ಪೈರಸಿಗೆ ಬಲಿಯಾಯ್ತು 'ಕಾಲೇಜ್ ಕುಮಾರ' ಸಿನಿಮಾ

By Pavithra

'ಕಾಲೇಜ್ ಕುಮಾರ' ಬಿಡುಗಡೆ ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ. ಚಿತ್ರದಲ್ಲಿನ ಕಥೆ ಮತ್ತು ಕಲಾವಿದರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದರು. ಈ ಚಿತ್ರ ಕಳೆದ ತಿಂಗಳು ನವೆಂಬರ್ 20 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಆದರೆ ಇನ್ನೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ 'ಕಾಲೇಜ್ ಕುಮಾರ' ಸಿನಿಮಾದ ಸಂಪೂರ್ಣ ಕಾಪಿ ಇದೀಗ ಆನ್ ಲೈನ್ ನಲ್ಲಿ ಬಿಡುಗಡೆಯಾಗಿದೆ.

ಕನ್ನಡ ಚಿತ್ರಗಳನ್ನು ಥಿಯೇಟರ್ ಗಳಿಗೆ ಬಂದು ನೋಡುವ ಜನರ ಸಂಖ್ಯೆ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಥಿಯೇಟರ್ ನಲ್ಲಿ ರೆಕಾರ್ಡ್ ಮಾಡಿರುವ ಚಿತ್ರವನ್ನು ಯೂಟ್ಯೂಬ್ ನಲ್ಲಿ ಅಪ್ಲೌಡ್ ಮಾಡಿದ್ದಾರೆ. ಈ ಬಗ್ಗೆ ಚಿತ್ರತಂಡಕ್ಕೆ ತಿಳಿದ ತಕ್ಷಣ ಸೈಬರ್ ಕ್ರೈಂ ನವರಿಂದ ಸಿನಿಮಾವನ್ನು ಯೂ ಟ್ಯೂಬ್ ನಿಂದ ತೆಗೆಸಿದ್ದಾರೆ.

'College kumara' kannada Movie leaked in online.

ಐವತ್ತು ದಿನ ಪೂರೈಸಿರುವ 'ಕಾಲೇಜ್ ಕುಮಾರ' ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ರಿಮೇಕ್ ಆಗುವ ಸಾಧ್ಯತೆಗಳಿವೆ. ಇನ್ನು ಅಲೆಮಾರಿ ಸಂತು ಚಿತ್ರವನ್ನು ನಿರ್ದೇಶನ ಮಾಡಿದ್ದು 'ಕೆಂಡಸಂಪಿಗೆ' ಚಿತ್ರ ಖ್ಯಾತಿಯ ವಿಕ್ಕಿ ಚಿತ್ರಕ್ಕೆ ನಾಯಕ ನಟನಾಗಿ ಅಭಿನಯಿಸಿದ್ದರು. 'ಕಿರಿಕ್ ಪಾರ್ಟಿ' ಮೂಲಕ ಫೇಮಸ್ ಆಗಿದ್ದ ನಟಿ ಸಂಯುಕ್ತ ಹೆಗ್ಡೆ, ರವಿಶಂಕರ್ ಮತ್ತು ಶೃತಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದರೊಂದಿಗೆ ಕಳೆದ ವಾರದಿಂದ ಅನೇಕ ಥಿಯೇಟರ್ ಗಳಲ್ಲಿ 'ಕಾಲೇಜ್ ಕುಮಾರ' ಸಿನಿಮಾ ಮರು ಪ್ರದರ್ಶನ ಕಾಣುತ್ತಿದೆ.

More from Filmibeat

English summary
Kannada actor Vicky and Samyuktha Hegde starrer kannada movie 'College kumara' leaked in online. 'College Kumara' film was released in November 10th (2017), the film directed by Alemari Santhu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X