. 'ಕಾಲೇಜ್ ಕುಮಾರ'ನ ತಂದೆ ಪಾತ್ರ ಮಾಡಿರುವ ರವಿಶಂಕರ್ ಲುಕ್ ಮತ್ತು ಅವರ ಅಭಿನಯ ಸೂಪರ್ ಆಗಿದೆ. ಟ್ರೇಲರ್ ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾದ ಫೀಲ್ ನೀಡಿದೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೃತಿ, ಸಾಧು ಕೋಕಿಲ ಸಿನಿಮಾದಲ್ಲಿ ನಟಿಸಿದ್ದಾರೆ.

English summary
'College Kumar' Kannada movie trailer is NO.1 trending in YouTube. 'ಕಾಲೇಜ್ ಕುಮಾರ್' ಸಿನಿಮಾದ ಟ್ರೇಲರ್ ಯೂ ಟ್ಯೂನಲ್ಲಿ ನಂ 1 ಟ್ರೆಂಡಿಂಗ್ ವಿಡಿಯೋ ಆಗಿದೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada