For Quick Alerts
  ALLOW NOTIFICATIONS  
  For Daily Alerts

  'ಭಾಗ್ಯವಂತ' ಲೋಕೇಶ್ ಕುಮಾರ್ ಗೆ ಭಾಗ್ಯದ ಬಾಗಿಲು ತೆರೆದಿದೆ.!

  By Harshitha
  |

  ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಬೇಕು ಎಂಬ ಲೋಕೇಶ್ ಕುಮಾರ್ ರವರ ಕನಸು ಇದೀಗ ನನಸಾಗುತ್ತಿದೆ. 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಕರುನಾಡ ಜನತೆಗೆ ಕಚಗುಳಿ ಇಟ್ಟ ಮೇಲೆ ಲೋಕೇಶ್ ಕುಮಾರ್ ರವರ ಅದೃಷ್ಟ ಖುಲಾಯಿಸಿಬಿಟ್ಟಿದೆ.

  'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಈಗ 'ಭಾಗ್ಯವಂತ'

  'ನಾವೇ ಭಾಗ್ಯವಂತರು' ಎಂಬ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಲೋಕೇಶ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಹೊಸ ಸಿನಿಮಾದ ಚಿತ್ರೀಕರಣದಲ್ಲೂ 'ಕಾಮಿಡಿ ಕಿಲಾಡಿ' ಲೋಕೇಶ್ ಪಾಲ್ಗೊಂಡಿದ್ದಾರೆ. ಮುಂದೆ ಓದಿರಿ...

  ಹೊಸ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಲೋಕೇಶ್

  ಹೊಸ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಲೋಕೇಶ್

  ಇನ್ನೂ ಹೆಸರಿಡದ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ನಟ ಲೋಕೇಶ್ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.

  'ಕಾಮಿಡಿ ಕಿಲಾಡಿ' ಲೋಕೇಶ್ ಅವರ 'ನಾವೇ ಭಾಗ್ಯವಂತರು' ಚಿತ್ರ ಸೆಟ್ಟೇರಿತು

  ಲೋಕೇಶ್ ಜೊತೆ ಶುಭಾ ಪೂಂಜಾ

  ಲೋಕೇಶ್ ಜೊತೆ ಶುಭಾ ಪೂಂಜಾ

  ಲೋಕೇಶ್ ಜೊತೆ 'ಮೋದಕ ನಟಿ' ಶುಭಾ ಪೂಂಜಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

  'ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ'

  ಕಾಮಿಡಿ ಇರುತ್ತಾ.?

  ಕಾಮಿಡಿ ಇರುತ್ತಾ.?

  'ಕಾಮಿಡಿ ಕಿಲಾಡಿ' ಲೋಕೇಶ್' ಇದ್ದ ಕಡೆ ಕಾಮಿಡಿ ಇರಲೇಬೇಕು. ಹೀಗಾಗಿ ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ನಗುವಿನ ಇಂಜೆಕ್ಷನ್ ಕೂಡ ಇರಲಿದೆ.

  'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!

  ಚಿತ್ರೀಕರಣ ಶುರು ಆಗಿದೆ

  ಚಿತ್ರೀಕರಣ ಶುರು ಆಗಿದೆ

  ಸದ್ಯಕ್ಕೆ 'ಪ್ರೊಡಕ್ಷನ್ ನಂ.1' ಹೆಸರಿನಡಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಹೊಸಬರು ಹಾಗೂ ಅನುಭವಿ ಕಲಾವಿದರ ಸಂಗಮ ಈ ಚಿತ್ರದಲ್ಲಿ ಇರಲಿದೆ. ಶ್ರೀನಿ ಎಂಬುವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  ಲೋಕೇಶ್ ಗೆ ಹೆಚ್ಚಾಗಿದೆ ಡಿಮ್ಯಾಂಡ್

  ಲೋಕೇಶ್ ಗೆ ಹೆಚ್ಚಾಗಿದೆ ಡಿಮ್ಯಾಂಡ್

  'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿಯೂ ಬಿಜಿಯಾಗಿರುವ ಲೋಕೇಶ್ ಗೆ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದೆ. ಆದ್ರೆ, ಪರ್ಫಾಮೆನ್ಸ್ ಗೆ ಆದ್ಯತೆ ನೀಡುವ ಪಾತ್ರಗಳಿಗೆ ಮಾತ್ರ ಲೋಕೇಶ್ ಪ್ರಾಮುಖ್ಯತೆ ನೀಡುತ್ತಿದ್ದಾರೆ.

  English summary
  'Comedy Khiladigalu' fame Lokesh Kumar plays lead in yet-to-be-titled Kannada Horror movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X