ಜೋಶ್‌ನಲ್ಲಿ 'ಕಾಮಿಡಿ ಕಿಲಾಡಿ' ರಾಕೇಶ್ ಪೂಜಾರಿಯದ್ದೇ ಹವಾ!
ಕಾಮಿಡಿ ಕಿಲಾಡಿಗಳು ಗೆದ್ದು ಬೀಗಿರುವ ಪ್ರತಿಭಾವಂತ ಕಲಾವಿದ ರಾಕೇಶ್ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿಯೂ ಜನಪ್ರಿಯ ಸೆಲೆಬ್ರಿಟಿ.
ಹಲವು ವರ್ಷಗಳಿಂದಲೂ ನಾಟಕ, ಟಿವಿ ರಂಗದಲ್ಲಿ ಸಕ್ರಿಯರಾಗಿರುವ ರಾಕೇಶ್ ಪೂಜಾರಿ, ತಮ್ಮ ನಟನಾ ಪಯಣ ಆರಂಭಿಸಿದ್ದು 'ಚೈತನ್ಯ ಕಲಾವಿದರು' ನಾಟಕ ತಂಡದಿಂದ. ರಾಕೇಶ್‌ಗೆ ಮಾರ್ಗದರ್ಶಕರಾಗಿದ್ದಿದ್ದು ಪ್ರಸನ್ನ ಶೆಟ್ಟಿ ಬೈಲೂರ್.
2014ರಲ್ಲಿ ತುಳು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು ರಾಕೇಶ್ ಪೂಜಾರಿ. ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಹಲವು ಕಾಮಿಡಿ ಶೋಗಳನ್ನು ಸಹ ರಾಕೇಶ್ ಪೂಜಾರಿ ನೀಡಿದ್ದಾರೆ. ಹೀಗೆ ಹಲವು ಎತ್ತರಗಳನ್ನು ಏರುತ್ತಾ ಸಾಗಿದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ 'ಕಾಮಿಡಿ ಕಿಲಾಡಿಗಳು' ರನ್ನರ್ಸ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ 'ಕಾಮಿಡಿ ಕಿಲಾಡಿಗಳು' ವಿಜೇತರು ಸಹ ಆದರು. ಇದೀಗ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಜಡ್ಜ್‌ಗಳಾಗಿದ್ದ ಕಾಮಿಡಿ ಕಿಲಾಡಿಗಳು ಸೀಸನ್ ಮೂರರ ವಿಜೇತ ರಾಕೇಶ್ ಪೂಜಾರಿ ಆ ನಂತರವೂ ಕೆಲವು ಶೋಗಳಲ್ಲಿ ಕಾಣಿಸಿಕೊಂಡರು. ಟಿವಿ ಶೋಗಳಲ್ಲಿ ಹಾಸ್ಯಕ್ಕಷ್ಟೆ ಸೀಮಿತವಾಗರುವ ರಾಕೇಶ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಹುಮುಖ ಪ್ರತಿಭೆ ಅನಾವರಣ ಮಾಡುತ್ತಾರೆ.

ಜೋಶ್ ಕಿರು ವಿಡಿಯೋ ಅಪ್ಲಿಕೇಶನ್‌ನಲ್ಲಿ ಹಲವಾರು ಹಾಸ್ಯದ, ಸಂದೇಶದ ಹಾಗೂ ನೃತ್ಯದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವರ ವಿಡಿಯೋಗಳನ್ನು ಜೋಶ್ ಕಿರು ಅಪ್ಲಿಕೇಶನ್‌ನಲ್ಲಿ ಸಾವಿರಾರು ಮಂದಿ ಲೈಕ್, ಶೇರ್ ಮಾಡಿದ್ದಾರೆ. ಜೋಶ್ ಅಪ್ಲಿಕೇಶನ್‌ನಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಫಾಲೋವರ್‌ಗಳನ್ನು ರಾಕೇಶ್ ಹೊಂದಿದ್ದಾರೆ. ರಾಕೇಶ್ ಪ್ರೊಫೈಲ್ ಲಿಂಕ್ ನೋಡಿ(https://share.myjosh.in/profile/5801c7f5-ada9-4338-b69b-a57d91436991)
ಹಾಸ್ಯ ಕಲಾವಿದರಾಗಿರುವ ರಾಕೇಶ್ ತಾವೊಬ್ಬ ಒಳ್ಳೆಯ ಡ್ಯಾನ್ಸರ್ ಸಹ ಎಂಬುದನ್ನು ಕಿರು ವಿಡಿಯೋಗಳ ಮೂಲಕ ಸಾಬೀತು ಮಾಡಿದ್ದಾರೆ. ಡ್ಯಾನ್ಸ್ ಮಾಡುವ ಹಲವು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಡ್ಯಾನ್ಸ್‌ನಲ್ಲಿಯೂ ಹಾಸ್ಯವನ್ನು ಜೋಡಿಸುವ ಯತ್ನವನ್ನು ಸಹ ಅವರು ಮಾಡಿದ್ದಾರೆ.
ಹಲವು ಜನಪ್ರಿಯ ಹಾಸ್ಯನಟರು, ನಟಿಯರೊಟ್ಟಿಗೆ ರಾಕೇಶ್ ಪೂಜಾರಿ ವಿಡಿಯೋಗಳನ್ನು ಮಾಡಿದ್ದಾರೆ. ನಟಿ ನಯನ, ಸಿಂಚನಾ ರಾವ್ ಇನ್ನೂ ಹಲವರೊಟ್ಟಿಗೆ ರಾಕೇಶ್ ವಿಡಿಯೊಗಳನ್ನು ಮಾಡಿ ಜೋಶ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


Click it and Unblock the Notifications











