ಟೆನ್ನಿಸ್ ಕೃಷ್ಣ ವೃತ್ತಿ ಬದುಕನ್ನ ಬದಲಿಸಿದ 'ವೀಕೆಂಡ್ ವಿತ್ ರಮೇಶ್'.!

By Naveen

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಸಾಧಕರ ಸಾಧನೆಯನ್ನು ಗುರುತಿಸಿ ಅವರಿಗೆ ನೀಡುವ ಗೌರವ. ಸಾಧನೆ ಮಾಡಲು ಸ್ಫೂರ್ತಿ ತುಂಬುವುದು ಕೂಡ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂತಹ ಕಾರ್ಯಕ್ರಮ ಈಗ ಹಾಸ್ಯನಟ ಟೆನ್ನಿಸ್ ಕೃಷ್ಣ ಅವರ ಸಿನಿ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ.

30 ವರ್ಷಗಳಿಂದ ಕನ್ನಡಿಗರನ್ನು ನಗಿಸಿಕೊಂಡು ಬಂದ ಹಾಸ್ಯ ನಟ ಟೆನ್ನಿಸ್ ಕೃಷ್ಣ. ಇತ್ತೀಚಿನ ದಿನದಲ್ಲಿ ಅವರಿಗೆ ಬರುವ ಸಿನಿಮಾ ಅವಕಾಶಗಳು ತೀರಾ ಕಡಿಮೆಯಾಗಿದ್ದವು. ಆದರೆ ಕಿರುತೆರೆಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಅವರ ಪಾಲಿಗೆ ವರವಾಗಿದೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಟೆನ್ನಿಸ್ ಕೃಷ್ಣ ಅವರ ಅದೃಷ್ಟವನ್ನು ಬದಲಾಯಿಸಿದ್ದು ಹೇಗೆ ಎಂಬ ಕುತೂಹಲ ಇದ್ದರೆ ಮುಂದೆ ಓದಿ...

ಜಗ್ಗೇಶ್ ಸಂಚಿಕೆಯಲ್ಲಿ

ಜಗ್ಗೇಶ್ ಸಂಚಿಕೆಯಲ್ಲಿ

ನವರಸ ನಾಯಕ ಜಗ್ಗೇಶ್ ಅವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆಯಲ್ಲಿ ಅತಿಥಿಯಾಗಿ ಹಾಸ್ಯ ನಟ ಟೆನ್ನಿಸ್ ಕೃಷ್ಣ ಆಗಮಿಸಿದ್ದರು. ಆಗ ಅವರು ಅಲ್ಲಿ ಆಡಿದ ಮಾತು ಈಗ ಅವರ ಸಿನಿ ಜರ್ನಿಯಲ್ಲಿ ದೊಡ್ಡ ತಿರುವಿಗೆ ಕಾರಣವಾಗಿದೆ.

ಡೈರೆಕ್ಟರ್ ಕ್ಯಾಪ್ ತೊಟ್ಟ ಟೆನ್ನಿಸ್ ಕೃಷ್ಣ

ಡೈರೆಕ್ಟರ್ ಕ್ಯಾಪ್ ತೊಟ್ಟ ಟೆನ್ನಿಸ್ ಕೃಷ್ಣ

ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಟೆನ್ನಿಸ್ ಕೃಷ್ಣ ಅವರು ಈಗ ನಿರ್ದೇಶಕರಾಗುತ್ತಿದ್ದರೆ. ಅದಕ್ಕೆ ಮುಖ್ಯ ಕಾರಣವಾಗಿರುವುದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ.

ನಿರ್ದೇಶನದ ಆಫರ್

ನಿರ್ದೇಶನದ ಆಫರ್

'ವೀಕೆಂಡ್' ಕಾರ್ಯಕ್ರಮದಲ್ಲಿ ಆಗಮಿಸಿದ್ದ ಟೆನ್ನಿಸ್ ಕೃಷ್ಣ 'ಚಿತ್ರರಂಗದಲ್ಲಿ ಇಂದು ಹಿರಿಯ ಪೋಷಕ ನಟರಿಗೆ ಅವಕಾಶವೇ ಇಲ್ಲ' ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಅದನ್ನು ನೋಡಿದ್ದ ಅರುಣ್ ಹೊಸಕೊಪ್ಪ ಮತ್ತು ಅಚ್ಯುತ್ ಗೌಡ ಎಂಬುವವರು ಈಗ ಸಿನಿಮಾ ನಿರ್ದೇಶನದ ಆಫರ್ ನೀಡಿದ್ದಾರೆ.

ಮತ್ತೆ.. ಮತ್ತೆ...

ಮತ್ತೆ.. ಮತ್ತೆ...

ಟೆನ್ನಿಸ್ ಕೃಷ್ಣ ನಿರ್ದೇಶನದ ಸಿನಿಮಾಗೆ 'ಮತ್ತೆ ಮತ್ತೆ' ಎಂಬ ಟೈಟಲ್ ಫಿಕ್ಸ್ ಆಗಿದೆ. ಇದೊಂದು ಕಾಲೇಜ್ ಕಥೆಯಾಗಿದ್ದು, ಸಂಪೂರ್ಣ ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆಯಂತೆ.

ಸಹಾಯಕ ನಿರ್ದೇಶಕರಾಗಿದ್ದ ಟೆನ್ನಿಸ್

ಸಹಾಯಕ ನಿರ್ದೇಶಕರಾಗಿದ್ದ ಟೆನ್ನಿಸ್

ಈ ಹಿಂದೆ ಕೆಲ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಹೊಂದಿದ್ದ ಟೆನ್ನಿಸ್ ಕೃಷ್ಣ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದಲ್ಲಿ ಏಳು ಪ್ರಮುಖ ಪಾತ್ರಗಳಿದ್ದು, ಆ ಪಾತ್ರಗಳಿಗೆ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದಂತೆ.

More from Filmibeat

English summary
Kannada Comedy Actor Tennis Krishna Turn To Director. The Movie Titled 'Mathe Mathe'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X