»   » ಫೇಸ್ ಬುಕ್ ರಣರಂಗ: ಜೋರಾಯ್ತು ಯಶ್-ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಷ್ಟಿ ಕಾಳಗ.!

ಫೇಸ್ ಬುಕ್ ರಣರಂಗ: ಜೋರಾಯ್ತು ಯಶ್-ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಷ್ಟಿ ಕಾಳಗ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರೆಲ್ಲ 'ಒಗ್ಗಟ್ಟಿನ' ಮಂತ್ರ ಜಪಿಸಬಹುದು. ಆದ್ರೆ, ಸ್ಟಾರ್ ಗಳನ್ನೇ 'ದೇವರಂತೆ' ಪೂಜಿಸುವ ಅಭಿಮಾನಿಗಳು ಹಾಗಲ್ಲ. ತಮ್ಮ 'ಆರಾಧ್ಯ ದೈವ'ನ ಕುರಿತು ಯಾರೇ 'ಚ'ಕಾರ ಎತ್ತಿದರೂ, ಸುಮ್ನೆ ಕೂರುವ ಜಾಯಮಾನ ಅಭಿಮಾನಿಗಳದ್ದಲ್ಲ. 'ಅತಿರೇಕ' ಆದರೂ ಸರಿಯೇ, ತಂಟೆಗೆ ಬಂದವರನ್ನ ತರಾಟೆಗೆ ತೆಗೆದುಕೊಳ್ಳದೇ ಅಭಿಮಾನಿಗಳು ಸೈಲೆಂಟ್ ಆಗಿ ಇರುವುದಿಲ್ಲ. ಈಗ ಆಗಿರುವುದು ಇದೇ.! ಫೇಸ್ ಬುಕ್ 'ರಣರಂಗ'ವಾಗಿ ಪರಿಣಮಿಸಲು ಕಾರಣ ಇದೇ 'ಅಭಿಮಾನದ ಪರಾಕಾಷ್ಟೆ'.!

ಈ ಬಾರಿ ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಮೂಲಕ ಮುಷ್ಟಿ ಕಾಳಗಕ್ಕೆ ಇಳಿದಿರುವವರು ರಕ್ಷಿತ್ ಶೆಟ್ಟಿ ಅಭಿಮಾನಿಗಳು ಮತ್ತು ಯಶ್ ಫ್ಯಾನ್ಸ್. ಅಭಿಮಾನಿಗಳ ನಡುವಿನ ಘೋರ ಸಮರಕ್ಕೆ ಕಾರಣವಾಗಿರುವುದು ಒನ್ಸ್ ಅಗೇನ್ 'ವೀಕೆಂಡ್ ವಿತ್ ರಮೇಶ್'.!

ಕದನ ಶುರು ಆಗಲು ಮೂಲ ಕಾರಣ ಇದೇ.!

'ಸಾಧಕರ ಸೀಟ್' ಮೇಲೆ ರಕ್ಷಿತ್ ಶೆಟ್ಟಿ ಆಸೀನರಾಗಿದ್ದರಿಂದ ಅನೇಕ ವೀಕ್ಷಕರು ತಮ್ಮ ಅಸಮಾಧಾನವನ್ನ ಫೇಸ್ ಬುಕ್ ನಲ್ಲಿ ಹೊರಹಾಕಿದ್ದುಂಟು. 'ಸಾಧಕರ ಸೀಟ್' ಮೇಲೆ ರಕ್ಷಿತ್ ಶೆಟ್ಟಿ ಇಷ್ಟು ಬೇಗ ಕೂರಬಾರದಿತ್ತು ಎಂಬ ಅಭಿಪ್ರಾಯ ವೀಕ್ಷಕರ ವಲಯದಿಂದ ಈಗಲೂ ಹೆಚ್ಚಾಗಿ ಕೇಳಿಬರುತ್ತಿದೆ. ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಹಾಗೂ ಯಶ್ ಫ್ಯಾನ್ಸ್ ನಡುವೆ 'ಕದನ' ಶುರುವಾಗಲು ಮೂಲ ಕಾರಣ ಇದೇ.! ['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]

ರಕ್ಷಿತ್ ಪರ ಬ್ಯಾಟಿಂಗ್ ಮಾಡಲು ನಿಂತ ಅಭಿಮಾನಿ

''ಸಾಧಕರ ಸೀಟ್' ಮೇಲೆ ಕೂರಲು ರಕ್ಷಿತ್ ಶೆಟ್ಟಿ ಅರ್ಹರಲ್ಲ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿ ಬರುತ್ತಿದ್ದಾಗ ರಕ್ಚಿತ್ ಶೆಟ್ಟಿ ಅಭಿಮಾನಿಯೊಬ್ಬರು 'ಸಿಂಪಲ್ ಸ್ಟಾರ್' ಪರ ಬ್ಯಾಟಿಂಗ್ ಮಾಡಲು ನಿಂತರು. [ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.!]

ರಕ್ಷಿತ್ ಶೆಟ್ಟಿ ಅಭಿಮಾನಿ ಮಾಡಿದ ಕಾಮೆಂಟ್ ಇದು..

ರಕ್ಷಿತ್ ಶೆಟ್ಟಿ ಪರ ಬ್ಯಾಟ್ ಬೀಸುವ ನೆಪದಲ್ಲಿ, ''ಯಶ್ ಬಂದಾಗ ಇನ್ನೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಂದಿರಲಿಲ್ಲ. ಆಗ ಏನೂ ಹೇಳಲಿಲ್ಲ. ಈಗ ರಕ್ಷಿತ್ ಶೆಟ್ಟಿ ಬಂದರೆ ಯಾಕ್ರೀ ಅನರ್ಹ ಎನ್ನುತ್ತೀರಾ.? ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ ಉತ್ತಮ ನಟ'' ಎಂದು ರಕ್ಷಿತ್ ಶೆಟ್ಟಿ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದರು.

ನಿಮಗೆ ನೆನಪಿದ್ಯಾ.?

'ವೀಕೆಂಡ್ ವಿತ್ ರಮೇಶ್' ಮೊದಲ ಸೀಸನ್ ನಲ್ಲಿ ಐದನೇ ಅತಿಥಿಯಾಗಿ ರಾಕಿಂಗ್ ಸ್ಟಾರ್ ಯಶ್ 'ಸಾಧಕರ ಸೀಟ್' ಮೇಲೆ ಕೂತಿದ್ದರು. ಇದನ್ನೇ ನೆನಪಿಸಿಕೊಂಡು ರಕ್ಷಿತ್ ಶೆಟ್ಟಿ ಅಭಿಮಾನಿಯೊಬ್ಬರು ಹೋಲಿಕೆ ಮಾಡಿದ್ದೇ ದೊಡ್ಡ ಗಲಾಟೆಗೆ ನಾಂದಿ ಹಾಡಿದೆ.

ರೊಚ್ಚಿಗೆದ್ದ ಯಶ್ ಫ್ಯಾನ್ಸ್

ಹೋಲಿಕೆ ಮಾಡಿದ ಕಾಮೆಂಟ್ ನೋಡಿದ ಕೂಡಲೆ ಯಶ್ ಫ್ಯಾನ್ಸ್ ರೊಚ್ಚಿಗೆದ್ದರು. ''ಯಶ್ ಬ್ಯಾಕ್ ಗ್ರೌಂಡ್ ಏನು.? ರಕ್ಷಿತ್ ಶೆಟ್ಟಿ ಬ್ಯಾಕ್ ಗ್ರೌಂಡ್ ಏನು.? 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬರುವ ಮುನ್ನವೇ ಯಶ್ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಕೊಟ್ಟಿದ್ದರು'' ಎಂದು ಯಶ್ ಫ್ಯಾನ್ಸ್ ಸಮರ ಆರಂಭಿಸಿದರು.

ಏಟು ಕೊಡ್ತಾರೆ ಅಷ್ಟೇ.!

ಯಶ್ ತಂಟೆಗೆ ಬಂದ್ರೆ ಏನಾಗುತ್ತೆ ಅಂತ ಯಶ್ ಅಭಿಮಾನಿ ಮಾಡಿರುವ ಕಾಮೆಂಟ್ ಇಲ್ಲಿದೆ ನೋಡಿ....

ವಾಕ್ಸಮರ ಶುರು.!

ಇಲ್ಲಿಂದಲೇ ನೋಡಿ ವಾಕ್ಸಮರ ಶುರು ಆಗಿದ್ದು... ಭಾಷೆ ಮೇಲೆ ನಿಗಾ ಇರಲಿ ಅಂತ ಒಬ್ಬರು ಹೇಳಿದ್ರೆ, ಹೋಲಿಕೆ ಯಾಕೆ ಅಂತ ಇನ್ನೊಬ್ಬರು ಶುರು ಮಾಡಿದ್ರು.

ಕುರುಕ್ಷೇತ್ರ ನಡೆಯುತ್ತೆ.!

ಯಶ್ ಬಾಸ್ ಬಗ್ಗೆ ಮಾತನಾಡಿದ್ರೆ ಸುಮ್ನೆ ಇರಲ್ಲ. ಕುರುಕ್ಷೇತ್ರ ಯುದ್ಧ ನಡೆಯುತ್ತೆ. ಸ್ವಾಭಿಮಾನಕ್ಕೆ ಧಕ್ಕೆ ಉಂಟಾದರೆ, ಯಶ್ ಅಭಿಮಾನಿಗಳು ಸುಮ್ನೆ ಬಿಡಲ್ಲ ಎಂದು ಯಶ್ ಅಭಿಮಾನಿಗಳು ಘರ್ಜಿಸುತ್ತಿದ್ದಾರೆ.

ಫೇಸ್ ಬುಕ್ ರಣರಂಗ

ಕಾಮೆಂಟ್ ಗಳ ಸಮರದಿಂದ ಈಗ ಫೇಸ್ ಬುಕ್ ರಣರಂಗವಾಗಿದೆ. ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಯುದ್ಧ ನಡೆಯುತ್ತಲೇ ಇದೆ. ಇದು ಎಲ್ಲಿಗೆ ಹೋಗಿ ತಲುಪುತ್ತೋ... ದೇವರೇ ಬಲ್ಲ.

English summary
Comments War between Rakshit Shetty fans and Yash fans in Facebook

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada