For Quick Alerts
  ALLOW NOTIFICATIONS  
  For Daily Alerts

  ಜೂನ್ ತಿಂಗಳು 'ಸೂಪರ್' ತಿಂಗಳು!

  By Pavithra
  |

  ಎರಡು ವರ್ಷ ಪೂರೈಸುವ ಸಂಭ್ರಮದಲ್ಲಿರುವ ಕಲರ್ಸ್ ಸೂಪರ್ ಚಾನೆಲ್, ಆ ಖುಷಿಯಲ್ಲಿ ಮನರಂಜನೆಯ ಮಹಾಪೂರವನ್ನೇ ಹೊತ್ತು ತರುತ್ತಿದೆ. ಮನೆ ಮಂದಿಯನ್ನ ನಲಿಸಿ ರಂಜಿಸುವ ಆಸೆಯಿಂದ ಎಂಟು ವಿಭಿನ್ನ ಕಾರ್ಯಕ್ರಮಗಳನ್ನು ಆರಂಭಿಸುತ್ತಿದೆ.

  ಜೂನ್ ತಿಂಗಳಲ್ಲಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನ ವೀಕ್ಷಕರಿಗಾಗಿ ಆರಂಭಿಸುತ್ತಿದ್ದು ಧಾರಾವಾಹಿಯ ದಿಗ್ಗಜ ಟಿ ಎನ್ ಸೀತಾರಾಂ, ಬಿಗ್ ಬಾಸ್ ಚಂದನ್ ಶೆಟ್ಟಿ, ಸೇರಿದಂತೆ ಅನೇಕರ ಕಾರ್ಯಕ್ರಮಗಳು ಪ್ರಸಾರವಾಗಲಿದೆ.

  ಕಿರುತೆರೆಯಲ್ಲಿ ಟ್ರೇಂಡ್ ಸೆಟ್ ಮಾಡಿದ ಪಾಪ ಪಾಂಡು ಧಾರಾವಾಹಿ ಮತ್ತೆ ಬರುತ್ತಿದೆ. ಜೂನ್ ತಿಂಗಳಿಂದ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಸಂಭ್ರಮದ ಮಹಾಪೂರವೇ ವೀಕ್ಷಕರಿಗೆ ಸಿಗಲಿದೆ. ಯಾವೆಲ್ಲಾ ಧಾರಾವಾಹಿ, ಕಾರ್ಯಕ್ರಮಗಳು ಪ್ರಸಾರ ಆಗಲಿದೆ ಇಲ್ಲಿ ಸಂಪೂರ್ಣ ಮಾಹಿತಿ ಮುಂದೆ ಓದಿ

  ವೀಣಾಪಾಣಿ ಹೊಸ ಧಾರಾವಾಹಿ

  ವೀಣಾಪಾಣಿ ಹೊಸ ಧಾರಾವಾಹಿ

  ಶಾರದಾಂಬೆಯ ಭಕ್ತೆಯಾದ ಹುಡುಗಿಯೊಬ್ಬಳ ಬದುಕಿನ ಪಯಣ ಇದು. ಒಂದು ಮಹಿಮೆಯುಳ್ಳ ಕಲ್ಲಿನ ವೀಣೆಗೆ ಜೀವ ಭರಿಸಲು ಭಕ್ತಿಯಿಂದ ಸಾಧ್ಯವೇ? .ರೋಮಾಂಚಕ ನಿರೂಪಣೆಯುಳ್ಳ ಭಕ್ತಿ ಪ್ರಧಾನ ಧಾರಾವಾಹಿ ಇವಳೇ ವೀಣಾಪಾಣಿ

  ಬರುತ್ತಿದೆ ಕೃಷ್ಣವೇಣಿ ಹೊಸ ಕಥೆ

  ಬರುತ್ತಿದೆ ಕೃಷ್ಣವೇಣಿ ಹೊಸ ಕಥೆ

  ಅಪ್ಪ ಅಮ್ಮನ ಒಬ್ಬಳೇ ಮಗಳು ಬೆಣ್ಣೆ ಮುರುಕು ಸ್ಪೆಷಲಿಸ್ಟ್ ಕೃಷ್ಣವೇಣಿ. ಮದುವೆಯಾಗಿ ಹೋಗುತ್ತಿರುವುದು 33 ಜನರಿರುವ ಕೂಡು ಕುಟುಂಬಕ್ಕೆ, ಅಲ್ಲಿ ಅವಳು ಎದುರಿಸುವ ಸವಾಲುಗಳ ಚಿತ್ರಣವೇ ಮನೆಯೇ ಮಂತ್ರಾಲಯ ಒಂದು ಮನಕಲುಕುವ ಮನಕಲುಕುವ ಕೌಟುಂಬಿಕ ಧಾರಾವಾಹಿ ಜೂನ್ ತಿಂಗಳಿನಲ್ಲಿ

  ರಜೆ ಮುಗಿಸಿದ ಮಜಾ ಭಾರತ

  ರಜೆ ಮುಗಿಸಿದ ಮಜಾ ಭಾರತ

  ಸಣ್ಣ ಬ್ರೇಕ್ ಮುಗಿಸಿ ಮತ್ತೆ ಮಜಾ ಭಾರತ ತಂಡ ರೀ ಓಪನ್ ಆಗ್ತಾ ಇದೆ. ಈ ಸೀಸನ್ನಲ್ಲಿ ಹೊಸ ಸ್ಪರ್ಧಿಗಳು ಹೊಸ ತೀರ್ಪುಗಾರರ ಜೊತೆ ನಿಮಗೆ ಕಚಗುಳಿ ಇಡಲು ಬರುತ್ತಿದ್ದಾರೆ .

  ರಾಜ ರಾಣಿ ಹೊಸ ಧಾರಾವಾಹಿ

  ರಾಜ ರಾಣಿ ಹೊಸ ಧಾರಾವಾಹಿ

  ಕಾಲಿಟ್ಟಲ್ಲೆಲ್ಲ ಏನಾದರೊಂದು ಎಡವಟ್ಟಿಗೆ ಕಾರಣವಾಗುವ ಹುಡುಗಿ ಚುಕ್ಕಿ. ಈಗ ತನ್ನಕ್ಕನ ಮದುವೆಗೆ ಸಿದ್ಧತೆಯಲ್ಲಿದ್ದಾಳೆ. ಅವಳು ಅಲ್ಲಿ ಏನಾದರೂ ಎಡವಟ್ಟು ಮಾಡಿಕೊಳ್ಳುತ್ತಾಳಾ, ಅದರಿಂದ ಅವಳ ಬದುಕಿನ ದಿಕ್ಕು ಬದಲಾಗುತ್ತಾ, ಎನ್ನುವ ಕುತೂಹಲ ಕಥಾ ಹಂದರವಿರುವ ಧಾರಾವಾಹಿ ರಾಜ ರಾಣಿ .

  ಹೊಸ ಧಾರಾವಾಹಿ ಮಾಂಗಲ್ಯಂ ತಂತು ನಾನೇನಾ

  ಹೊಸ ಧಾರಾವಾಹಿ ಮಾಂಗಲ್ಯಂ ತಂತು ನಾನೇನಾ

  ಶ್ರಾವಣಿ ಅಂದರೆ ಅದೃಷ್ಟ ಎಲ್ಲ ವಿಷಯದಲ್ಲಿ ಅದೃಷ್ಟ ಪಡೆದಿರುವ ಇವಳಿಗೆ ಒಳ್ಳೆ ಗಂಡು ಮಾತ್ರ ಸಿಕ್ತಾ ಇಲ್ಲ .ಅವಳು ನಂಬಿದ ಸಿದ್ಧಿ ವಿನಾಯಕ ಕೊನೆಗೂ ಶ್ರಾವಣಿಗೆ ಮದುವೆಯನ್ನು ಮಾಡಿಸಿದ. ಆದರೆ ಅದು ಅವಳ ಬದುಕಲ್ಲೊಂದು ಬಿರುಗಾಳಿಯನ್ನೇ ಹೊತ್ತು ತಂದಿದೆ. ಈ ರೀತಿಯ ನಾನಾ ತಿರುವುಗಳನ್ನ ಹೊಂದಿರುವ ಧಾರಾವಾಹಿ ಮಾಂಗಲ್ಯಂ ತಂತು ನಾನೇನಾ.

  ಕೋಗಿಲೆಯನ್ನು ಹುಡುಕುತ್ತಿದ್ದಾರೆ ಚಂದನ್ ಶೆಟ್ಟಿ

  ಕೋಗಿಲೆಯನ್ನು ಹುಡುಕುತ್ತಿದ್ದಾರೆ ಚಂದನ್ ಶೆಟ್ಟಿ

  ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಮತ್ತು ಸೂಪರ್ ಚಾನೆಲ್ ನಡುವಿನ ಅನುಬಂಧ ಮತ್ತೆ ಮುಂದುವರಿದಿದೆ .ಸದ್ಯ ಮಾಸ್ಟರ್ ಡ್ಯಾನ್ಸ್ ಶೋ ನ ತೀರ್ಪುಗಾರರಾಗಿರುವ ಚಂದನ್ ಹೊಚ್ಚ ಹೊಸ ಹಾಡಿನ ಕಾರ್ಯಕ್ರಮ ಕನ್ನಡ ಕೋಗಿಲೆ ಮೂಲಕ ಮತ್ತೆ ನಿಮ್ಮ ಮುಂದೆ ಬರಲಿದ್ದಾರೆ .ಈ ಕಾರ್ಯಕ್ರಮವು ಕೂಡ ಜೂನ್ ತಿಂಗಳಿನಲ್ಲಿಯೇ ಆರಂಭವಾಗಲಿದೆ

  ಹೊಸ ಕತೆಯೊಂದಿಗೆ ಬಂದ್ರು ಟಿಎನ್ ಸೀತಾರಾಮ್

  ಹೊಸ ಕತೆಯೊಂದಿಗೆ ಬಂದ್ರು ಟಿಎನ್ ಸೀತಾರಾಮ್

  ಮಾಯಾಮೃಗ, ಮುಕ್ತ, ಮನ್ವಂತರ ಧಾರಾವಾಹಿಗಳ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲೇ ಹೊಸ ಮಾದರಿ ಹಾಕಿಕೊಟ್ಟ ನಿರ್ದೇಶಕ ಟಿಎನ್ ಸೀತಾರಾಂ ಸಣ್ಣದೊಂದು ಬ್ರೇಕ್ ನ ನಂತರ ಮತ್ತೆ ಟಿ ಎನ್ ಸೀತಾರಾಮ್ ಹೊಸ ಧಾರಾವಾಹಿಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ .

  ಪಾಪ ಪಾಂಡು ಕಮ್ ಬ್ಯಾಕ್

  ಪಾಪ ಪಾಂಡು ಕಮ್ ಬ್ಯಾಕ್

  ಅಳಿಸುವ ಅಳಿಸುವ ಧಾರಾವಾಹಿಗಳ ನಡುವೆ ಪ್ರೇಕ್ಷಕರ ನಕ್ಕು ನಲಿಸಿದ ಪಾಪಾ ಪಾಂಡು ಧಾರಾವಾಹಿ ಮತ್ತೆ ಬಂದಿದೆ .ಕಲರ್ಸ್ ಸೂಪರ್ ಚಾನೆಲ್ ನಲ್ಲಿ ನಿರ್ದೇಶಕ ಸಿಹಿಕಹಿ ಚಂದ್ರು ಶಾಲಿನಿ ಚಿದಾನಂದ್ ಇವರೆಲ್ಲರೂ ಮತ್ತೆ ವೀಕ್ಷಕರ ಮುಂದೆ ಬಂದು ನಗಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.

  Read more about: colors super tv
  English summary
  celebrations to its second-year anniversary early on, COLORS Super promises a plethora of entertainment by launching 8 new shows across genres, for wholesome family fun time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X