'ಕಾಮಿಡಿ ಕಿಲಾಡಿ' ನಯನಗೆ ದರ್ಶನ್ ಕಡೆಯಿಂದ ಬಂತು ಬಿಗ್ ಆಫರ್
Recommended Video

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಗೆ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗುತ್ತಿದೆ. ಇತ್ತೀಚಿಗಷ್ಟೆ ನಯನ ಕಾಣಿಸಿಕೊಂಡಿದ್ದ 'ಜಂತರ್ ಮಂತರ್' ಸಿನಿಮಾ ತೆರೆಕಂಡಿತ್ತು. ಈ ಮಧ್ಯೆ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಯನ ನಟಿಸುತ್ತಿದ್ದಾರೆ.
ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾದಲ್ಲಿ ನಯನಗೆ ಅವಕಾಶ ಸಿಕ್ಕಿದೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಯಜಮಾನ' ಚಿತ್ರದಲ್ಲಿ ನಯನ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈಗಷ್ಟೇ 'ಯಜಮಾನ' ಚಿತ್ರದ ಟೈಟಲ್ ಘೋಷಣೆಯಾಗಿದ್ದು, ಟೈಟಲ್ ಟೀಸರ್ ಕೂಡ ಬಿಡುಗಡೆಯಾಗಿದೆ. ಸದ್ಯ, 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಮುಗಿಸಿರುವ ದಾಸ 'ಯಜಮಾನ' ಚಿತ್ರದ ಚಿತ್ರೀಕರಣವನ್ನ ಆರಂಭಿಸಲಿದ್ದಾರೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಧನಂಜಯ್, ರವಿಶಂಕರ್ ಮತ್ತು ತೆಲುಗಿನ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇನ್ನುಳಿದಂತೆ ನಿಖಿಲ್ ಕುಮಾರ್ ಅವರ 'ಸೀತಾರಾಮ ಕಲ್ಯಾಣ' ಹಾಗೂ ವಿನಯ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ಅನಂತು ವರ್ಸಸ್ ನಸ್ರುತ್' ಚಿತ್ರದಲ್ಲೂ ನಯನ ಮಿಂಚಲಿದ್ದಾರೆ.


Click it and Unblock the Notifications











