twitter
    For Quick Alerts
    ALLOW NOTIFICATIONS  
    For Daily Alerts

    ಮನೆಯ ವಸ್ತುಗಳೂ ಕೆಮ್ಮುತ್ತಿವೆ: ಧರ್ಮಣ್ಣನಿಗೆ ಜೀವ ಭಯ!

    |

    ಕೆಮ್ಮಿದವರನ್ನು ಭಯೋತ್ಪಾದಕರಂತೆ ಕಾಣುವ ಅವರಿಂದ ಮಾರು ದೂರ ಓಡುವಂತಹಾ ಸನ್ನಿವೇಶ ಕೊರೊನಾ ವೈರಸ್‌ ನಿಂದ ಸೃಷ್ಟಿಯಾಗಿದೆ.

    Recommended Video

    Nee Nalla Kannada Short Movie | ಕನ್ನಡದ ಪ್ರೇಮ ಕಥೆ ನೀ ನಲ್ಲ

    ಕೆಮ್ಮುವುದು, ಸೀನುವುದು ಈ ಹೊತ್ತಿನಲ್ಲಿ ನಿಷಿದ್ಧ. ಇಂಥಹಾ ಸಂದಿಗ್ಧ ಸಮಯದಲ್ಲಿ ಮನೆಯಲ್ಲಿರುವ ವಸ್ತುಗಳೇ ಕೆಮ್ಮಲು ಪ್ರಾರಂಭಿಸಿದರೆ! ಮನೆಯಲ್ಲಿರುವವರಿಗೆ ಜೀವ ಭಯ ಆಗದೇ ಇರುತ್ತದೆಯೇ?

    ಹೀಗೆ ಆಗಿದೆ 'ರಾಮಾ ರಾಮಾ ರೇ' ಸಿನಿಮಾ ಮೂಲಕ ಬೆಳಕಿಗೆ ಬಂದ ನಟನಾ ಪ್ರತಿಭೆ ಧರ್ಮಣ್ಣನಿಗೆ. ತಮ್ಮ ಮನೆಯಲ್ಲಿ ಜೀವಭಯ ಪ್ರಾರಂಭವಾಗಿದೆ. ಅದಕ್ಕೆ ಕಾರಣ 'ಕೆಮ್ಮು'.

    ಧರ್ಮಣ್ಣ ಹಾಗೂ ಸತ್ಯ ಸಿನಿಮಾ ತಂಡ ಲಾಕ್‌ಡೌನ್ ಸಮಯದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸಿದ್ದು, ಕಿರುಚಿತ್ರದಲ್ಲಿ ಧರ್ಮಣ್ಣ ನಟಿಸಿದ್ದಾರೆ. ತಮಾಷೆಯ ಈ ಕಿರುಚಿತ್ರ, ಕೊರೊನಾ ಜಾಗೃತಿಯನ್ನೂ ಮೂಡಿಸುತ್ತಿದೆ.

    ಧರ್ಮಣ್ಣನ ಮನೆಯಲ್ಲಿರುವ ವಸ್ತುಗಳೂ ಕೆಮ್ಮುತ್ತಿವೆ

    ಧರ್ಮಣ್ಣನ ಮನೆಯಲ್ಲಿರುವ ವಸ್ತುಗಳೂ ಕೆಮ್ಮುತ್ತಿವೆ

    ಮನೆಯಲ್ಲೇ ಉಳಿದು, ಕೊರೊನಾ ಬಗ್ಗೆ ನಿತ್ಯ ಟಿವಿಯಲ್ಲಿ ನೋಡಿ-ನೋಡಿ ಭಯಗೊಂಡಿರುವ ಧರ್ಮಣ್ಣನಿಗೆ, ನಳದಲ್ಲಿ ಬಿಟ್ಟು-ಬಿಟ್ಟು ಬರುವ ನೀರು ಕೆಮ್ಮಿದಂತೆ ಕೇಳಿಸುತ್ತಿದೆ. ಮಿಣಮಿಣಿಸುತ್ತಿರುವ ಲೈಟ್ ಬಲ್ಬ್ ಸಹ ಕೆಮ್ಮಿದಂತೆ ಕೇಳಿಸುತ್ತಿದೆ. ಕುಕ್ಕರ್ ವಿಶಲ್ ಸಹ ಕೆಮ್ಮಿನಂತೆಯೇ ಕೇಳಿ ಜೀವಭಯದಿಂದ ಓಡುತ್ತಿದ್ದಾರೆ ಧರ್ಮಣ್ಣ.

    ನಾವುಗಳೇ ವಸ್ತುಗಳಾಗಿಬಿಟ್ಟಿದ್ದೇವೆಯೇ?

    ನಾವುಗಳೇ ವಸ್ತುಗಳಾಗಿಬಿಟ್ಟಿದ್ದೇವೆಯೇ?

    ನಮಗೆ ಇಷ್ಟು ದಿನ ಅವು (ಟಿವಿ, ಕುಕ್ಕರ್ ಇತರೆ) ವಸ್ತುಗಳಂತೆ ಕಾಣುತ್ತಿದ್ದವು. ಈಗ ನಾವು ಮನೆಯಲ್ಲೇ ಇರುವುದರಿಮದ ಅವುಗಳಿಗೆ ನಾವು ವಸ್ತುಗಳಂತೆ ಕಾಣುತ್ತಿರಬಹುದು ಎಂಬ ಊಹೆಯನ್ನು ಹರಿಬಿಟ್ಟಿದ್ದಾರೆ ಧರ್ಮಣ್ಣ.

    ವಿಭೂತಿಯಂತೆ ಸ್ಯಾನಿಟೈಸರ್ ಹಚ್ಚಿಕೊಳ್ಳುವ ಧರ್ಮಣ್ಣ

    ವಿಭೂತಿಯಂತೆ ಸ್ಯಾನಿಟೈಸರ್ ಹಚ್ಚಿಕೊಳ್ಳುವ ಧರ್ಮಣ್ಣ

    ಸ್ನಾನ ಮಾಡಿ ಹಣೆಗೆ, ಮುಂಗೈಗೆ, ಎದೆಗೆ, ಮೊಣಕೈ ಗೆ ಹೊಟ್ಟೆಯ ಮೇಲೆ ವಿಭೂತಿ ಪಟ್ಟೆಗಳನ್ನಿಟ್ಟುಕೊಳ್ಳುವ ಜಂಗನಂತೆ, ಧರ್ಮಣ್ಣ ಸ್ನಾನಿಟೈಸರ್ ಅನ್ನು 'ಧರಿಸಿಕೊಳ್ಳುತ್ತಿದ್ದಾರೆ'. ತಮಾಷೆಯಾದ ಈ ಕಿರುಚಿತ್ರದ ಅಂತ್ಯದಲ್ಲಿ ಸಾಮಾಜಿಕ ಅಂತರದ ಸಂದೇಶವನ್ನು ಧರ್ಮಣ್ಣ ನೀಡಿದ್ದಾರೆ.

    ''ಈ ಸಲಹೆ ಪಾಲಿಸಿ ಕೊರೊನಾದಿಂದ ಬಚಾವಾಗಿ''

    ''ಈ ಸಲಹೆ ಪಾಲಿಸಿ ಕೊರೊನಾದಿಂದ ಬಚಾವಾಗಿ''

    ವಸ್ತುವೇ ಕೆಮ್ಮಲಿ, ಜನರೇ ಕೆಮ್ಮಲಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಅಥವಾ ಸೋಪು ಉಪಯೋಗಿಸಿ ಕೈ ತೊಳೆದುಕೊಳ್ಳಿ ಕೊರೊನಾ ದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಎಂದು ಧರ್ಮಣ್ಣ ವಿಡಿಯೋದ ಅಂತ್ಯದಲ್ಲಿ ಹೇಳಿದ್ದಾರೆ.

    English summary
    Actor Dharmanna and his team made a short movie about Coronavirus. Its a comedy and awareness short movie.
    Tuesday, April 28, 2020, 13:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X