For Quick Alerts
  ALLOW NOTIFICATIONS  
  For Daily Alerts

  'ಕಾಮಿಡಿ ಕಿಲಾಡಿ' ನಯನಗೆ 'ಯಶ್' ಕಡೆಯಿಂದ ಬಂದ ಬಂಪರ್ ಆಫರ್ ಇದು.!

  By Harshitha
  |

  ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ರನ್ನರ್ ಅಪ್ (ಎರಡನೇ ಸ್ಥಾನ) ಆದ ಹುಬ್ಳಿ ಹುಡುಗಿ ನಯನ ಪರಿಚಯ ನಿಮಗೆ ಇರಲೇಬೇಕು.

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಬಾಯ್ಬಡ್ಕಿ ಆಗಿ, ಬಜಾರಿ ಹೆಂಡ್ತಿ ಆಗಿ ನಿಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸಿದ್ದ ನಯನ ಇದೀಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.[ಬೆಳ್ಳಿತೆರೆಗೆ ಬಲಗಾಲಿಟ್ಟು ಬರಲಿದ್ದಾರೆ 'ಕಾಮಿಡಿ ಕಿಲಾಡಿ' ನಯನ]

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ ನಯನ ಅವರಿಗೆ ಒಲಿದು ಬಂದಿದೆ. ಅಂದ್ಹಾಗೆ ಆ ಚಿತ್ರ ಯಾವುದು ಗೊತ್ತಾ.?

  'ಕೆ.ಜಿ.ಎಫ್'ನಲ್ಲಿ ನಯನ ಕಮಾಲ್

  'ಕೆ.ಜಿ.ಎಫ್'ನಲ್ಲಿ ನಯನ ಕಮಾಲ್

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಹೊಂಬಾಳೆ ಫಿಲ್ಮ್ಸ್' ರವರ ಬಿಗ್ ಬಜೆಟ್ ಸಿನಿಮಾ 'ಕೆ.ಜಿ.ಎಫ್'ನಲ್ಲಿ ನಟಿಸುವ ಅವಕಾಶ 'ಕಾಮಿಡಿ ಕಿಲಾಡಿ' ನಯನ ಅವರಿಗೆ ಲಭಿಸಿದೆ.['ಕಾಮಿಡಿ ಕಿಲಾಡಿಗಳು' ನಯನ ತಮ್ಮ ನಟನೆ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು..]

  ನಯನ ಪಾತ್ರವೇನು.?

  ನಯನ ಪಾತ್ರವೇನು.?

  'ಕೆ.ಜಿ.ಎಫ್' ಚಿತ್ರದಲ್ಲಿ ನಯನ ಯಾವ ಪಾತ್ರ ನಿಭಾಯಿಸಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ತುಟಿಕ್ ಪಿಟಿಕ್ ಎಂದಿಲ್ಲ. ಆದ್ರೆ, ನಯನ ಮಾತ್ರ 'ನಂದು ತುಂಬಾ ಸ್ಪೆಷಲ್ ರೋಲ್' ಎನ್ನುತ್ತಾರೆ.[ಅವಮಾನಗಳನ್ನು ಮೆಟ್ಟಿನಿಂತ ನಯನ 'ಜೂನಿಯರ್ ಉಮಾಶ್ರೀ' ಆಗಿದ್ದು ಹೇಗೆ?]

  'ಕೆ.ಜಿ.ಎಫ್' ಚಿತ್ರದಲ್ಲಿ ಹೊಸಬರ ತಂಡ.!

  'ಕೆ.ಜಿ.ಎಫ್' ಚಿತ್ರದಲ್ಲಿ ಹೊಸಬರ ತಂಡ.!

  'ಕೆ.ಜಿ.ಎಫ್' ಚಿತ್ರದಲ್ಲಿ ನಟ ಯಶ್ ಜೊತೆಗೆ ಕೆಲವು ಹಿರಿಯ ನಟರನ್ನ ಹೊರತು ಪಡಿಸಿದರೆ, ಸಿನಿಮಾದಲ್ಲಿ ಹೊಸಬರ ದಂಡೇ ಇದೆ. ನಾಯಕಿ ಪಾತ್ರಧಾರಿ ಶ್ರೀನಿಧಿ ಶೆಟ್ಟಿ ರವರಿಗೂ ಇದು ಚೊಚ್ಚಲ ಸಿನಿಮಾ.

  ನಯನಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!

  ನಯನಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ತೀರ್ಪುಗಾರರ ನೆಚ್ಚಿನ ಸ್ಪರ್ಧಿ ಆಗಿದ್ದ ನಯನಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಈಗಾಗಲೇ, 'ಜಂತರ್ ಮಂತರ್' ಎಂಬ ಚಿತ್ರದಲ್ಲಿ ನಟಿಸಲು ನಯನ ಮುಂದಾಗಿದ್ದಾರೆ.

  ಜಗ್ಗೇಶ್ ಕೂಡ ಬಂಪರ್ ಆಫರ್ ಕೊಟ್ಟಿದ್ದಾರೆ.!

  ಜಗ್ಗೇಶ್ ಕೂಡ ಬಂಪರ್ ಆಫರ್ ಕೊಟ್ಟಿದ್ದಾರೆ.!

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಜಡ್ಜ್ ಆಗಿದ್ದ ನಟ ಜಗ್ಗೇಶ್ ಕೂಡ ನಯನ ರವರಿಗೆ ಚಿತ್ರವೊಂದರಲ್ಲಿ ನಟಿಸಲು ಆಫರ್ ಕೊಟ್ಟಿದ್ದಾರೆ.

  ಶಿವಣ್ಣ ಕೂಡ ಅದನ್ನೇ ಮಾಡಿದ್ರು.!

  ಶಿವಣ್ಣ ಕೂಡ ಅದನ್ನೇ ಮಾಡಿದ್ರು.!

  ಪ್ರತಿಭಾವಂತೆ ನಯನ ರವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ತಮ್ಮ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದಾರೆ. ಇಂಥ ಅದೃಷ್ಟ ಯಾರಿಗುಂಟು ಯಾರಿಗಿಲ್ಲ ಹೇಳಿ.?

  'ಕೆ.ಜಿ.ಎಫ್' ಅಡ್ಡದಲ್ಲಿ ನಯನ

  'ಕೆ.ಜಿ.ಎಫ್' ಅಡ್ಡದಲ್ಲಿ ನಯನ

  ಸದ್ಯದಲ್ಲಿಯೇ 'ಕೆ.ಜಿ.ಎಫ್' ಅಡ್ಡದಲ್ಲಿ ನಯನ ಪ್ರತ್ಯಕ್ಷವಾಗಲಿದ್ದಾರೆ. 'ಕೆ.ಜಿ.ಎಫ್' ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ಇದೆ.

  English summary
  Zee Kannada's Popular show 'Comedy Khiladigalu' Runner-up Nayana bags a special role in Rocking Star Yash starrer 'KGF'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X