India
  For Quick Alerts
  ALLOW NOTIFICATIONS  
  For Daily Alerts

  'ಉಸಿರೇ ಉಸಿರೇ': ಈ ಸಿನಿಮಾದಲ್ಲಿ ಬರೀ ಕಾಮಿಡಿ ಮಾಡಲ್ವಂತೆ ಸಾಧುಕೋಕಿಲ!

  |

  ಸ್ಯಾಂಡಲ್‌ವುಡ್‌ನಲ್ಲಿ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡಿರುವ ರಾಜೀವ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜೀವ್ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾ 'ಉಸಿರೇ ಉಸಿರೇ' ಸಿನಿಮಾ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ. ಇದೇ ಚಿತ್ರದಲ್ಲಿ ಖ್ಯಾತ ನಟ ಸಾಧುಕೋಕಿಲ ಅಭಿನಯಿಸುತ್ತಿದ್ದಾರೆ. ಸಾಧು ಕೋಕಿಲಾ ಅಂದಕೂಡಲೇ ಹಾಸ್ಯ ಪಾತ್ರಗಳೇ ಕಣ್ಮುಂದೆ ಬರುತ್ತವೆ. ಆದರೆ, ಈ ಸಿನಿಮಾ ಸಾಧು ಫುಲ್ ಡಿಫ್ರೆಂಟ್ ಅಂತೆ.

  ಸಾಧುಕೋಕಿಲಾ ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್. ತಮ್ಮ ವಿಶಿಷ್ಠ ಮ್ಯಾನರಿಸಂನಿಂದಲೇ ಸಾಧು ಕೋಕಿಲಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 'ಉಸಿರೇ ಉಸಿರೇ'ದಲ್ಲೂ ಸಾಧು ಕೋಕಿಲಾ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ ಮಾತ್ರ ಮಾಡುವುದಿಲ್ಲ. ಅದರ ಜೊತೆಗೆ ಬೇರೆ ರೀತಿಯ ಪಾತ್ರದಲ್ಲೂ ಸಾಧು ಕೋಕಿಲಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಸಿ.ಎಂ.ವಿಜಯ್ ನಿರ್ದೇಶಿಸಲಿದ್ದಾರೆ. ಇವರ ಈ ಭಾಗದ ನಟನೆಯ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.

  ಮೇಕೆದಾಟು ಪಾದಯಾತ್ರೆಯಲ್ಲಿ ಸಾಧುಕೋಕಿಲಾ ಭಾಗಿ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿಲ್ಲ ಎಂದ ಹಾಸ್ಯ ನಟ ಮೇಕೆದಾಟು ಪಾದಯಾತ್ರೆಯಲ್ಲಿ ಸಾಧುಕೋಕಿಲಾ ಭಾಗಿ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿಲ್ಲ ಎಂದ ಹಾಸ್ಯ ನಟ

  ಬ್ರಹ್ಮಾನಂದಂ, ಅಲಿ ಕೂಡ ನಟನೆ

  'ಉಸಿರೇ ಉಸಿರೇ' ಸಿನಿಮಾದಲ್ಲಿ ಸಾಧು ಕೋಕಿಲಾ ವಿಶಿಷ್ಠ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಾಸ್ಯ ಪ್ರಿಯರಿಗಾಗಿ ಕಾಮಿಡಿ ದಿಗ್ಗಜರೇ ಅಖಾಡಕ್ಕಿಳಿದಿದ್ದಾರೆ. ತೆಲುಗಿನ ಖ್ಯಾತ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗೂ ಆಲಿ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಕಿಚ್ಚನ ಭಾಗದ ಚಿತ್ರೀಕರಣ ಕೂಡ ನಡೆಯಲಿದೆ.

  ಅಂದ್ಹಾಗೆ 'ಉಸಿರೇ ಉಸಿರೇ' ಒಂದು ಪ್ರೇಮಕಥೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮಾಮೂಲಿ ಪ್ರೇಮಕಥೆಯ ಚಿತ್ರವಾಗಿರದೆ, ಪ್ರೇಮಕಥೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಚಿತ್ರವಾಗಲಿದೆ. ಪ್ರದೀಪ್ ಯಾದವ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

  ಸಾಧು ಕೋಕಿಲಾ ಕಾಮಿಡಿ ಕಿಕ್

  ಸಿ.ಎಂ. ವಿಜಯ್ ಉಸಿರೇ ಉಸಿರೇ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆ ಜೊತೆಗೆ ಒಂದು ಹಾಡನ್ನು ಕೂಡ ವಿಜಯ್ ಅವರೇ ಬರೆದಿದ್ದಾರೆ. ಸಾಧು ಕೋಕಿಲಾ ಅವರ ವಿಶಿಷ್ಠ ಪಾತ್ರ ಪ್ರೇಕ್ಷಕರಿಗೆ ಕಾಮಿಡಿ ಕಿಕ್ ಜೊತೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  Comedy King Sadhu Kokila New Avathara In Usire Usire Movie

  ಐದು ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಅವರ ಸಂಗೀತ ನಿರ್ದೇಶನವಿದೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ಘೋಷ್ ಅಭಿನಯಿಸುತ್ತಿದ್ದಾರೆ. ದೇವರಾಜ್, ಬ್ರಹ್ಮಾನಂದಂ, ಆಲಿ, ಸಾಧುಕೋಕಿಲ, ತಾರಾ, ಮಂಜು ಪಾವಗಡ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ ಮುಂತಾದವರ ಅದ್ದೂರಿ ತಾರಾಬಳಗ ಈ ಚಿತ್ರಕ್ಕಿದೆ.

  English summary
  Comedy King Sadhu Kokila New Avathara In Usire Usire Movie, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X