»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ 'ನಯನಾ'

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ 'ನಯನಾ'

Posted By:
Subscribe to Filmibeat Kannada
ಕಾಮಿಡಿ ಖಿಲಾಡಿ ನಯನ ಮದುವೆ ಆಗೇ ಹೋಯ್ತಾ ? | Filmibeat Kannada

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕವೇ ಮನೆ ಮಾತಾಗಿದ್ದ ಕಲಾವಿದ ನಯನಾ. ತಂದೆಯ ವಿರೋಧದ ನಡುವೆಯೂ ಅಭಿನಯ ಮಾಡಲೇಬೇಕೆಂದು ಕಾಮಿಡಿ ಕಿಲಾಡಿಗಳು ತಂಡ ಸೇರಿಕೊಂಡು ಯಾವುದೇ ಪಾತ್ರಕ್ಕೂ ನ್ಯಾಯ ದೊರಕಿಸಿ ಕೊಡುವಂತ ಶಕ್ತಿ ಹೊಂದಿದ್ದ ನಟಿ ನಯನಾ.

53ನೇ ವಯಸ್ಸಿನಲ್ಲಿ ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಮತ್ತೊಂದು ಮದುವೆ!

ಕಿರುತೆರೆಯ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡ ನಯನಾ ಹಸೆಮಣೆ ಏರಿದ್ದಾರೆ . ಕಿರುತೆರೆಯಿಂದ ಈಗಷ್ಟೇ ಬೆಳ್ಳಿತೆರೆ ಕಡೆಗೆ ಮುಖ ಮಾಡಿದ್ದ ನಯನಾ ಮದುವೆ ಸಮಾರಂಭ ಇತ್ತೀಚಿಗಷ್ಟೆ ನಡೆದಿದೆ. ಈ ವಿಚಾರ ಕೇಳಿದ ತಕ್ಷಣ ಎಲ್ಲರಿಗೂ ಎನ್ನಿಸುವುದು ಅರೆ ನಯನಾ ಮದುವೆ ಆಗೋಯ್ತಾ ಅಂತ. ಹೌದು ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಾಗಾದರೆ ನಯನಾ ಮದುವೆ ಆದ ಹುಡುಗ ಯಾರು? ಮದುವೆ ಎಲ್ಲಿ ನಡೆಯಿತು? ಯಾರೆಲ್ಲಾ ಮದುವೆ ಸಮಾರಂಭದಲ್ಲಿ ಬಾಗಿ ಆಗಿದ್ದರು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಕಾಮಿಡಿ ಕಿಲಾಡಿ ನಯನಾ ಮದುವೆ

ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಪರಿಚಿತರಾದ ನಯನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶರತ್ ಎಂಬುವವರ ಜೊತೆ ನಯನಾ ಸಪ್ತಪದಿ ತುಳಿದಿದ್ದಾರೆ.

ಶರತ್ ವೆಡ್ಸ್ ನಯನಾ

ನಯನಾ ಇತ್ತೀಚಿಗಷ್ಟೆ ಶರತ್ ಅವರ ಜೊತೆಯಲ್ಲಿ ಸಪ್ತಪದಿ ತುಳಿದಿದ್ದು ಶರತ್ ಬೆಂಗಳೂರಿನಲ್ಲಿ ಉದ್ಯಮಿ ಆಗಿದ್ದಾರೆ. ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಂಡ ಜೋಡಿ ಬೆಂಗಳೂರಿನ ಗೆಳೆಯರಿಗಾಗಿ ಆರತಕ್ಷತೆ ಮಾಡಿಕೊಂಡಿದೆ.

ಅರೆಂಜ್ ಮ್ಯಾರೆಜ್

ಶರತ್ ನಟಿ ನಯನಾ ಅವರ ಸಂಬಂಧಿಕರೇ ಆಗಬೇಕಂತೆ. ಇಬ್ಬರು ಮನೆಯಲ್ಲಿ ಮಾತನಾಡಿ ಇಬ್ಬರಿಗೂ ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಗುರು ಹಿರಿಯರ ಮಾತಿನಂತೆ ನಯನಾ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ನಯನಾ ಮದುವೆಯಲ್ಲಿ ಶಿವರಾಜ್ ಕೆ ಆರ್ ಪೇಟೆ

ನಟಿ ನಯನಾ ಮದುವೆ ಸಮಾರಂಭದಲ್ಲಿ ನಟ ಶಿವರಾಜ್ ಕೆ ಆರ್ ಪೇಟೆ ಭಾಗಿ ಆಗಿದ್ದಾರೆ. "ಜೋರು ಮಾತುಗಳಿಂದಲೇ ಕನ್ನಡಿಗರ ಮನಗೆದ್ದ ನನ್ನ ಮುದ್ದು ತಂಗಿ ಇಂದು ಹಸೆಮಣೆ ಏರಿದ್ದಾಳೆ.‌ ಅವಳ ವೈವಾಹಿಕ ಬದುಕು ಸುಂದರವಾಗಿರದಲಿ, ಇನ್ನು ಬೆಟ್ಟದಷ್ಟು ಅವಕಾಶಗಳು ಬಂದು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುವಂತಾಗಲಿ ಅಂತ ಹಾರೈಸುತ್ತೇನೆ. ಹ್ಯಾಪಿ ಮ್ಯಾರಿಡ್ ಲೈಫ್ ನಯನ ಶರತ್" ಎಂದು ಶುಭ ಕೋರಿದ್ದಾರೆ.

ಯುಜುವೇಂದ್ರ ಚಹಾಲ್ ಲವ್ ಸ್ಟೋರಿಗೆ ಬ್ರೇಕ್ ಹಾಕಿದ ತನಿಷ್ಕಾ

English summary
Kannada Comedy Kiladigalu Fame Nayana married recently. Nayana married his relative Sharat. Actor Shivaraj K Rao is also visit the wedding ceremony

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X