ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ 'ಕಮಾಂಡೊ' ಹಾಡುಗಳು

By Bharath Kumar

ತಮಿಳು ಸೂಪರ್ ಸ್ಟಾರ್ ಅಜಿತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ 'ಕಮಾಂಡೊ' (ಡಬ್ಬಿಂಗ್ ಚಿತ್ರ) ಸಿನಿಮಾ ಆಗಸ್ಟ್ 31 ರಂದು ಕರ್ನಾಟಕ ರಾಜ್ಯಾದಂತ್ಯ ತೆರೆಕಂಡು, ಪ್ರದರ್ಶನವಾಗುತ್ತಿದೆ.

ಸುಮಾರು 80-90 ಚಿತ್ರಮಂದಿರಗಳಲ್ಲಿ 'ಕಮಾಂಡೊ' ಸಿನಿಮಾ ಬಿಡುಗಡೆಯಾಗಿತ್ತು. ಇದೀಗ, ಕಮಾಂಡೊ ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಸದ್ದು ಮಾಡುತ್ತಿದೆ. 'ಸೋನಿ ಮ್ಯೂಸಿಕ್ ಸೌತ್ ವಿವೋ' ಯ್ಯೂಟ್ಯೂಬ್ ಚಾನಲ್ ನಲ್ಲಿ ಕಮಾಂಡೊ ಹಾಡುಗಳು ಲಭ್ಯವಿದೆ.

ಈ ಮೂಲಕ ಕಮಾಂಡೊ ಚಿತ್ರದ ಟ್ರೈಲರ್ ನ್ನ ನೋಡಿದ್ದ ಅಭಿಮಾನಿಗಳು ಈಗ ಕಮಾಂಡೊ ಹಾಡುಗಳನ್ನ ಕೂಡ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ತಮಿಳಿನಲ್ಲಿ ಕೇಳಿದ್ದ ಹಾಡುಗಳನ್ನ ಕನ್ನಡದಲ್ಲಿ ಕೇಳಬಹುದಾಗಿದೆ.

Commando songs released in youtube

ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಮತ್ತು ಎರಡು ಬಿಟ್ ಸಾಂಗ್ ಇತ್ತು. ಈಗ ನಾಲ್ಕು ಕನ್ನಡ ಹಾಡುಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿದ್ದ ಈ ಹಾಡುಗಳಿಗೆ ಕನ್ನಡದಲ್ಲಿ ನವೀನ್ ಮತ್ತು ಪ್ರಮೋದ್ ಜೋಶಿ ಎಂಬುವರು ಸಾಹಿತ್ಯ ಬರೆದಿದ್ದಾರೆ.

ಇನ್ನುಳಿದಂತೆ ಅಜಿತ್ ಕುಮಾರ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವ ನಿರ್ದೇಶನ ಮಾಡಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಇನ್ನುಳಿದಂತೆ 'ಕಮಾಂಡೊ' ಚಿತ್ರಕ್ಕೆ 'ಕೊಲಾವರಿ ಡಿ' ಖ್ಯಾತಿ ಅನಿರುಧ್ ಸಂಗೀತ ಸಂಯೋಜನೆ ನೀಡಿದ್ದು, ಹರಿವು ಕ್ರಿಯೇಷನ್ಸ್ ಸಂಸ್ಥೆ ಕಮಾಂಡೊ ಚಿತ್ರವನ್ನ ಕನ್ನಡಕ್ಕೆ ತಂದಿದ್ದು, ವಿಶಾಲ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Commando movie songs has released in youtube. the movie starring Ajith Kumar, Vivek Oberoi, Kajal Agarwal, Akshara Hassan and directed by siva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X