For Quick Alerts
  ALLOW NOTIFICATIONS  
  For Daily Alerts

  'ಏಕ್ ಲವ್ ಯಾ' ಚಿತ್ರಕ್ಕೆ ಕಾಮಿಡಿ ಕಿಲಾಡಿ, ಟಿಕಿ ಟಾಕ್ ಸ್ಟಾರ್ ಗಳು ಸಾಥ್

  |

  ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರ ಮೇಕಿಂಗ್ ಹಂತದಲ್ಲಿ ಪದೇ ಪದೇ ಸದ್ದು ಮಾಡ್ತಿದೆ. ತೆಲುಗು ಇಂಡಸ್ಟ್ರಿಯ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ, ನಾಯಕಿ ರೀಷ್ಮಾ ನಾನಯ್ಯ, ಸುಪ್ರೀಂ ಹೀರೋ ಶಶಿಕುಮಾರ್, ಖಳನಾಯಕನಾಗಿ ಯಶವಂತ್ ಶೆಟ್ಟಿ ಹೀಗೆ ಒಬ್ಬೊಬ್ಬರೇ ಪ್ರತಿಭಾನ್ವಿತ ಕಲಾವಿದರು ಪ್ರೇಮ್ ಚಿತ್ರಕ್ಕೆ ಸಾಥ್ ಕೊಡ್ತಿದ್ದಾರೆ.

  ಇದೀಗ, ಏಕ್ ಲವ್ ಯಾ ಚಿತ್ರದ ಜೋಶ್ ಹೆಚ್ಚಿಸಲು ಮತ್ತಷ್ಟು ಯುವ ಕಲಾವಿದರು ಬಂದಿದ್ದಾರೆ. 'ಕಾಮಿಡಿ ಕಿಲಾಡಿಗಳು' ಹಾಗೂ 'ಟಿಕ್ ಟಾಕ್' ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿಕೊಂಡಿರುವ ಯುವ ಕಲಾವಿದರ ಆಗಮನವಾಗಿದೆ.

  ಪ್ರೇಮ್ಸ್ ಚಿತ್ರಕ್ಕೆ ಜೊತೆಯಾದ ಸುಪ್ರೀಂ ಹೀರೋ ಶಶಿಕುಮಾರ್ ಪ್ರೇಮ್ಸ್ ಚಿತ್ರಕ್ಕೆ ಜೊತೆಯಾದ ಸುಪ್ರೀಂ ಹೀರೋ ಶಶಿಕುಮಾರ್

  ಹೌದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ (ಪ್ಯಾಕು ಪ್ಯಾಕು) ಹಾಗೂ ಎರಡನೇ ಆವೃತ್ತಿಯ ಸೂರಜ್ ಪ್ರೇಮ್ ಏಕ್ ಲವ್ ಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಕಾಮಿಡಿ ಮಾಡಿ ಸೈ ಎನಿಸಿಕೊಂಡಿದ್ದ ಇವರಿಬ್ಬರ ಈಗ ಪ್ರೇಮ್ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

  ಪ್ರೇಮ್ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ 'ಸ್ಟಂಟ್ ಶಿವ' ಪ್ರೇಮ್ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ 'ಸ್ಟಂಟ್ ಶಿವ'

  ಇನ್ನು ಟಿಕ್ ಟಾಕ್ ಕ್ಷೇತ್ರದಲ್ಲಿ ಸಖತ್ ಸೌಂಡ್ ಮಾಡಿರುವ ನಿಖಿಲ್ ಗೌಡ, ಅಂದ್ರೆ ಆರುವರೆ ಅಡಿ ಎತ್ತರ ಕಾಲ್ ಕೆ.ಜಿ ಖಂಡ ಹೊಂದಿರುವ ನಿಖಿಲ್ ಕೂಡ ಈ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಮಿಡಿ ಕಲಾವಿದರ ಹಾವಳಿ ಈ ಚಿತ್ರದಲ್ಲಿ ಸ್ವಲ್ಪ ಜೋರಾಗಿಯೇ ಇರಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

  ಇನ್ನುಳಿದಂತೆ ಪ್ರೇಮ್ ನಿರ್ದೇಶನ ಹಾಗೂ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಏಕ್ ಲವ್ ಯಾ' ಸಿನಿಮಾದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ.

  English summary
  Comedy khiladigalu fame Hithesh and tiktok star nikhil gowda has joins to prem's ek love ya. Rakshita prem brother raana palying lead role and reeshma playing female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X