ಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕಟ್ ಮಾಡಿದ ವಿಜಯ್ ವಿರುದ್ಧ ಕೇಸ್ ದಾಖಲು
Recommended Video
ತಲ್ವಾರ್ ನಲ್ಲಿ ಕೇಕ್ ಕತ್ತರಿ ವಿವಾದ ಮೈಮೇಲೆ ಎಳೆದುಕೊಂಡಿರುವ ನಟ ದುನಿಯಾ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಗಿರಿನಗರ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ. ಈಗಾಗಲೆ ವಿಜಿ ಕೇಕ್ ಕತ್ತರಿಸಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಡಿಸಿಪಿ ರೋಹಿಣಿ ಸೆಪಟ್ ತನಿಖೆ ನಡೆಸುವಂತೆ ಗಿರಿನಗರ ಪೊಲೀಸರಿಗೆ ಸೂಚನೆ ನೀಡಿದ್ದರು.
ಆದರೀಗ ವಿಜಿ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದು, ಎಫ್ ಐ ಆರ್ ದಾಖಲು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕವಾಗಿ ಯಾವುದೆ ಆಯುಧಗಳನ್ನು ಬಳಸುವಂತಿಲ್ಲ ಮತ್ತು ಪ್ರದರ್ಶಿಸುವಂತಿಲ್ಲ. ಇದು ಆರ್ಮ್ಸ್ ಆಕ್ಟ್ ಅಡಿ ಅಪರಾಧವಾಗುತ್ತೆ.
ಈ ಬಗ್ಗೆ ವಿಜಿ ಕೂಡ ಪ್ರತಿಕ್ರಿಯಿಸಿದ್ದು, "ನನ್ನ ಗಮನಕ್ಕೆ ಬಾರದೆ ಎಡವಟ್ಟಾಗಿದೆ, ಕ್ಷಮೆ ಇರಲಿ" ಎಂದಿದ್ದರು. ವಿಜಿ ಕೇಟ್ ಕತ್ತರಿಸುವ ಸಮಯದಲ್ಲಿ ವಿಜಯ್ ಜೊತೆ ತಾಯಿ, ಪತ್ನಿ ಕೀರ್ತಿ ಮತ್ತು ಸಲಗ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಹ ಇದ್ದರು.

ಇನ್ನು ವಿಜಿ ಹುಟ್ಟುಹಬ್ಬ ಆಚರಣೆ ವೇಳೆ ಸಾಕಷ್ಟು ಅಭಿಮಾನಿಗಳು ಭಾಗಿಯಾಗಿದ್ದರು. ಇದರಿಂದ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗಿದ್ದು, ರಾತ್ರಿಯಲ್ಲ ಕಿರಿಕಿರಿ ಅನುಭವಿಸಿದ್ದೇವೆ ಎಂದು ಫೇಸ್ ಬುಕ್ ನಲ್ಲಿ ದೂರು ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹುಟ್ಟುಹಬ್ಬದ ದಿನ ಸಂಭ್ರಮಿಸಬೇಕಿದ್ದ ವಿಜಿ ಈಗ ತೊಂದರೆಯಲ್ಲಿ ಸಿಲುಕಿದ್ದಾರೆ.
ವಿಜಯ್ 46ನೇ ವರ್ಷದ ಹುಟ್ಟಹುಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ಬಳಿ ಇರುವ ತಮ್ಮ ನಿವಾಸದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದು ವಿಜಿಗೆ ಶುಭಾಶಯ ತಿಳಿಸುತ್ತಿದ್ದಾರೆ.


Click it and Unblock the Notifications











