ಮತ್ತೆ ಬರ್ತಿದೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ

ಜೀ ಕನ್ನಡ ವಾಹಿನಿಯ ಕಾಮಿಡಿ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಮತ್ತೆ ಬರುತ್ತಿದೆ. ಎರಡು ಸೀಸನ್ ಗಳ ಬಳಿಕ ಈಗ ವೀಕ್ಷಕರನ್ನು ನಗಿಸಲು 'ಕಾಮಿಡಿ ಕಿಲಾಡಿಗಳು 3' ರೆಡಿಯಾಗಿದೆ.

ಸದ್ಯಕ್ಕೆ, ಒಂದು ಸಣ್ಣ ಪ್ರೊಮೋ ಮೂಲಕ ಜೀ ಕನ್ನಡ ವಾಹಿನಿ ಕಾರ್ಯಕ್ರಮದ ಬರುವಿಕೆಯನ್ನು ತಿಳಿಸಿದೆ. ಹಳೆಯ ಸೀಸನ್ ನ ಪ್ರಮುಖ ಸ್ಪರ್ಧಿಗಳನ್ನು ಸೇರಿಸಿ ಈ ವಿಡಿಯೋ ಮಾಡಲಾಗಿದೆ. ಶೀಘ್ರದಲ್ಲೇ ಆಡಿಷನ್ ಶುರು ಆಗಲಿದ್ದು, ದಿನಾಂಕದ ಘೋಷಣೆ ಇನ್ನು ಆಗಿಲ್ಲ.

ಈ ಬಾರಿಯೂ ಕಾರ್ಯಕ್ರಮದ ತೀರ್ಪುಗಾರರಾಗಿ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟಿ ರಕ್ಷಿತಾ ಪ್ರೇಮ್ ಅವರೇ ಮುಂದುವರೆಯುವ ಸಾಧ್ಯತೆ ಇದೆ. ಮಾಸ್ಟರ್ ಆನಂದ್ ಅವರೇ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

comedy khiladigalu season 3 will be telecasting soon

ಈ ಹಿಂದೆ ಮೊದಲ ಸೀಸಸ್ ಹಾಗೂ ಎರಡನೇ ಸೀಸನ್ ಗಳಲ್ಲಿ ಇದ್ದ ಸ್ಪರ್ಧಿಗಳಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ಅನೇಕ ಸ್ಪರ್ಧಿಗಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ರೀತಿ ತಾವು ಕೂಡ ದೊಡ್ಡ ನಟರಾಗಬೇಕು ಎಂಬ ಕನಸು ಹೊಂದಿರುವ ಅನೇಕರು ಈ ಬಾರಿ ವೇದಿಕೆ ಏರಲಿದ್ದಾರೆ.

ಈ ಬಾರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಯಾವಾಗ ಪ್ರಸಾರ ಆಗುತ್ತದೆ..? ಯಾವ ಯಾವ ಸ್ಪರ್ಧಿಗಳು ಇರುತ್ತಾರೆ..? ಎನ್ನುವ ವಿಚಾರ ಸದ್ಯದಲ್ಲಿಯೇ ತಿಳಿಯಲಿದೆ.

More from Filmibeat

English summary
Comedy Khiladigalu season 3 will be telecasting soon in Zee Kannada channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X