ಯಜಮಾನನ ಸಕ್ಸಸ್ ಮೀಟ್ ನಲ್ಲಿ ಕಣ್ಣೀರಿಟ್ಟ 'ಕಾಮಿಡಿ ಕಿಲಾಡಿ' ಸಂಜು ಬಸಯ್ಯ

Recommended Video

Yajamana Movie: ಯಜಮಾನನ ಸಕ್ಸಸ್ ಮೀಟ್ ನಲ್ಲಿ ಕಣ್ಣೀರಿಟ್ಟ 'ಕಾಮಿಡಿ ಕಿಲಾಡಿ' ಸಂಜು ಬಸಯ್ಯ | FILMIBEAT KANNADA

'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಸಂಜು ಬಸಯ್ಯ ಕರ್ನಾಟಕ ಜನರ ಮನೆಮಾತಾಗಿದ್ದರು. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತಿಗೆ ಸಂಜು ಬಸಯ್ಯ ಸೂಕ್ತ ಅನಿಸುತ್ತೆ. ಅದ್ಭುತ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಸಂಜು ಯಜಮಾನ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಕಣ್ಣೀರಿಟಿದ್ದಾರೆ.

ಅಷ್ಟಕ್ಕೂ ಸಂಜು ವೇದಿಕೆ ಮೇಲೆ ನಿಂತು ಗಳಗಳನೆ ಕಣ್ಣೀರಾಗಲು ಕಾರಣ ಡಿ ಬಾಸ್. ಹೌದು, ಯಜಮಾನ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟು ಸಹಾಯ ಮಾಡಿದ ನಯಾ ಯಜಮಾನ ದರ್ಶನ್ ನೆನೆದು ಸಂಜು ಬಸಯ್ಯ ಅತ್ತಿದ್ದಾರೆ. ಹಾಸ್ಯ ಮಾಡುತ್ತಲೇ ಮೈಕ್ ಕೈಗೆತ್ತಿಕೊಂಡ ಸಂಜು ಯಜಮಾನ ಚಿತ್ರದಿಂದ ಸಿಕ್ಕ ಜನರ ಪ್ರೀತಿಯನ್ನು ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಈ ವೇಳೆ ಚಿತ್ರದ ನಿರ್ದೇಶಕ ಹರಿಕೃಷ್ಣ ಬಂದ ಸಂಜು ಬಸಯ್ಯ ಅವರನ್ನ ಸಮಾಧಾನ ಪಡಿಸಿದ್ರು. ಶಿವರಾಜ್ ಕೆ.ಆರ್ ಪೇಟೆ ಸಂಜು ಬಸಯ್ಯ ಬಳಿ ಬಂದು ಮೈಕ್ ತಗೊಂಡು ಮಾತು ಮುಂದುವರಿಸಿದ್ದರು.

Comedy kiladigalu sanju basayya cried in yajamana press meet

ಯಜಮಾನ ಚಿತ್ರದಲ್ಲಿ ಸಂಜು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ದರ್ಶನ್ ಸ್ನೇಹಿತನಾಗಿ ಚಿತ್ರದ್ದುದ್ದಕ್ಕೂ ಡಿ ಬಾಸ್ ಜೊತೆಯಲ್ಲಿಯೇ ಇರುವಂತಹ ಪಾತ್ರ ಸಂಜು ಬಸಯ್ಯ ಅವರದ್ದು. ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿದ್ದ ಸಂಜು ತಮ್ಮ ಮೊದಲ ಸಿನಿಮಾದಲ್ಲೇ ಸ್ಟಾರ್ ನಟನ ಜೊತೆ ಅಭಿನಯಿಸಲು ಅವಕಾಶ ಸಿಕ್ಕ ಸಂತಸಕ್ಕೆ ವೇದಿಕೆ ಮೇಲೆ ಆನಂದಭಾಷ್ಪ ಹರಿಸಿದ್ದಾರೆ.

6 ಕೋಟಿ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಜೊತೆಯಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೂ ಧನ್ಯವಾದ ಹೇಳಿದ್ದಾರೆ. ಯಜಮಾನ, ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ಶೈಲಜಾ ನಾಗ್ ನಿರ್ಮಾಣದ ಯಜಮಾನ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Comedy kiladigalu sanju basayya cried in yajamana movie success press meet. sanju basayya played strong comedy role in yajamana movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X