For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ 'ಸಲಾರ್‌' ಚಿತ್ರದಲ್ಲಿ 'ಉಪಾಧ್ಯಕ್ಷ' ? ವೈರಲ್ ಫೋಟೊ ಸೀಕ್ರೆಟ್ ಬಿಚ್ಚಿಟ್ಟ ಚಿಕ್ಕಣ್ಣ

  |

  ಹಾಸ್ಯನಟ ಚಿಕ್ಕಣ್ಣ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಟೈಟಲ್‌ನಿಂದಲೇ ಕುತೂಹಲ ಕೆರಳಿಸಿರುವ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾಹುಬಲಿ ಪ್ರಭಾಸ್‌ ಜೊತೆ ಚಿಕ್ಕಣ್ಣ ಕಾಣಿಸಿಕೊಂಡಿರುವ ಫೋಟೊವೊಂದು ಚಕ್ಕರ್ ಹೊಡೀತಿದೆ. ಇದನ್ನು ನೋಡಿ ಕೆಲವರು 'ಸಲಾರ್‌' ಚಿತ್ರದಲ್ಲಿ ಚಿಕ್ಕಣ್ಣ ನಟಿಸ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

  ಉಮಾಪತಿ ಶ್ರೀನಿವಾಸ್ ನಿರ್ಮಾಣದ 'ಉಪಾಧ್ಯಕ್ಷ' ಚಿತ್ರದಲ್ಲಿ ಚಿಕ್ಕಣ್ಣ ಹೀರೊ ಆಗಿ ನಟಿಸ್ತಿದ್ದಾರೆ. 'ದಿಲ್‌ವಾಲಾ' ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮಲೈಕಾ ವಸುಪಾಲ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶರಣ್ ನಟನೆಯ 'ಅಧ್ಯಕ್ಷ' ಚಿತ್ರದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷನಾಗಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದ್ದರು. ಇದೀಗ ಇಡೀ ಸಿನಿಮಾ ಕಾಮಿಡಿ ಕಚಗುಳಿ ಇಡಲು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಗರದ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು.

  ಅಪ್ಪು ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ದರ್ಶನ: ಒಟ್ಟು ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಗೊತ್ತಾ?ಅಪ್ಪು ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ದರ್ಶನ: ಒಟ್ಟು ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಗೊತ್ತಾ?

  ಪ್ರಭಾಸ್ ಜೊತೆ ಕಾಣಿಸಿಕೊಂಡಿರುವ ಫೋಟೊ ಬಗ್ಗೆ ನಟ ಚಿಕ್ಕಣ್ಣ ಫಿಲ್ಮಿಬೀಟ್‌ಗೆ ಮಾಹಿತಿ ಕೊಟ್ಟಿದ್ದಾರೆ. "ಇದು ಹೊಸ ಫೋಟೊ ಅಲ್ಲ. ಬಹಳ ಹಿಂದೆ ತೆಗೆಸಿಕೊಂಡಿದ್ದು. ಈಗ ಯಾರು ಇದನ್ನು ವೈರಲ್ ಮಾಡಿದರೋ ಗೊತ್ತಿಲ್ಲ. ನಾನು ಸದ್ಯ 'ಉಪಾಧ್ಯಕ್ಷ' ಚಿತ್ರದಲ್ಲಿ ನಟಿಸ್ತಿದ್ದೀನಿ ಅಷ್ಟೆ" ಎಂದು ಹೇಳಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಸಲಾರ್‌' ಸಿನಿಮಾ ನಿರ್ಮಾಣ ಆಗ್ತಿದೆ. ಪ್ರಶಾಂತ್‌ ನೀಲ್ ಸೇರಿದಂತೆ ಬಹುತೇಕ ಕನ್ನಡದ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ರೀತಿಯ ಗುಸುಗುಸು ಶುರುವಾಗಿರುವ ಸಾಧ್ಯತೆ ಇದೆ.

  ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್‌ ಸ್ಟಾರ್‌ಗಳ ಸಿನಿಮಾಗಳಲ್ಲಿ ಚಿಕ್ಕಣ್ಣ ಹಾಸ್ಯನಟರಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದೀಗ 'ಉಪಾಧ್ಯಕ್ಷ' ಸಿನಿಮಾ ಮೂಲಕ ಹೀರೊ ಆಗಿ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. 'ಅಧ್ಯಕ್ಷ' ಚಿತ್ರದ ಮುಂದುವರಿದ ಭಾಗ 'ಉಪಾಧ್ಯಕ್ಷ' ಎಂದು ಸಿನಿಮಾ ಮುಹೂರ್ತದ ದಿನ ಚಿತ್ರತಂಡ ಮಾಹಿತಿ ಕೊಟ್ಟಿತ್ತು. ಆ ಚಿತ್ರದ ಕಥೆ ನಿಂತಿತ್ತೋ, ಅಲ್ಲಿಂದ ಈ ಚಿತ್ರದ ಕಥೆ ಶುರುವಾಗುತ್ತದೆ.

  Comedian Chikkanna Clarification About Acting With Prabhas In Salaar Movie

  ಪಕ್ಕಾ ಕಾಮಿಡಿ ಎಂಟರ್‌ಟೈನರ್ ಸಿನಿಮಾ 'ಉಪಾಧ್ಯಕ್ಷ'. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತಹ ಕಾಮಿಡಿ ಚಿತ್ರದಲ್ಲಿ ಇದೆಯಂತೆ. ಭಾವನಾತ್ಮಕ ಸನ್ನಿವೇಶಗಳು ಕೂಡ ಇದೆ. ಮೈಸೂರಿನಲ್ಲಿ ಮನೆಯ ಸೆಟ್‌ ಹಾಕಿ ಭರ್ಜರಿ ಚಿತ್ರೀಕರಣ ನಡೆಸಲಾಗಿದೆ. ಬೆಂಗಳೂರು ಸುತ್ತಾಮುತ್ತಾ ಶೂಟಿಂಗ್ ಪ್ಲ್ಯಾನ್ ಇದೆ. ಶೀಘ್ರದಲ್ಲೇ ಶೂಟಿಂಗ್ ಮುಗಿಸಿ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ.

  English summary
  Comedian Chikkanna Clarification About Acting With Prabhas In Salaar Movie. Know More.
  Wednesday, September 7, 2022, 22:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X