»   » ತೆಲುಗು-ತಮಿಳಿನಲ್ಲೂ ಮಿಂಚಲಿದ್ದಾನೆ 'ಕಾಲೇಜ್ ಕುಮಾರ'.!

ತೆಲುಗು-ತಮಿಳಿನಲ್ಲೂ ಮಿಂಚಲಿದ್ದಾನೆ 'ಕಾಲೇಜ್ ಕುಮಾರ'.!

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada

ಕಳೆದ ವಾರವಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಕಾಲೇಜ್ ಕುಮಾರ' ಚಿತ್ರಕ್ಕೆ ಬೇಡಿಕೆ ಹೆಚ್ಚಿದ್ದು, ಬೇರೆ ಭಾಷೆಗಳಲ್ಲಿ ಮೂಡಿ ಬರಲು ಸಜ್ಜಾಗುತ್ತಿದೆ. ರಾಜ್ಯಾದ್ಯಂತ ಸೂಪರ್ ಸಕ್ಸಸ್ ಕಾಣುತ್ತಿರುವ 'ಕಾಲೇಜು ಕುಮಾರ್' ಚಿತ್ರವನ್ನ ಮುಂದಿನ ದಿನಗಳಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ಬಿಂಗ್ ಮಾಡಲಿದ್ದೇವೆ ಎಂದು ನಿರ್ದೇಶಕ ಸಂತು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕಾಲೇಜು ಕುಮಾರ್ ಸಂಪೂರ್ಣ ಕೌಟುಂಬಿಕ ಮನೋರಂಜನೆ ಚಿತ್ರವಾಗಿದ್ದು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. ಮುಂದಿನ ವಾರದಲ್ಲಿ ಆಸ್ಟ್ರೇಲಿಯಾ, ದೋಹ, ದುಬೈ, ಅಮೇರಿಕಾದಲ್ಲಿ ಬಿಡುಗಡೆಗೊಳಿಸಲಾಗುವುದು. ನಾಯಕ, ನಾಯಕಿಯ ಆರ್ಭಟವಿಲ್ಲದೆ ಎರಡು ತಲೆಮಾರಿನ ಕಥೆಯನ್ನು ನವಿರಾಗಿ ಹೆಣೆಯಲಾಗಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

college kumar' will dubbing in Telugu and Tamil

''ಮಗನೇ ಅಪ್ಪನಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನಡೆಯುವ ಸನ್ನಿವೇಶವನ್ನು ಚಿತ್ರದಲ್ಲಿ ಮನಮುಟ್ಟುವಂತೆ ಮೂಡಿಸಲಾಗಿದೆ. ಅಪ್ಪನ ಪಾತ್ರಕ್ಕೆ ರವಿ ಶಂಕರ್ ಜೀವ ತುಂಬಿದ್ದಾರೆ, ಹಿರಿಯ ನಟಿ ಶೃತಿ, ನಾಯಕನಾಗಿ ವಿಕ್ಕಿ ತರುಣ್, ನಾಯಕಿಯಾಗಿ ಸಂಯುಕ್ತ ಹೆಗಡೆ, ಇತರೆ ತಾರಾಗಣದಲ್ಲಿ ಪ್ರಕಾಶ್ ಬೆಳವಾಡಿ, ಅಚ್ಯುತ ರಾವ್ ಅಭಿನಯಿಸಿದ್ದಾರೆ. 3 ಕೋಟಿ ರೂ ವೆಚ್ಚದಲ್ಲಿ ಚಿತ್ರ ಮೂಡಿದೆ ಎಂದು ಖುಷಿ ಹಂಚಿಕೊಂಡರು.

'ಕಾಲೇಜ್ ಕುಮಾರ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

college kumar' will dubbing in Telugu and Tamil

ಇನ್ನು ನಟ ರವಿಶಂಕರ್ ಮಾತನಾಡಿ ''ತಂದೆಯಾಗಿ ಮನೆಯಲ್ಲಿ ನಿರ್ವಹಿಸಿದ ಪಾತ್ರವನ್ನೇ ನಾನು ತೆರೆ ಮೇಲೆ ಮಾಡಿರುವ, ಕಾಮಿಡಿ, ಖಳನಟ ಪಾತ್ರಗಳಿಗೆ ಮೀಸಲಾಗಿದ್ದ ನನಗೆ ಚಿತ್ರದಲ್ಲಿ ಹೊಸ ರೂಪ ನೀಡಿದ್ದಾರೆ, ಈ ಪಾತ್ರದಲ್ಲಿ ಜನ ನನ್ನ ಒಪ್ಪಿಕೊಳ್ಳೋತ್ತಾರೋ ಇಲ್ಲವೋ ಎನ್ನುವ ಭಯ ಅಳುಕು ಬಿಡುಗಡೆಗೆ ಮುನ್ನಾ ಮೂಡಿತ್ತು, ಆದರೆ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದು ಹೊಸ ಚೈತನ್ಯ ಮೂಡಿದೆ. ಅನ್ಯ ಭಾಷೆ ಸಿನಿಮಾಗಳ ಮಟ್ಟಕ್ಕೆ ಕಾಲೇಜು ಕುಮಾರ್ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ತಿಳಿಸಿದರು.

English summary
Director Santhu said that, ‘college kumar' is going to be a big hit and will be dubbing for Telugu and Tamil languages in the coming days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada