twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಬರ್ತಡೇ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ನಿವಾಸಿಗಳು.!

    |

    Recommended Video

    ದರ್ಶನ್ ಅಕ್ಕಪಕ್ಕದ ಮನೆಯವರಿಂದ ಪೊಲೀಸ್ ಕಂಪ್ಲೇಂಟ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ ಇರಬಹುದು. ಆದ್ರೆ, ದರ್ಶನ್ ಹುಟ್ಟುಹಬ್ಬ ಬಂದ್ರೆ ಸಾಕು, ದರ್ಶನ್ ನಿವಾಸದ ಅಕ್ಕ-ಪಕ್ಕದ ಮನೆಯವರಿಗೆ ದೊಡ್ಡ ತಲೆ ನೋವು.! ಯಾಕಂದ್ರೆ, ದರ್ಶನ್ ಜನ್ಮದಿನದಂದು 'ದಾಸ'ನಿಗೆ ಶುಭ ಕೋರಲು ಬರುವ ಅಭಿಮಾನಿಗಳ ಸಂಖ್ಯೆ ಸಣ್ಣ-ಪುಟ್ಟದ್ದೇನಲ್ಲ.

    ಪ್ರತಿ ವರ್ಷ ಕೂಡ ದರ್ಶನ್ ಜನ್ಮದಿನದಂದು, ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಜನಸಾಗರವೇ ಹರಿದು ಬರುತ್ತದೆ. ಅದರಂತೆ ನಿನ್ನೆ (ಫೆಬ್ರವರಿ 16) ಕೂಡ 'ಚಕ್ರವರ್ತಿ'ಯ ಬರ್ತಡೇ ಪ್ರಯುಕ್ತ ದರ್ಶನ್ ನಿವಾಸದ ಮುಂದೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು.

    ಈ ವೇಳೆ ನಡೆದ ಒಂದು ಅಚಾತುರ್ಯ ಘಟನೆಯಿಂದಾಗಿ ದರ್ಶನ್ ನಿವಾಸದ ಅಕ್ಕ-ಪಕ್ಕದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದರ್ಶನ್ ಅಭಿಮಾನಿಗಳು ಮತ್ತು ದರ್ಶನ್ ಬರ್ತಡೇ ಆಯೋಜನೆ ಮಾಡಿದ್ದ ವ್ಯವಸ್ಥಾಪಕರ ವಿರುದ್ಧ ದರ್ಶನ್ ಮನೆಯ ಅಕ್ಕ-ಪಕ್ಕದ ನಿವಾಸಿಗಳು ದೂರು ನೀಡಿದ್ದಾರೆ. ಮುಂದೆ ಓದಿರಿ...

    ಕಾರು ಜಖಂ ಗೊಳಿಸಿದ ದರ್ಶನ್ ಫ್ಯಾನ್ಸ್.!

    ಕಾರು ಜಖಂ ಗೊಳಿಸಿದ ದರ್ಶನ್ ಫ್ಯಾನ್ಸ್.!

    ಜನ್ಮದಿನದಂದು ದರ್ಶನ್ ಗೆ ಶುಭ ಕೋರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾಗ ನೂಕುನುಗ್ಗಲು ಉಂಟಾಗಿದೆ. ಆಗ, ಕಾರೊಂದು ಜಖಂಗೊಂಡಿದೆ. ಇದರಿಂದ ಬೇಸೆತ್ತ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಿವಾಸಿ ರಾಮಪ್ರಸಾದ್.ಎಂ.ಎಸ್ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ.

    ಅಭಿಮಾನಿಗಳು ಮಾಡಿದ ಎಡವಟ್ಟು

    ಅಭಿಮಾನಿಗಳು ಮಾಡಿದ ಎಡವಟ್ಟು

    ದರ್ಶನ್ ಗೆ ವಿಶ್ ಮಾಡಲು ಬಂದ ಅಭಿಮಾನಿಗಳು ರಾಮಪ್ರಸಾದ್.ಎಂ.ಎಸ್ ಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ. ರೋಡಿನಲ್ಲಿ ನಿಲ್ಲಿಸಿದ್ದ ರಾಮಪ್ರಸಾದ್.ಎಂ.ಎಸ್ ರವರಿಗೆ ಸೇರಿದ ಕಾರನ್ನು ಹತ್ತಿ, ಕಾರಿನ ಮೇಲೆಲ್ಲಾ ಗೀಚಿ ಅಭಿಮಾನಿಗಳು ರಂಪಾಟ ಮಾಡಿದ್ರಂತೆ. ಇದರಿಂದ 40 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ರಾಮಪ್ರಸಾದ್.ಎಂ.ಎಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?

    ಸರಿಯಾದ ವ್ಯವಸ್ಥೆ ಇರಲಿಲ್ಲ.!

    ಸರಿಯಾದ ವ್ಯವಸ್ಥೆ ಇರಲಿಲ್ಲ.!

    ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವುದು ಗೊತ್ತಿದ್ದರೂ, ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಿರಲಿಲ್ಲ. ಆದ್ದರಿಂದ, ಈ ಘಟನೆ ನಡೆದಿದೆ ಎಂಬುದು ರಾಮಪ್ರಸಾದ್.ಎಂ.ಎಸ್ ರವರ ಆರೋಪ. ಹೀಗಾಗಿ, ಬರ್ತಡೇ ಆಯೋಜನೆ ಮಾಡಿದವರು ಮತ್ತು ಅಭಿಮಾನಿಗಳ ವಿರುದ್ಧ ರಾಮಪ್ರಸಾದ್.ಎಂ.ಎಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಅಭಿಮಾನಿಗಳಿಗೆ ಪ್ರೀತಿಗೆ ತಲೆಬಾಗಿದ 'ದಾಸ': ದರ್ಶನ್ ಕಡೆಯಿಂದ ಇನ್ನೊಂದು ಮನವಿಅಭಿಮಾನಿಗಳಿಗೆ ಪ್ರೀತಿಗೆ ತಲೆಬಾಗಿದ 'ದಾಸ': ದರ್ಶನ್ ಕಡೆಯಿಂದ ಇನ್ನೊಂದು ಮನವಿ

    ದರ್ಶನ್ ಮಾತಿಗೆ ಬೆಲೆ ಬೇಡ್ವಾ.?

    ದರ್ಶನ್ ಮಾತಿಗೆ ಬೆಲೆ ಬೇಡ್ವಾ.?

    ''ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು. ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ'' ಎಂದು ಹುಟ್ಟುಹಬ್ಬಕ್ಕೂ ಮುನ್ನ ದರ್ಶನ್ ಪದೇ ಪದೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹೀಗಿದ್ದರೂ, ಕೆಲವರು ಕಾರನ್ನು ಜಖಂಗೊಳಿಸಿ ಅತಿರೇಕದ ವರ್ತನೆ ತೋರಿದ್ದಾರೆ.

    English summary
    Complaint lodged against Kannada Actor Darshan fans for damaging car during birthday celebrations.
    Monday, February 17, 2020, 10:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X