For Quick Alerts
  ALLOW NOTIFICATIONS  
  For Daily Alerts

  'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಹಿಟ್ಲರ್ ಬೆಡಗಿ ನಾಯಕಿ

  |

  ಸ್ಯಾಂಡಲ್‌ವುಡ್ ನ ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ 'ಉಪಾಧ್ಯಕ್ಷ'ನ ಪಟ್ಟ ಅಲಂಕರಿಸಿದ್ದಾರೆ. ಚಿಕ್ಕಣ್ಣ ಉಪಾಧ್ಯಕ್ಷ ಆಗ್ತಾರೆ ಅಂತ ಈ ಹಿಂದೆಯೇ ಸುದ್ದಿ ಬಂದಿತ್ತು. ಈ ವಿಚಾರವನ್ನು ಚಿಕ್ಕಣ್ಣ ಮತ್ತು ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದರು. ಅದು ಈಗ ನೆರವೇರಿದೆ. ಇನ್ನೇನಿದ್ದರೂ ಉಪಾಧ್ಯಕ್ಷನಾಗಿ ಅಬ್ಬರ ಮಾಡುವುದೊಂದೇ ಬಾಕಿ ಉಳಿದಿದೆ.

  ಇಷ್ಟು ದಿನ ಚಿಕ್ಕಣ್ಣನನ್ನು ಕಾಮಿಡಿ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಚಿಕ್ಕಣ್ಣ ನಕ್ಕು ನಲಿಸಿದ್ದಾರೆ. ಆದರೆ, ಇನ್ನು ಮುಂದೆ ಕೇವಲ ಪೋಷಕ ಪಾತ್ರದಲ್ಲಿ ಮಾತ್ರವಲ್ಲ ಚಿಕ್ಕಣ್ಣನೇ ಸಿನಿಮಾ ಹೀರೊ ಆಗಿ ನಿಮ್ಮ ಮುಂದೆ ಬರಲಿದ್ದಾರೆ. ಈ ದಾರಿಯಲ್ಲಿ ಅವರು ಮೊದಲು ಇಟ್ಟಿರುವ ಹೆಜ್ಜೆಯೇ 'ಉಪಾಧ್ಯಕ್ಷ'.

  ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ: ಏನು ವಿಶೇಷ?ಗೋವಾದಲ್ಲಿ ಸಿದ್ದರಾಮಯ್ಯ ಚಿಕ್ಕಣ್ಣ ಭೇಟಿ: ಏನು ವಿಶೇಷ?

  'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣ ಸೋಲೋ ಹೀರೊ ಲಾಂಚ್ ಆಗುತ್ತಿದ್ದಾರೆ. ಸದ್ಯ ಸಿನಿಮಾ ಲಾಂಚ್ ಆಗಿದೆ. ಚಿತ್ರದ ಶೂಟಿಂಗ್ ಕೂಡ ಆರಂಭ ಅದಂತೆಯೇ ಲೆಕ್ಕಾ. ಈಗ ಚಿತ್ರತಂಡ ಏನು ಹೇಳಿದೆ? ಚಿಕ್ಕಣ್ಣ ಯಾವ ರೀತಿ ಜಾದು ಮಾಡಲು ಸಜ್ಜಾಗಿದ್ದಾರೆ? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

  ಕೊರೊನಾ ಸಂಕಷ್ಟಕ್ಕೆ ಚಿಕ್ಕಣ್ಣ ನೆರವು: ಬಡವರ ಹಸಿವು ನೀಗಿಸುತ್ತಿರುವ ನಟ ಕೊರೊನಾ ಸಂಕಷ್ಟಕ್ಕೆ ಚಿಕ್ಕಣ್ಣ ನೆರವು: ಬಡವರ ಹಸಿವು ನೀಗಿಸುತ್ತಿರುವ ನಟ

  ಚಿಕ್ಕಣ್ಣ ಇದ್ದಲ್ಲಿ ನಗು ಇದ್ದೇ ಇರುತ್ತೆ!

  ಚಿಕ್ಕಣ್ಣ ಇದ್ದಲ್ಲಿ ನಗು ಇದ್ದೇ ಇರುತ್ತೆ!

  ಇನ್ನು ಮುಂದೆ ಚಿಕ್ಕಣ್ಣನನ್ನು ಕೇವಲ ಪೋಷಕ ಪಾತ್ರಗಳಲ್ಲಿ ಮಾತ್ರವಲ್ಲದೆ, ಹೀರೋ ಆಗಿ ಕೂಡ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹಾಗಂತ ಕಾಮಿಡಿ ಪಂಚ್ ಕಡಿಮೆ ಆಗಿ ಮಾಸ್, ಕ್ಲಾಸ್ ಅಂತ ಬರೀ ಹೀರೋಗಿರಿ ತೋರಿಸ್ತಾರೆ ಚಿಕ್ಕಣ್ಣ ಅಂತ ಅಂದುಕೊಳ್ಳಬೇಡಿ. ಯಾಕೆಂದರೆ, ಚಿಕ್ಕಣ್ಣ ಇದ್ದ ಕಡೆ ನುಗು ಇರಲೇ ಬೇಕು. ಉಪಾಧ್ಯಕ್ಷನಾಗಿಯೂ ಚಿಕ್ಕಣ್ಣ ನಿಮ್ಮನ್ನು ನಗಿಸಲಿದ್ದಾರೆ.

  ಚಿಕ್ಕಣ್ಣನಿಗೆ ಲೀಲಾ ಜೋಡಿ!

  ಚಿಕ್ಕಣ್ಣನಿಗೆ ಲೀಲಾ ಜೋಡಿ!

  ಇಂದು (ಜೂನ್ 16) ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸುತ್ತಾ ಇರುವ ಮೊದಲ ಸಿನಿಮಾ ಉಪಾಧ್ಯಕ್ಷ ಸೆಟ್ಟೇರಿದೆ. ಚಿತ್ರದ ಮೂಹೂರ್ತವನ್ನು ದೇವಸ್ಥಾನದಲ್ಲಿ ಸರಳವಾಗಿ ನೆರವೇರಿಸಲಾಗಿದೆ. ಇನ್ನು ಚಿಕ್ಕಣ್ಣನಿಗೆ ನಾಯಕಿ ಕೂಡ ಸಿಕ್ಕಿದ್ದಾರೆ. ಚಿಕ್ಕಣ್ಣನ ಜೊತೆಗೆ ಹಿಟ್ಲರ್ ಕಲ್ಯಾಣ್ ನಟಿ ಲೀಲಾ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಅಂದ್ಹಾಗೆ, ಲೀಲಾ ನಿಜವಾದ ಹೆಸರು ಮಲೈಕಾ ವಸುಪಾಲ್. ಈ ಚಿತ್ರದ ಮೂಲಕ ಮಲೈಕಾ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

  ಸಂಪೂರ್ಣ ಎಂಟರ್‌ಟೈನರ್ ಉಪಾಧ್ಯಕ್ಷ!

  ಸಂಪೂರ್ಣ ಎಂಟರ್‌ಟೈನರ್ ಉಪಾಧ್ಯಕ್ಷ!

  ಇನ್ನು ಈ ಚಿತ್ರದಲ್ಲಿ ಚಿಕ್ಕಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ಕೇವಲ ಹೀರೋಯಿಸಂ ಮಾತ್ರ ಇರುತ್ತಾ? ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. "ಉಪಾಧ್ಯಕ್ಷ ಸಿನಿಮಾ ಕಥೆ ತುಂಬಾ ಇಷ್ಟ ಆಯ್ತು. ಹೀರೊ ಆಗಿದ್ದೀನಿ ಅಂತ ಈ ಚಿತ್ರದಲ್ಲಿ ಹೀರೋಯಿಸಂ ಮಾತ್ರ ಇರುತ್ತೆ ಅಂತಲ್ಲ. ಈ ಚಿತ್ರ ಸಂಪೂರ್ಣ ಮನೋರಂಜನೆಯಿಂದ ಕೂಡಿರುತ್ತೆ. ಜನರಿಗೆ ಮನೋರಂಜನೆ ನೀಡಲೆಂದೇ ಈ ಚಿತ್ರ ಮಾಡುತ್ತಿದ್ದೇವೆ."

  'ಉಪಾಧ್ಯಕ್ಷ' ಟೈಟಲ್ ಯಾಕೆ?

  'ಉಪಾಧ್ಯಕ್ಷ' ಟೈಟಲ್ ಯಾಕೆ?

  ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಉಪಾಧ್ಯಕ್ಷ ಎನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರ ಚಿಕ್ಕಣ್ಣನಿಗೆ ಬಹಳ ಇಷ್ಟವಂತೆ. ಜೊತೆಗೆ ಆ ಪಾತ್ರಕ್ಕೆ ಹೊಂದುವ ರೀತಿ ಕಥೆ ಇರುವ ಕಾರಣಕ್ಕೆ ಈ ಚಿತ್ರಕ್ಕೆ ಉಪಾಧ್ಯಕ್ಷ ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಹೀರೊ ಆದ ಚಿಕ್ಕಣ್ಣ ಬೇರೆ ನಟರ ಜೊತೆಗೆ ಪೋಷಕ ಪಾತ್ರಗಳಲ್ಲಿ ನಟಿಸುವುದಿಲ್ಲ ಅಂತೇನು ಇಲ್ಲ. ಯಾವುದೇ ಚಿತ್ರ ಸಿಕ್ಕರೂ ಮಾಡುತ್ತೇನೆ ಎಂದು ಹೇಳಿದ್ದಾರೆ ಚಿಕ್ಕಣ್ಣ. 'ಉಪಾಧ್ಯಕ್ಷ' ಚಿತ್ರವನ್ನು ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶವಿದೆ.

  English summary
  Comedy Actor Chikkanna Debut As Hero In Upadhyaksha Movie Launched,
  Thursday, June 16, 2022, 16:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X