For Quick Alerts
  ALLOW NOTIFICATIONS  
  For Daily Alerts

  'ಕಾಮಿಡಿ ಕಿಲಾಡಿ' ಮುತ್ತುರಾಜ್ ಅಷ್ಟಾಗಿ ಎಲ್ಲೂ ಗುರುತಿಸಿಕೊಳ್ತಿಲ್ಲ, ಯಾಕೆ.?

  |

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಕಾಮಿಡಿ ಕಿಲಾಡಿಗಳು' ಮೊದಲ ಆವೃತ್ತಿಯ ಬಹುತೇಕ ಸ್ಪರ್ಧಿಗಳು ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.

  'ಕಾಮಿಡಿ ಕಿಲಾಡಿಗಳು' ಸೀಸನ್ 1 ವಿನ್ನರ್ ಶಿವರಾಜ್.ಕೆ.ಆರ್.ಪೇಟೆ, ನಯನ, ಗೋವಿಂದೇ ಗೌಡ, ದಿವ್ಯಶ್ರೀ, ಹಿತೇಶ್ ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ, ಅದೇ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಮುತ್ತುರಾಜ್ ಮಾತ್ರ ಯಾಕೆ ಎಲ್ಲೂ ಕಾಣಿಸಿಕೊಳ್ತಿಲ್ಲ.? ಅಂತ ನೀವು ಯೋಚಿಸಬಹುದು.

  ಹಾಗ್ನೋಡಿದ್ರೆ, ಈಗಾಗಲೇ ಹನ್ನೊಂದು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮುತ್ತುರಾಜ್ ನಟಿಸಿದ್ದಾರೆ. ಸದ್ಯ 'ಆನೆಬಲ' ಚಿತ್ರದಲ್ಲೂ ಮುತ್ತುರಾಜ್ ನಟಿಸಿದ್ದಾರೆ. ಹೀಗಿದ್ದರೂ, ಅವರು ಸುದ್ದಿ ಆಗುತ್ತಿಲ್ಲ. ಅದಕ್ಕೆ ಕಾರಣ ಅವರಿಗೆ ಮಾರ್ಕೆಟಿಂಗ್ ಸ್ಟ್ರಾಟೆಜಿ ಗೊತ್ತಿಲ್ಲ. ಹಾಗಂತ ಸ್ವತಃ ಮುತ್ತುರಾಜ್ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

  ಖತರ್ನಾಕ್ ಕೆಲಸ ಗೊತ್ತಿರಬೇಕು

  ಖತರ್ನಾಕ್ ಕೆಲಸ ಗೊತ್ತಿರಬೇಕು

  ''ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಯಾಗಬೇಕು, ಗುರುತಿಸಿಕೊಳ್ಳಬೇಕು ಅಂದ್ರೆ ಮಾರ್ಕೆಟಿಂಗ್ ಗೊತ್ತಿರಬೇಕು. ಟ್ಯಾಲೆಂಟ್ ಇಲ್ಲ ಅಂದ್ರೂ ಪರ್ವಾಗಿಲ್ಲ. ಪ್ರಮೋಟ್ ಮಾಡಿಕೊಳ್ಳಲು ಖತರ್ನಾಕ್ ಕೆಲಸಗಳು ಗೊತ್ತಿರಬೇಕು. ನನಗೆ ಅದು ಇಲ್ಲ. ಇದರಿಂದ ನಾನು ಬಿಜಿಯಾಗಲು ಸಾಧ್ಯವಾಗುತ್ತಿಲ್ಲ'' ಎಂದು 'ಆನೆಬಲ' ಪ್ರೆಸ್ ಮೀಟ್ ನಲ್ಲಿ ಮುತ್ತುರಾಜ್ ಹೇಳಿದ್ದಾರೆ.

  'ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?'ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?

  ಮುತ್ತುರಾಜ್ ಬರಹಗಾರ

  ಮುತ್ತುರಾಜ್ ಬರಹಗಾರ

  ಯಾವುದೇ ಅವಕಾಶ ಸಿಕ್ಕರೂ ಆತ್ಮತೃಪ್ತಿಯಿಂದ ನಿರ್ವಹಿಸುತ್ತೇನೆ ಎಂದಿರುವ ಮುತ್ತುರಾಜ್ ಬರಹಗಾರ ಕೂಡ ಹೌದು. ಕೆಲ ನಾಟಕಗಳನ್ನು ಮುತ್ತುರಾಜ್ ಬರೆದಿದ್ದಾರೆ. ಮುತ್ತುರಾಜ್ ಪ್ರತಿಭೆಗೆ ಯೋಗರಾಜ್ ಭಟ್ ಮತ್ತು ಪ್ರೇಮ್ ಖುಷಿ ಪಟ್ಟಿದ್ದಾರೆ.

  Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?

  ಇಂಟರ್ ನ್ಯಾಷನಲ್ ಸರ್ಟಿಫೈಡ್ ಯೋಗಾ ಟೀಚರ್

  ಇಂಟರ್ ನ್ಯಾಷನಲ್ ಸರ್ಟಿಫೈಡ್ ಯೋಗಾ ಟೀಚರ್

  ಅಂದ್ಹಾಗೆ, ವಸಿಷ್ಠ ಸಿಂಹ ಮತ್ತು ಯೋಗಿ ಜೊತೆಗೆ ನಟಿಸುವ ಅವಕಾಶ ಮುತ್ತುರಾಜ್ ಗೆ ಸಿಕ್ಕಿದೆ. ಈ ನಡುವೆ ಇಂಟರ್ ನ್ಯಾಷನಲ್ ಸರ್ಟಿಫೈಡ್ ಯೋಗ ಟೀಚರ್ ಕೂಡ ಆಗಿರುವ ಮುತ್ತುರಾಜ್ ಚಿತ್ರರಂಗದ ಹೊರತಾಗಿ ಒಂದು ಸಾಧನೆ ಮಾಡಲು ಹೊರಟಿದ್ದಾರೆ.

  ಮೆಚ್ಚುಗೆ ಗಳಿಸಿದ್ದ ಮುತ್ತುರಾಜ್

  ಮೆಚ್ಚುಗೆ ಗಳಿಸಿದ್ದ ಮುತ್ತುರಾಜ್

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅನುಕರಣೆ ಮಾಡಿದ ಮುತ್ತುರಾಜ್ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. 'ಗಡ್ಡಪ್ಪ', 'ಕಳ್ಳ ಸ್ವಾಮೀಜಿ', 'ಕಬಾಲಿ ಡ್ಯಾನ್ಸ್' ಪಾತ್ರಗಳಿಂದ ಮುತ್ತುರಾಜ್ ನಗುವಿನ ಇಂಜೆಕ್ಷನ್ ನೀಡಿದ್ದರು.

  English summary
  Comedy Khiladigalu fame Mutturaj accepts that he doesn't know marketing strategy in Sandalwood. 'ಆನೆಬಲ' ಚಿತ್ರದಲ್ಲಿ ಮುತ್ತುರಾಜ್ ನಟಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X