For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಹಾಸ್ಯ ಕಲಾವಿದರಿಗೊಂದು ಸ್ಪರ್ಧೆ

  By Staff
  |

  ಬೆಂಗಳೂರು, ಜ. 10: ಹಾಸ್ಯ ಪ್ರಜ್ಞೆ ನಿಮ್ಮಲ್ಲಿದೆಯೇ? ಇತರರನ್ನು ನಗಿಸುವ ಆಸೆ ನಿಮಗಿದೆಯೇ? ಅದೂ ಶ್ರೇಷ್ಠ ಕಲಾವಿದರ ಜೊತೆಗೂಡಿ ಅವರೊಂದಿಗೆ ಸ್ಪರ್ಧೆ ನೀಡಿ ನಿಮ್ಮಲ್ಲಿ ಅಡಕವಾಗಿರುವಂತಹ ಹಾಸ್ಯ ಕಲೆಯನ್ನು ಕರ್ನಾಟಕದ ಜನತೆಗೆ ತೋರಿಸುವ ಹಂಬಲ ನಿಮಗಿದ್ದಲ್ಲಿ ಜೀ ಕನ್ನಡ ನಿಮಗೊಂದು ಸದಾವಕಾಶ ಕಲ್ಪಿಸಿಕೊಡುತ್ತಿದೆ.

  ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಜೀ ಕನ್ನಡವಾಹಿನಿಯು 'ಕಾಮೆಡಿ ಕಿಲಾಡಿಗಳು' ಎಂಬ ವಿನೂತನ ಹಾಸ್ಯ ಕಲಾವಿದರ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಹಾಸ್ಯ ಪ್ರಜ್ಞೆಯುಳ್ಳ ಕನ್ನಡಿಗರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತೀ ಕಂತಿನಲ್ಲೂ ನಗೆಯ ಹಬ್ಬವನ್ನು ಸೃಷ್ಟಿಸುವ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೂರವಾಣಿ ಸಂಖ್ಯೆ9741018618ಗೆ ಕರೆ ಮಾಡಿ ತಿಳಿಸಬಹುದಾಗಿದೆ.

  ಸುತ್ತಲಿರುವ ಪ್ರಪಂಚವನ್ನು ನೋಡು ಮತ್ತು ನಗು ಎಂಬ ಉದ್ದೇಶವುಳ್ಳ ಕಾಮಿಡಿ ಕಿಲಾಡಿಗಳು ಕರ್ನಾಟಕದ ವೀಕ್ಷಕರಿಗೆ ಸಕತ್ ಮನರಂಜನೆಯನ್ನು ಒದಗಿಸುವುದಲ್ಲದೇ ವಿನೂತನ ಕಾರ್ಯಕ್ರಮಕ್ಕೆ ವೇದಿಕೆಯೊಂದನ್ನು ಕಲ್ಪಿಸಲಿದೆ. ಕನ್ನಡದ ವಾಹಿನಿಗಳು ಧಾರಾವಾಹಿ, ಸುದ್ದಿ, ಸಿನಿಮಾ ಮತ್ತು ಸಂಗೀತಮಯ ಕಾರ್ಯಕ್ರಮಗಳಿಗೆ ಮಾತ್ರವೇ ಫೇಮಸ್ಸು ಎಂಬ ಮಾತನ್ನು ಜೀ ಕನ್ನಡ ವಾಹಿನಿಯು ಈಗಾಗಲೇ ತನ್ನ ಕುಣಿಯೋಣು ಬಾರಾ, ಎಸ್ಸೆಲ್ ಶ್ರೇಷ್ಠ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ ಮುಂತಾದ ಕಾರ್ಯಕ್ರಮಗಳ ಮೂಲಕ ಅಲ್ಲಗಳೆದಿದ್ದು, ಈಗ ಕಾಮೆಡಿ ಕಿಲಾಡಿಗಳು ಎಂಬ ವಿನೂತನ ಹಾಸ್ಯಮಯ ಪ್ರದರ್ಶನದಿಂದ ಕನ್ನಡದ ಕಿರುತೆರೆ ಏನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಲಿದೆ.

  ಸದಾ ಹೊಸತನವನ್ನು ಹುಡುಕುವ ಜೀ ಕನ್ನಡ ಈ ಬಾರಿ ಹಾಸ್ಯವನ್ನೇ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿದ್ದು 'ಕಾಮೆಡಿ ಕಿಲಾಡಿಗಳು' ಎಂಬ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲಿದ್ದು, ಕರ್ನಾಟಕದ ವಿವಿದೆಡೆ ಅಡಗಿರುವ ಹಾಸ್ಯ ಕಲಾವಿದರನ್ನು ಬೆಳಕಿಗೆ ತರಲು ಕಾಮೆಡಿ ಕಿಲಾಡಿಗಳು ಸಹಕಾರಿಯಾಗಲಿದೆ ಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

  (ದಟ್ಸ್‌ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X