For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕೆ ಬಂತು ಕಾಮನ್ ಡಿಪಿ

  |
  ದರ್ಶನ್ ಹುಟ್ಟುಹಬ್ಬಕ್ಕೆ ಬಂತು ಕಾಮನ್ ಡಿಪಿ | FILMIBEAT KANNADA

  ನಟ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ದರ್ಶನ್ ಬರ್ತ್ ಡೇ ಆಚರಣೆಗೆ ಅಭಿಮಾನಿಗಳ ತಯಾರಿಗಳು ಶುರು ಆಗಿವೆ. ಇದೀಗ ದರ್ಶನ್ ಅವರ ಕಾಮನ್ ಡಿಪಿ ಕೂಡ ಸಿದ್ದವಾಗಿದೆ.

  ಸ್ಟಾರ್ ಗಳ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಳಸುವ ಟ್ರೆಂಡ್ ಈಗ ಜೋರಾಗಿದೆ. ದರ್ಶನ್ ಅಭಿಮಾನಿಗಳು ಸಹ ಇದನ್ನು ಮಾಡುತ್ತಿದ್ದು, ನಿನ್ನೆ ಡಿಪಿ ಹೊರಬಂದಿದೆ. ದರ್ಶನ್ ಫ್ಯಾನ್ಸ್ ಗಳ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆ ಡಿಪಿ ಕಂಗೊಳಿಸುತ್ತಿದೆ.

  ದರ್ಶನ್ ತಂದೆಗೆ ಕಿಡ್ನಿ ಸಮಸ್ಯೆಯಾದಾಗ ಕಾಪಾಡಿತ್ತು ಈ ಸಂಸ್ಥೆ

  'ಯಜಮಾನ' ಸಿನಿಮಾದ ಫೋಟೋ ಬಳಸಿ ಈ ಡಿಪಿಯನ್ನು ಮಾಡಲಾಗಿದೆ. ಜೊತೆಗೆ 'ಕುರುಕ್ಷೇತ್ರ' ದುರ್ಯೋದನ ಕೂಡ ನಿಂತಿದ್ದಾನೆ. 'ಬಾಸ್ ಪರ್ವ.. ಸುಲ್ತಾನ್ ಸಂಭ್ರಮ' ಹೆಸರಿನಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.

  ದರ್ಶನ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಕೊಳ್ಳುವುದಾಗಿ ಹೇಳಿದ್ದಾರೆ. ಅಂಬರೀಶ್ ಅವರ ನಿಧನದ ಹಿನ್ನಲೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ದರ್ಶನ್ ಇಷ್ಟ ಪಟ್ಟಿಲ್ಲ. ಆದರೂ, ಅಭಿಮಾನಿಗಳಿಗಾಗಿ ಸಿಂಪಲ್ ಆಗಿ ಅವರು ಬರ್ತ್ ಡೇ ಮಾಡಿಕೊಳ್ಳುತ್ತಿದ್ದಾರೆ.

  ಅಂದಹಾಗೆ, ದರ್ಶನ್ ನಟನೆಯ 'ಯಜಮಾನ' ಸಿನಿಮಾದ ನಾಲ್ಕನೇ ಹಾಡು ನಾಳೆ ಬಿಡುಗಡೆಯಾಗುತ್ತಿದೆ.

  English summary
  Common dp for Challenging Star Darshan birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X