ನಿಖಿಲ್ ಕುಮಾರ್ ಸಿನಿಮಾದಲ್ಲಿ 'ಕಾಮಿಡಿ ಕಿಲಾಡಿ' ನಯನ
'ಕುರುಕ್ಷೇತ್ರ' ನಂತರ ನಿಖಿಲ್ ಕುಮಾರ್ 'ಸೀತಾರಾಮ ಕಲ್ಯಾಣ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಿಖಿಲ್ ಜೊತೆಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ.
ವಿಶೇಷ ಅಂದರೆ ಈ ಸಿನಿಮಾದ ಒಂದು ಪಾತ್ರದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನ ಕಾಣಿಸಿಕೊಳ್ಳಲಿದ್ದಾರೆ. 'ಕಾಮಿಡಿ ಕಿಲಾಡಿಗಳು' ಮೂಲಕ ಫೇಮಸ್ ಆದ ನಯನ ಈಗಾಗಲೇ ಕೆಲ ಸಿನಿಮಾ ಮಾಡಿದ್ದಾರೆ. ಅದರ ಜೊತೆಗೆ ಈಗ ಈ ಚಿತ್ರದಲ್ಲಿಯೂ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಈ ಸಿನಿಮಾದ ಜೊತೆಗೆ ನಯನ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಕುರಿ ಪ್ರತಾಪ್ ಮತ್ತು ನಯನ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಸಿನಿಮಾಗೆ 'ಮಿಸ್ಟರ್ ಜೈ' ಎನ್ನುವ ಹೆಸರು ಇಡಲಾಗಿದೆ.

'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. 'ಅಂಜನೀಪುತ್ರ' ಚಿತ್ರದ ನಂತರ ಹರ್ಷ ಡೈರೆಕ್ಟ್ ಮಾಡುತ್ತಿರುವ ಸಿನಿಮಾ ಇದಾಗಿದೆ. ಇಷ್ಟು ದಿನ ತಮ್ಮ ಸಿನಿಮಾಗಳಲ್ಲಿ ಆಂಜನೇಯನ ಆರಾಧನೆ ಮಾಡುತ್ತಿದ್ದ ಹರ್ಷ ಈಗ ಶ್ರೀ ರಾಮನ ನಾಮ ಹಾಡುತ್ತಿದ್ದಾರೆ. ಈ ಸಿನಿಮಾವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. 'ಸೀತಾರಾಮ ಕಲ್ಯಾಣ' ಹಳ್ಳಿಯಲ್ಲಿ ನಡೆಯುವ ಕಥೆ ಆಗಿದೆ. ಈ ಹಿಂದೆ ಬಂದ 'ಚಂದ್ರಚಕೋರಿ' ಚಿತ್ರದ ಮಾದರಿಯಲ್ಲಿ ಈ ಸಿನಿಮಾ ಇರಲಿದೆ.


Click it and Unblock the Notifications











