For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ನಟ ಚಿಕ್ಕಣ್ಣ ಈಗ ಹೀರೋ: ಅಕ್ಟೋಬರ್ 19ಕ್ಕೆ ಟೈಟಲ್ ಬಿಡುಗಡೆ

  |

  ಹಾಸ್ಯ ನಟರು ಹೀರೋ ಆಗುವುದು ಹಳೆಯ ಟ್ರೆಂಡ್. ಅನೇಕ ಹಾಸ್ಯ ನಟರು ಹೀರೋ ಆಗಿ ಸಕ್ಸಸ್ ಕಂಡಿರುವುದು ನೋಡಿದ್ದೇವೆ. ಕನ್ನಡದಲ್ಲಿ ಕೋಮಲ್ ಕುಮಾರ್, ಶರಣ್ ಸಹ ಹಾಸ್ಯನಟನಾಗಿ ವೃತ್ತಿ ಜೀವನ ಆರಂಭಿಸಿದರೂ ಇಂದು ಸ್ಟಾರ್ ಹೀರೋಗಳು ಎನಿಸಿಕೊಂಡಿದ್ದಾರೆ.

  ಇದೀಗ, ಈ ಪಟ್ಟಿಗೆ ಹಾಸ್ಯ ನಟ ಚಿಕ್ಕಣ್ಣ ಸೇರಿದ್ದಾರೆ. ಸದ್ಯ ಕನ್ನಡದ ಬಹುಬೇಡಿಕೆಯ ಹಾಗೂ ದುಬಾರಿ ಹಾಸ್ಯ ನಟ ಆಗಿರುವ ಚಿಕ್ಕಣ್ಣ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ದಾರೆ.

  ದೊಡ್ಡ ತೆರೆಯ ಮೇಲೆ ಚಿಕ್ಕಣ್ಣನ ಹೊಸ ಜರ್ನಿ: ಹೀರೋ ಆದ ಹಾಸ್ಯನಟದೊಡ್ಡ ತೆರೆಯ ಮೇಲೆ ಚಿಕ್ಕಣ್ಣನ ಹೊಸ ಜರ್ನಿ: ಹೀರೋ ಆದ ಹಾಸ್ಯನಟ

  ಅಕ್ಟೋಬರ್ 19 ರಂದು ಚಿತ್ರದ ಶೀರ್ಷಿಕೆ ಏನು ಎಂಬುದನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರಕ್ಕೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಘೋಷಣೆಯಾಗಿಲ್ಲ.

  'ಬಾಂಬೆ ಮಿಠಾಯಿ', 'ಡಬ್ಬಲ್ ಎಂಜಿನ್' ಎಂಬ ಎರಡು ಸಿನಿಮಾಗಳನ್ನು ನಿರ್ದೇಶಿಸಿರುವ ಚಂದ್ರಮೋಹನ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಬ್ಬುಲಿ, ರಾಬರ್ಟ್ ಖ್ಯಾತಿಯ ಉಮಾಪತಿ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್ ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

  ಮಗನ ಸಿನಿಮಾ ನೋಡಲು ಥಿಯೇಟರ್ ಗೆ ಬಂದ ಚಿರು ತಾಯಿ | Chiranjeevi Sarja Mother | Filmibeat Kannada

  ರವಿಶಂಕರ್, ರಾಕ್‌ಲೈನ್ ಸುಧಾಕರ್ ಇನ್ನೂ ಹಲವರಿದ್ದಾರೆ. ಹೊಸ ನಾಯಕಿಯನ್ನು ಪರಿಚಯಿಸಲಾಗುತ್ತದೆಯಂತೆ. ಇನ್ನು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಒಳಗೊಂಡಿದೆ.

  English summary
  Comedy Actor Chikkanna Playing lead role in his next. the film will producing umapathy srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X