For Quick Alerts
  ALLOW NOTIFICATIONS  
  For Daily Alerts

  ತಮಿಳಿನಲ್ಲಿ ಕಾಲೇಜ್ ಕುಮಾರ್ ರೀಮೇಕ್, ಹೀರೋ ಯಾರು?

  |

  2017ರಲ್ಲಿ ತೆರೆಕಂಡಿದ್ದ ಕಾಲೇಜ್ ಕುಮಾರ ಸಿನಿಮಾ ತಮಿಳಿನಲ್ಲಿ ಅದೇ ಹೆಸರಿನಲ್ಲಿ ರೀಮೇಕ್ ಆಗ್ತಿದೆ. ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ಹಾಗೂ ರವಿಶಂಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಎರಡು ವರ್ಷದ ನಂತರ ಕಾಲಿವುಡ್ ನಲ್ಲಿ ಸೆಟ್ಟೇರುತ್ತಿದೆ.

  ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಸಂತೋಷ್ ತಮಿಳಿನಲ್ಲೂ ಆಕ್ಷನ್ ಕಟ್ ಹೇಳುತ್ತಿದ್ದು, ರಾಹುಲ್ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನು ರವಿಶಂಕರ್ ಮಾಡಿದ್ದ ಪಾತ್ರದಲ್ಲಿ ಹಿರಿಯ ನಟ ಪ್ರಭು ಕಾಣಿಸಿಕೊಳ್ಳುತ್ತಿದ್ದಾರೆ.

  ಶ್ರುತಿ ನಿರ್ವಹಿಸಿದ್ದ ಪಾತ್ರವನ್ನ ಮಧುಬಾಲ ನಿಭಾಯಿಸುತ್ತಿದ್ದು, ವಿಶೇಷ ಪಾತ್ರದಲ್ಲಿ ಮನೋಬಾಲ ಕೂಡ ಇರಲಿದ್ದಾರೆ. ಇನ್ನು ಪ್ರಿಯಾ ಎಂಬ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹೀರೋಯಿನ್ ಆಗಿದ್ದರು.

  ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್ ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

  ಕನ್ನಡ ಚಿತ್ರವನ್ನ ನಿರ್ದೇಶನ ಮಾಡಿದ್ದ ಪದ್ಮನಾಭನ್ ಅವರೇ ತಮಿಳಿನಲ್ಲೂ ಕೂಡ ಸಿನಿಮಾ ಮಾಡ್ತಿದ್ದು, ವಿದ್ಯಾಧರನ್ ಸಂಭಾಷಣೆ ಬರೆಯುತ್ತಿದ್ದಾರೆ. ಏಪ್ರಿಲ್ 14 ರಂದು ತಮಿಳು ಕಾಲೇಜ್ ಕುಮಾರ ಚಿತ್ರದ ಮುಹೂರ್ತ ನಡೆಯಲಿದೆ.

  ಅಪ್ಪ ಅಮ್ಮನ ಆಸೆಯನ್ನ ಪೂರೈಸದ ಮಗ, ತಂದೆಗೆ ಸವಾಲು ಹಾಕಿ ದುಡಿಮೆಯತ್ತ ಮುಖ ಮಾಡುತ್ತಾನೆ. ಆಸೆ, ಕನಸುಗಳನ್ನ ಬೇರೆ ಯಾರೂ ಪೂರ್ತಿ ಮಾಡಲು ಸಾಧ್ಯವಿಲ್ಲ. ನಮ್ಮ ಕನಸನ್ನ ನಾವೇ ಗೆಲ್ಲಬೇಕು ಎನ್ನುವ ಸತ್ಯ ತಿಳಿದ ನಂತರ ಜೀವನಕ್ಕಾಗಿ ಏನು ಮಾಡ್ತಾನೆ.? ಅಪ್ಪ-ಅಮ್ಮನ ಆಸೆಯನ್ನ ಯಾವ ರೀತಿಯಲ್ಲಿ ಪೂರೈಸುತ್ತಾನೆ ಎನ್ನುವುದು ಕಥೆ.

  English summary
  Alemari Santhu (Hari Santhosh) remaking his Kannada film College Kumara in Tamil as College Kumar. Prabhu to reprise the role of Ravi Shankar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X