twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪುಗಾಗಿ ಮಾಡಲು ಹೊರಟಿದ್ದ ಕಾರ್ಯರ್ಕ್ಕೆ ವಿಘ್ನ: ತನ್ನ ಕಾಯಕಕ್ಕೆ ಸ್ಟ್ಯಾಂಡಪ್ ಕಾಮಿಡಿಯನ್ ವಿದಾಯ!

    |

    ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫರೂಖಿ ಅವರು ಇನ್ನು ಮುಂದೆ ಕಾಮಿಡಿ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವೃತ್ತಿಗೆ ವಿದಾಯ ಹೇಳುವುದಾಗಿ ಫರೂಖಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

    ಫರೂಖಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದರು. ಇಂದು (ನವೆಂಬರ್ 28ಕ್ಕೆ) ಈ ಕಾರ್ಯಕ್ರಮ ನಡೆಯ ಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ.

    ಇದೇ ಕಾರಣಕ್ಕೆ ಮುನಾವರ್ ಫರುಕಿ ತಮ್ಮ ಈ ಹಾಸ್ಯ ಪ್ರೌವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಫರೂಖಿ ಈ ಕಾರ್ಯಕ್ರಮವನ್ನು ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಫೌಂಡೇಷನ್‌ಗಾಗಿ ಮಾಡಲು ನಿರ್ಧರಿಸಿತ್ತಂತೆ. ಆದರೂ ಅವರಿಗೆ ಕಾರ್ಯಕ್ರಮ ಮಾಡಲು ಸಾಧ್ಯ ಆಗಿಲ್ಲ.

    ಬೆಂಗಳೂರಿನಲ್ಲಿ ನಡೆಯ ಬೇಕಿದ್ದ ಕಾರ್ಯಕ್ರಮಕ್ಕೆ ಫರೂಕಿ ಅವರು 600 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಕಾರ್ಯಕ್ರಮ ಅನುಮತಿ ಸಿಗದ ಸಲುವಾಗಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ರದ್ದು!

    ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ರದ್ದು!

    ಮುನಾವರ್ ಫರೂಖಿ ಹೆಸರಾಂತ ಹಾಸ್ಯ ಸ್ಟ್ಯಾಂಡಪ್ ಕಾಮಿಡಿಯನ್. ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮಾಡಿ ಆ ಕಾರ್ಯಕ್ರಮವನ್ನು ಪುನೀತ್‌ ರಾಜ್‌ಕುಮಾರ್‌ ಚಾರಿಟಬಲ್‌ ಟ್ರಸ್ಟ್‌ಗೆ ಅರ್ಪಿಸಲು ಫರೂಖಿ ತಂಡ ಮುಂದಾಗಿತ್ತು.

    ಆದರೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಲು ಮುನಾವರ್ ಫರುಕಿಗೆ ಅವಕಾಶ ಸಿಕ್ಕಿಲ್ಲ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಫರೂಖಿಗೆ ಅವಕಾಶ ಕೊಟ್ಟಿಲ್ಲ. ಇದರಿಂದಾಗಿ ಫರುಕಿ ಅತ್ಯಂತ ಬೇಸರದಿಂದ ತಾನು ಈ ಪ್ರವೃತ್ತಿಗೆ ವಿದಾಯ ಹೇಳುವುದಾಗಿ ಬರೆದುಕೊಂಡಿದ್ದಾನೆ.

    ದ್ವೇಷ ಗೆದ್ದಿದೆ, ಕಲಾವಿದರು ಸೋತಿದ್ದಾರೆ: ಫರೂಖಿ!

    ಮುನಾವರ್‌ ಫರೂಖಿಯ ಕಳೆದ ಎರಡು ತಿಂಗಳಲ್ಲಿ 12 ಕಾರ್ಯಕ್ರಮಗಳು ರದ್ದುಗೊಂಡಿವೆ. ಈಗ ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದ ಕಾರ್ಯಕ್ರಮಕ್ಕೂ ಅವಕಾಶ ಸಿಕ್ಕಿಲ್ಲ. ಈ ಕಾರ್ಯಕ್ರಮ ರದ್ದಾದ ಬಳಿಕ ಫರುಕಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಅವರು "ದ್ವೇಷ ಗೆದ್ದಿದೆ, ಕಲಾವಿದರು ಸೋತಿದ್ದಾರೆ ನಾನು ವಿದಾಯ ಹೇಳುತ್ತಿದ್ದೇನೆ. ಇದು ಅನ್ಯಾಯ" ಎಂದು ಬರೆದುಕೊಂಡಿದ್ದಾರೆ.

    600ಕ್ಕೂ ಹೆಚ್ಚು ಟಿಕೆಟ್ ಮಾರಾಟ!

    600ಕ್ಕೂ ಹೆಚ್ಚು ಟಿಕೆಟ್ ಮಾರಾಟ!

    "ಇಂದು ಬೆಂಗಳೂರು ಕಾರ್ಯಕ್ರಮ ರದ್ದಾಗಿದೆ. ನಾವು 600ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ತಿಂಗಳ ಹಿಂದೆ ನನ್ನ ತಂಡವು ದಿವಂಗತ ಪುನೀತ್ ರಾಜ್‌ಕುಮಾರ್ ಸರ್ ಚಾರಿಟಿಗಾಗಿ ಟ್ರಸ್ಟ್‌ಗಾಗಿ ಹಮ್ಮಿಕೊಳ್ಳಲಾಗಿತ್ತು". ಎನ್ನುವುದನ್ನು ಫರೂಖಿ ಸ್ಪಷ್ಟಪಡಿಸಿದ್ದಾರೆ.


    ದೆಹಲಿ ಮೂಲದ ಕರ್ಟೈನ್ ಕಾಲ್ ಇವೆಂಟ್ಸ್‌ನ ವಿಶೇಷ್ ಧೂರಿಯಾ ಅವರಿಗೆ ಬರೆದಿರುವ ಪತ್ರದಲ್ಲಿ ಅಶೋಕನಗರ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಗುಡ್ ಶೆಫರ್ಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಡೊಂಗ್ರಿ ಟು ನೋವೇರ್' ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಿದ್ದಾರೆ.

    ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದ ಆರೋಪ

    ಹಿಂದೂ ದೇವರುಗಳಿಗೆ ಅಪಮಾನ ಮಾಡಿದ್ದ ಆರೋಪ

    ಈ ವರ್ಷದ ಆರಂಭದಲ್ಲಿ ಅವರ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ, ಆರೋಪದ ಮೇಲೆ ಫರೂಕಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಹಾಗಾಗಿ ಇತರೆ ಧರ್ಮ ಮತ್ತು ದೇವರುಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮನಾವರ್ ಫರೂಖಿ ವಿವಾದಾಸ್ಪದ ವ್ಯಕ್ತಿಯಾಗಿರುವುದು ತಿಳಿದಿದೆ. ಅನೇಕ ರಾಜ್ಯಗಳು ಅವರ ಹಾಸ್ಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ. ಹಾಗಾಗಿ ನಗರದಲ್ಲೂ ಕಾರ್ಯಕ್ರಮ ರದ್ದತಿಗೆ ಸೂಚಿಸಲಾಗಿದೆ.


    ಹಲವಾರು ಸಂಸ್ಥೆಗಳು ಈ ಸ್ಟ್ಯಾಂಡ್‌ಅಪ್ ಕಾಮಿಡಿ ಶೋವನ್ನು ವಿರೋಧ ವ್ಯಕ್ತಪಡಿಸುವ ಹಿನ್ನಲೆಯಲ್ಲಿ ಹಾಗೂ ಅವ್ಯವಸ್ಥೆಯನ್ನು ಉಂಟುಮಾಡಿ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲರ್ಹವಾದ ಮಾಹಿತಿಯಿದೆ ಎಂದು ಪತ್ರದಲ್ಲಿ ಹೇಳಿದೆ. ಹಲಾವಾರು ಸಂಘ ಸಂಸ್ಥೆ, ಕೆಲ ಗುಂಪುಗಳ ಬೆದರಿಕೆಗಳಿಂದಾಗಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮುನಾವರ್ ಫರೂಕಿ ಇನ್ನುಮುಂದೆ ಯಾವುದೇ ಪ್ರದರ್ಶನಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

    English summary
    Comedian Munawar Faruqui cancelled show was Dedicated For Puneeth Rajkumar’s foundation, know more,
    Monday, November 29, 2021, 10:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X