'ಮರಳಿ ಬಾ ಚಿರು...' ಎಂದು ಭಾವುಕರಾದ ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಒಂದು ವರ್ಷವಾಗುತ್ತಾ ಬಂತು. ಪತಿ ಇಲ್ಲದ ಜೀವನವನ್ನು ಮೇಘನಾಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿರು ನೆನೆದು ಆಗಾಗ ಭಾವುಕರಾಗುತ್ತಿರುತ್ತಾರೆ.

Recommended Video

ಚಿರು ಇಲ್ಲದ‌ ಸ್ಥಿತಿಗೆ ಭಾವುಕರಾಗಿ ಕಣ್ಣೀರು ತರಿಸುವ ಫೋಟೋ ಶೇರ್ ಮಾಡಿದ ಮೇಘನಾ ರಾಜ್ | Filmibeat Kannada

ಇದೀಗ ಮತ್ತೆ ಪತಿ ಚಿರು ನೆನೆಸಿಕೊಂಡು ಭಾವುಕರಾಗಿದ್ದಾರೆ. ಅಷ್ಟೆಯಲ್ಲ ಚಿರು ಜೊತೆ ಪ್ರವಾಸಕ್ಕೆ ಹೋದ ಜಾಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ನಗುತ್ತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸದೆ ಇರದು.

ಸುಂದರವಾದ ಹಳೆಯ ಫೋಟೋವನ್ನು ಹಂಚಿಕೊಂಡು, 'ಲವ್ ಯೂ ಚಿರು..ಮರಳಿ ಬಾ' ಎಂದು ಬರೆದು ಭಾವುಕರಾಗಿದ್ದಾರೆ. ಮೇಘನಾ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕ ಪನ್ನಗಾಭರಣ, ಅನು ಪ್ರಭಾಕರ್ ಹಾರ್ಟ್ ಇನೋಜಿ ಕಳುಹಿಸಿದ್ದಾರೆ.

Come back Chiru, Meghana Raj writes an Emotional post

ಮೇಘನಾ ಸದ್ಯ ಮುದ್ದಾದ ಮಗನ ಆರೈಕೆಯಲ್ಲಿದ್ದಾರೆ. ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಮೇಘನಾಗೆ ಜೂ.ಚಿರು ಸಂತೋಷವನ್ನು ಹೊತ್ತುಬಂದಿದ್ದಾನೆ. ಮಗನ ಜೊತೆ ಆಡುತ್ತಾ, ನಲಿಯುತ್ತಾ, ಆರೈಕೆ ಮಾಡುವ ಜೊತೆಗೆ ಪತಿಯ ನೆನಪು ಕೂಡ ಕಾಡದೆ ಇರಲ್ಲ.

ಇತ್ತೀಚಿಗೆ ಮಗನ 6 ತಿಂಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು. ಮೇಘನಾ ಮಗನಿಗೆ ಜೂ.ಚಿರು ಅಂತಾನೇ ಎಲ್ಲರೂ ಕರೆಯುತ್ತಿದ್ದಾರೆ. ಆದರೆ ಮುದ್ದಾದ ಮಗುವಿಗೆ ಏನು ಹೆಸರಿಡಬಹುದು ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ.

More from Filmibeat

English summary
'Come back Chiru', Meghana Raj writes an Emotional post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X