For Quick Alerts
  ALLOW NOTIFICATIONS  
  For Daily Alerts

  ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆದ ಪೂಜಾಗಾಂಧಿ

  |

  Recommended Video

  ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆದ ಪೂಜಾಗಾಂಧಿ..! | FILMIBEAT KANNADA

  ಕನ್ನಡದ ನಟಿ 'ಮುಂಗಾರು ಮಳೆ' ಖ್ಯಾತಿಯ ಪೂಜಾಗಾಂಧಿ ಮೇಲೆ ದೂರು ದಾಖಲಾಗಿದೆ. ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆಗಿದ್ದಾರೆ ಎಂದು ಅವರ ವಿರುದ್ಧ ದೂರು ನೀಡಲಾಗಿದೆ.

  ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಪೂಜಾಗಾಂಧಿ ಕೆಲವು ದಿನ ಉಳಿದುಕೊಂಡಿದ್ದರು. ಆದರೆ, ಹೋಟೆಲ್ ಬಿಲ್ ಕಟ್ಟದೇ ಅಲ್ಲಿಂದ ಪರಾರಿ ಆಗಿದ್ದರು. ಲಕ್ಷ ಲಕ್ಷ ಬಿಲ್ ಮಾಡಿ ಯಾರಿಗೂ ಗೊತ್ತಾಗದೇ ಎಸ್ಕೇಪ್ ಆಗಿದ್ದಾರಂತೆ.

  'ಪೂಜಾ ಗಾಂಧಿಗೆ ಬಿಕಿನಿ ಸೂಟ್ ಆಗಲ್ಲ' ಎಂದ ಬಿಗ್ ಬಾಸ್ ಸ್ಪರ್ಧಿ 'ಪೂಜಾ ಗಾಂಧಿಗೆ ಬಿಕಿನಿ ಸೂಟ್ ಆಗಲ್ಲ' ಎಂದ ಬಿಗ್ ಬಾಸ್ ಸ್ಪರ್ಧಿ

  ಕನ್ನಡ ಸ್ಟಾರ್ ನಟಿ ಪೂಜಾಗಾಂಧಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾರ್ಚ್ 11 ರಂದು ಪೊಲೀಸರು NCR ದಾಖಲು ಮಾಡಿಕೊಂಡಿದ್ದರು. ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿದ್ದರು.

  ದೂರು ದಾಖಲಿಸಿಕೊಂಡಿದ್ದ ಪೊಲೀಸ್ ಪೂಜಾಗಾಂಧಿ ಯನ್ನು ಸ್ಟೇಷನ್ ಗೆ ಕರಿಸಿದ್ದರು. ಪೊಲೀಸರ ಸಮ್ಮುಖದಲ್ಲಿ ಎರಡು ಲಕ್ಷ ನೀಡಿದ್ದ ನಟಿ ಪೂಜಾಗಾಂಧಿ ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ.

  ಮದುವೆ ಆಗ್ತೀರಂತೆ ಹೌದಾ ಅಂತ ಕೇಳಿದ್ರೆ ಹೀಗಂದ್ರು ಪೂಜಾ ಗಾಂಧಿ.! ಮದುವೆ ಆಗ್ತೀರಂತೆ ಹೌದಾ ಅಂತ ಕೇಳಿದ್ರೆ ಹೀಗಂದ್ರು ಪೂಜಾ ಗಾಂಧಿ.!

  ಸದ್ಯ, 'ದಂಡುಪಾಳ್ಯ 3' ಸಿನಿಮಾದ ನಂತರ ಪೂಜಾ ಗಾಂಧಿ ಬೇರೆ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಇನ್ನು ಸಿನಿಮಾ ಮಾತ್ರವಲ್ಲದೆ ಒಮ್ಮೆ ರಾಯಚೂರಿನಿಂದ ವಿಧಾನಸಭೆ ಚುನಾವಣೆಗೆ ಪೂಜಾ ಸ್ಪರ್ಧೆ ಕೂಡ ಮಾಡಿದ್ದರು.

  ಈ ಬಗ್ಗೆ ವಿವರ ಪಡೆಯಲು 'ಫಿಲ್ಮಿಬೀಟ್ ಕನ್ನಡ' ನಟಿ ಪೂಜಾಗಾಂಧಿ ಅವರಿಗೆ ಸಂಪರ್ಕ ಮಾಡಿದಾಗ ಅವರ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ.

  English summary
  Highground station police filed a complaint against kannada actress Pooja Gandhi for not paying bill of Ashoka hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X