For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಕಿಲಾಡಿ ನಟ ಗೋವಿಂದೇಗೌಡಗೆ ಅಪಘಾತ

  |

  ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಖ್ಯಾತವಾಗಿದ್ದ ನಟ ಗೋವಿಂದೇಗೌಡಗೆ ಅಪಘಾತವಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

  ಕಾಮಿಡಿ ಕಿಲಾಡಿಗಳಲ್ಲಿ ಜಿಜಿ ಎಂದೇ ಖ್ಯಾತವಾಗಿದ್ದ ಗೋವಿಂದೇಗೌಡ ಆ ನಂತರ ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಅವರಿಗೆ ಇಂದು ಸಂಜೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಈ ಬಗ್ಗೆ ಟ್ವೀಟ್ ಮಾಡಿರುವ ನಟ ಜಗ್ಗೇಶ್, ''ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ..ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ ಹೊರಟೆ'' ಎಂದು ಹೇಳಿದ್ದಾರೆ.

  ಕಾಮಿಡಿ ಕಿಲಾಡಿಗಳು ಮೂಲಕ ಬೆಳಕಿಗೆ ಬಂದ ಪ್ರತಿಭೆ ಗೋವಿಂದೇಗೌಡ ಕೆಜಿಎಫ್ ಸೇರಿದಂತೆ ಕೆಲವಾರು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಇತ್ತೀಚೆಗೆ ರಾಷ್ಟ್ರಪ್ರಶಸ್ತಿಗೆ ಭಾಜವಾದ ಸಿನಿಮಾ 'ಅಕ್ಷಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ಕನ್ನಡದ ಐದು ಪ್ರಮುಖ ನಿರ್ದೇಶಕರು ಸೇರಿ ಮಾಡುತ್ತಿರುವ 'ಆದ್ದರಿಂದ' ಎಂಬ ಅಂಥಾಲಜಿ ಸಿನಿಮಾದಲ್ಲಿ ಯೋಗರಾಜ್ ಭಟ್‌ರ ಸಿನಿಮಾ ಭಾಗದಲ್ಲಿ ಗೋವಿಂದೇಗೌಡ ನಾಯಕರಾಗಿದ್ದರು.

  English summary
  Comedy Kiladigalu fame actor Govinde Gowda met with an accident. Jaggesh tweeted information and requested to pray for him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X