ವಿನಯ್ ಚಿತ್ರದ ಬಗ್ಗೆ ಜನರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ.!
Recommended Video

ಡಾ ರಾಜ್ ಕುಮಾರ್ ಅವರ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಸಿನಿಮಾ 'ಗ್ರಾಮಾಯಣ' ಇತ್ತೀಚಿಗಷ್ಟೆ ಟೀಸರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿದೆ.
ಡಾ ರಾಜ್ ಹುಟ್ಟಿ ಬೆಳೆದ ಮನೆಯಿಂದ ಕಥೆ ಆರಂಭಿಸಿರುವ ಈ ಸಿನಿಮಾ, ತುಂಬಾ ವಿಶೇಷವಾಗಿ ಟೀಸರ್ ಕಟ್ ಮಾಡಿದೆ. ಇನ್ನು ವಿನಯ್ ಲುಕ್ ಅಂತೂ 'ಬಹುಪರಾಕ್' ಎನ್ನುವಂತಿದೆ. ಟೀಸರ್ ನಲ್ಲಿ ಸ್ವತಃ ರಾಜ್ ಕುಮಾರ್ ಅವರ ಧ್ವನಿ ಪ್ರೇಕ್ಷಕರನ್ನ ಸೆಳೆಯುತ್ತಿದೆ. ತಮ್ಮ ಗಾಜನೂರಿನ ಬಗ್ಗೆ ಸ್ವತಃ ಅಣ್ಣಾವ್ರೇ ಪರಿಚಯ ಮಾಡಿಕೊಟ್ಟಿದ್ದಾರೆ.
ಹೀಗೆ ಮೊದಲ ನೋಟದಲ್ಲೇ ಕನ್ನಡ ಕಲಾಭಿಮಾನಿಗಳ ಹೃದಯ ಮುಟ್ಟಿರುವ 'ಗ್ರಾಮಾಯಣ' ಚಿತ್ರದ ಬಗ್ಗೆ ಸ್ವತಃ ಅಣ್ಣಾವ್ರ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಈ ಟೀಸರ್ ನೋಡಿದ ಜನರು ಯ್ಯೂಟ್ಯೂಬ್ ನಲ್ಲಿ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ. ಬಹುಶಃ ಈ ಕಾಮೆಂಟ್ ನೋಡ್ತಿದ್ರೆ, ವಿನಯ್ ಈಗಲೇ ಸಿನಿಮಾವನ್ನ ಗೆದ್ದಿದ್ದಾರೆ ಎನಿಸುತ್ತಿದೆ. ಅಷ್ಟಕ್ಕೂ, ಜನ ಏನು ಅಂದುಕೊಳ್ಳುತ್ತಿದ್ದಾರೆ.? ಮುಂದೆ ಓದಿ.....

ವಿನಯ್ ಕೈ ಹಿಡಿಯೋ ಸಿನಿಮಾ
'ಸಿದ್ಧಾರ್ಥ್' ಹಾಗೂ 'ರನ್ ಆಂಟನಿ' ಚಿತ್ರಗಳಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಆದ್ರೆ, 'ಗ್ರಾಮಾಯಣ' ಸಿನಿಮಾ ವಿನಯ್ ಅವರು ಕೈಹಿಡಿಯಲಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ಫಸ್ಟ್ ಲುಕ್ ನೋಡಿಯೇ ಸಿನಿಮಾ ಚೆನ್ನಾಗಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

ಇದು ರಾಜಮನೆತನ ಸಿನಿಮಾ
ಈ ಟೀಸರ್ ನೋಡ್ತಿದ್ರೆ, ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ ಅನಿಸುತ್ತಿದೆ. ಪಕ್ಕಾ ಸಿನಿಮಾ ಹಿಟ್ ಆಗುತ್ತೆ. ರಾಜವಂಶಕ್ಕೆ ಮುಂದಿನ ಪವರ್ ಸ್ಟಾರ್ ಅಂದ್ರೆ ಇವರೇ. ಟೀಸರ್ ನೋಡಿ ನಮ್ಮ ಹಳೆಯ ನೆನಪುಗಳು ಕಾಡುತ್ತಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ಹಳ್ಳಿಯನ್ನ ಮಿಸ್ ಮಾಡ್ಕೊಳ್ತೀನಿ
ತಮಿಳುನಾಡಿನಲ್ಲಿ ವಾಸವಾಗಿರುವ ಅಭಿಮಾನಿಯೊಬ್ಬ ಗ್ರಾಮಾಯಣ ಚಿತ್ರದ ಟೀಸರ್ ಗೆ ಕಾಮೆಂಟ್ ಮಾಡಿದ್ದು, 'ನಿಜ ಸರ್, ನಾನು ಈಗ ತಮಿಳುನಾಡಿನಲ್ಲಿ ಇದ್ದೇನೆ. ನನ್ ಹಳ್ಳಿಯನ್ನ ತುಂಬಾ ಮಿಸ್ ಮಾಡಿಕೊಳ್ತೀನಿ. ಆದ್ರೆ, ನಮ್ ಹಳ್ಳಿ ಕೂಡ ನಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ ಅಂತ ಇವಾಗ ಗೊತ್ತಾಗ್ತಿದೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ವಿನಯ್ ಗೆ ಬ್ರೇಕ್ ಪಕ್ಕಾ
ಈ ಟೀಸರ್ ನೋಡಿಯೇ ಹಲವರು ಜನರು, ಈ ಸಿನಿಮಾ ವಿನಯ್ ರಾಜ್ ಕುಮಾರ್ ಗೆ ಬ್ರೇಕ್ ನೀಡುತ್ತೆ ಎಂಬ ಭವಿಷ್ಯ ನುಡಿಯುತ್ತಿದ್ದಾರೆ. ಟೀಸರ್ ತುಂಬಾ ಚೆನ್ನಾಗಿದೆ, ಯೂನಿಕ್ ಆಗಿದೆ ಎಂದು ಕಾಮೆಂಟ್ ಮಾಡ್ತಿದ್ದಾರೆ.

ರಾಜ್ ಕುಮಾರ್ ರಾಕ್ಸ್
ಟೀಸರ್ ಅದ್ಭುತವಾಗಿದೆ. ಡಾ ರಾಜ್ ಕುಮಾರ್ ವಾಯ್ಸ್ ಸೂಪರ್. ಕೇಳೋಕೆ ಒಂದು ಖುಷಿ. ಅಣ್ಣಾವ್ರಿಗೆ ಒಂದು ಲೈಕ್ ಕೊಡಿ ಎಂದು ಕೆಲವರು ಸಂತಸಗೊಂಡಿದ್ದಾರೆ.


Click it and Unblock the Notifications











