twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ದೂರು ದಾಖಲು

    |

    ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮುದಾಯವೊಂದರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ದೂರು ದಾಖಲಾಗಿದೆ.

    Recommended Video

    ಚಪಾಕ್ ಸಿನಿಮಾ ಬಗ್ಗೆ ಕಂಗನಾ ರಣಾವತ್ ಮಾತು | CHHAPAAK | KANGANA RANAUT | DEEPIKA PADUKONE

    ಕಂಗನಾ ರನೌತ್ ಸಹೋದರಿ ರಂಗೋಲಿ ಅವರ ಖಾತೆಯನ್ನು ಟ್ವಿಟ್ಟರ್ ಅಮಾನತ್ತುಗೊಳಿಸಿದ್ದರ ಬಗ್ಗೆ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದ ಕಂಗನಾ ರನೌತ್, ಮುಸ್ಲಿಂ ಸಮುದಾಯವನ್ನು 'ಭಯೋತ್ಪಾದಕರು' ಎಂದು ಕರೆದಿದ್ದರು.

    ಕಂಗನಾ ಅವರ ಹೇಳಿಕೆ ವಿರುದ್ದ ಅಲಿ ಖಾಶಿಫ್ ಖಾನ್ ದೇಶ್‌ಮುಖ ಎಂಬುವರು ಮುಂಬೈ ನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದ್ವೇಷ ಪಸರಿಸುವ ಟ್ವೀಟ್ ಮಾಡಿದ್ದ ರಂಗೋಲಿ

    ದ್ವೇಷ ಪಸರಿಸುವ ಟ್ವೀಟ್ ಮಾಡಿದ್ದ ರಂಗೋಲಿ

    ಕಂಗನಾ ಸಹೋದರಿ ರಂಗೋಲಿ ಚಂಡಲ್ ಅವರ ಟ್ವಿಟ್ಟರ್ ಖಾತೆಯನ್ನು ಇತ್ತೀಚೆಗೆ ಅಮಾನತ್ತು ಮಾಡಲಾಗಿತ್ತು. ಅವರು ದ್ವೇಷ ಪಸರಿಸುವ ಪೋಸ್ಟ್ ಮಾಡಿದ್ದಾರೆಂದು ಅವರ ಖಾತೆಯನ್ನು ಡಿಲೀಟ್ ಮಾಡಲಾಗಿತ್ತು. ಇದು ಕಂಗನಾ ಅವರಿಗೆ ಸಿಟ್ಟು ತರಿಸಿತ್ತು.

    ಸಹೋದರಿಗೆ ಬೆಂಬಲಿಸಿ ಟ್ವೀಟ್ ಮಾಡಿದ್ದ ಕಂಗನಾ

    ಸಹೋದರಿಗೆ ಬೆಂಬಲಿಸಿ ಟ್ವೀಟ್ ಮಾಡಿದ್ದ ಕಂಗನಾ

    ಸಹೋದರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕಂಗನಾ ರನೌತ್, ಟ್ವಿಟ್ಟರ್‌ ನಲ್ಲಿ ಪ್ರಧಾನಿಗಳಿಗೆ, ಗೃಹ ಸಚಿವರಿಗೆ, ಆರ್‌ಎಸ್‌ಎಸ್‌ ಗೆ ಭಯೋತ್ಪಾದಕರು ಎನ್ನಲಾಗುತ್ತದೆ. ಆದರೆ ನಿಜವಾದ ಭಯೋತ್ಪಾದಕರಿಗೆ ಭಯೋತ್ಪಾದಕರು ಎನ್ನುವಂತಿಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.

    ಎಲ್ಲಾ ಮುಸ್ಲೀಮರ ಬಗ್ಗೆ ಮಾತನಾಡಿಲ್ಲ ಎಂದ ಕಂಗನಾ

    ಎಲ್ಲಾ ಮುಸ್ಲೀಮರ ಬಗ್ಗೆ ಮಾತನಾಡಿಲ್ಲ ಎಂದ ಕಂಗನಾ

    ಅದೇ ವಿಡಿಯೋದಲ್ಲಿ ಮಾತನಾಡುತ್ತಾ, ಸಹೋದರಿ ರಂಗೋಲಿ ಎಲ್ಲಾ ಮುಸ್ಲೀಮರನ್ನೂ ಭಯೋತ್ಪಾದಕರು ಎಂದಿಲ್ಲ, ಯಾರು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೋ, ಯಾರು ಅವರ ಮೇಲೆ ಉಗುಳಿದರೋ ಅವರನ್ನು ಮಾತ್ರವೇ ಭಯೋತ್ಪಾದಕರು ಎಂದು ಹೇಳಿದ್ದಾರೆ.

    ಏನು ಬರೆದಿದ್ದರು ಕಂಗನಾ ಸೋದರಿ ರಂಗೋಲಿ

    ಏನು ಬರೆದಿದ್ದರು ಕಂಗನಾ ಸೋದರಿ ರಂಗೋಲಿ

    'ಕೊರೊನಾ ವೈರಸ್ ಸೋಂಕಿತರ ಕುಟುಂಬದವರನ್ನು ತಪಾಸಣೆ ಮಾಡಲು ಹೋದ ವೈದ್ಯರು ಮತ್ತು ಪೊಲೀಸರ ಮೇಲೆ ದಾಳಿ ಮಾಡಿ ಸಾಯಿಸಲಾಗಿದೆ. ಈ ಮುಲ್ಲಾಗಳು+ ಸೆಕ್ಯುಲರ್ ಮೀಡಿಯಾಗಳನ್ನು ಸಾಲಾಗಿ ನಿಲ್ಲಿಸಿ ಅವರನ್ನು ಗುಂಡು ಹೊಡೆದು ಸಾಯಿಸಬೇಕು. ಅವರು ನಮ್ಮನ್ನು ನಾಜಿಗಳೆಂದು ಕರೆಯುತ್ತಾರೆ. ಅದಕ್ಕೆ ಯಾರು ತಲೆಕೆಡಿಸಿಕೊಳ್ಳುತ್ತಾರೆ. ನಕಲಿ ವರ್ಚಸ್ಸಿಗಿಂತ ಜೀವ ಹೆಚ್ಚು ಮುಖ್ಯ' ಎಂದು ರಂಗೋಲಿ ಟ್ವೀಟ್ ಮಾಡಿದ್ದರು. ಹೀಗಾಗಿ ರಂಗೋಲಿ ಅವರ ಖಾತೆಯನ್ನು ಟ್ವಿಟ್ಟರ್ ಅಮಾನತ್ತು ಮಾಡಿತ್ತು.

    English summary
    Complaint lodge against actress Kangana Ranaut for calling a community 'terrorist'.
    Saturday, May 30, 2020, 14:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X