»   » 'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಈಗ 'ಭಾಗ್ಯವಂತ'

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಈಗ 'ಭಾಗ್ಯವಂತ'

Posted By:
Subscribe to Filmibeat Kannada

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಲೋಕೇಶ್ ಕುಮಾರ್ ಮತ್ತೆ ನಿಮ್ಮುಂದೆ 'ಕಿಲಾಡಿ ಕುಟುಂಬ'ದ ಮೂಲಕ ಬಂದಿದ್ದಾರೆ. ಇದರ ಜೊತೆಗೆ ಲೋಕೇಶ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ.

ಲೋಕೇಶ್ ಕುಮಾರ್ ನಿಜಕ್ಕೂ 'ಭಾಗ್ಯವಂತ'. ಅದಕ್ಕೆ ಈಗ 'ಭಾಗ್ಯವಂತರು' ಎಂಬ ಹೊಸ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಲೋಕೇಶ್ ಜೊತೆಯಲ್ಲಿ ಶ್ರವಂತ್ ಮತ್ತು ಸೂರಜ್ ಕೂಡ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!

Comedy kiladigalu Lokesh Kumar New Movie Bhagyavantharu

ಕಥೆ-ಚಿತ್ರಕಥೆ ಬರೆದು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿರುವುದು ಎಂ. ಹರಿಕೃಷ್ಣ. ಎಂ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಬಸವಣ್ಣ ಮೆಳ್ಳಹಳ್ಳಿ ಅವರ ಸಂಗೀತ, ಕುಮಾರ್ ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನುಳಿದಂತೆ ಶ್ರೀನಾಥ್, ಸುಧಾರಾಣಿ, ಸುಚೇಂದ್ರ ಪ್ರಸಾದ್, ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ'

English summary
Lokesh Kumar, Fame of Zee Kannada Channel's popular show 'Comedy Khiladigalu' is Acting in a New Film Called 'Bhagyavantharu'. The Movie Directed By M Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada