twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣಾ ಪ್ರಚಾರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲು

    By ಫಿಲ್ಮ್ ಡೆಸ್ಕ್
    |

    ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ಮುನಿರತ್ನ ಪರವಾಗಿ ನಟ ದರ್ಶನ್ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೂ ಅಬ್ಬರದ ಪ್ರಚಾರ ನಡೆಸಿದ್ದಾರೆ.

    ಪ್ರಚಾರ ಸಮಯದಲ್ಲಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಿಲ್ಲ ಎನ್ನುವ ಆರೋಪ ದರ್ಶನ್ ವಿರುದ್ಧ ಕೇಳಿಬಂದಿದೆ. ಕೊರೊನಾ ಮಾರ್ಗಸೂಚಿ ಪಾಲಿಸದೆ ಪ್ರಚಾರ ಮಾಡಿದ ದರ್ಶನ್ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡೆ ದೂರು ದಾಖಲಿಸಲಾಗಿದೆ.

    ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?

    ಆರ್ ಆರ್ ನಗರ ಉಪಚುನಾವಣೆ ಕಣ ಭಾರಿ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ ಮುನಿರತ್ನ ಪರ ನಟ ದರ್ಶನ್ ಸೇರಿದಂತೆ ಅನೇಕ ಕಲಾವಿದರು ಚುನಾವಣಾ ಪ್ರಚಾರ ಮಾಡಿದ್ದಾರೆ.

    Complaint Against Darshan for Violating covid protocols In RR Nagar Campaign

    ದರ್ಶನ್ ಪ್ರಚಾರದ ದಿನ ಅಭಿಮಾನಿಗಳ ದಂಡೆ ನೆರೆದಿತ್ತು. ಡಿ ಬಾಸ್ ಪ್ರಚಾರಕ್ಕೆ ಬರ್ತಿದ್ದಾರೆ ಎನ್ನುವ ಸುದ್ದಿ ಗೊತ್ತಾಗುತ್ತಿದಂತೆ ಅಭಿಮಾನಿಗಳು ಬೆಳಗ್ಗೆಯೇ ಆರ್ ಆರ್ ನಗರ ಕ್ಷೇತ್ರಕ್ಕೆ ಬಂದು ಜಮಾಯಿಸಿದ್ದರು. ದರ್ಶನ್ ಪ್ರಚಾರದ ಜೊತೆಯೇ ಅಭಿಮಾನಿಗಳು ಸಹ ಸಾಲುಗಟ್ಟಿ ಪ್ರಚಾರದಲ್ಲಿ ಭಾಗಿಯಾಗಿದ್ದು ವಿಶೇಷ.

    ದರ್ಶನ್ ಜೊತೆ ನಟಿ ಅಮೂಲ್ಯ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದರು. ದರ್ಶನ್ ಅಭಿಮಾನಿ ಬಳಗ ನೋಡಿ ಮೂಕವಿಸ್ಮಿತರಾದ ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿದ್ದರು. 'ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು. ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ' ಎಂದು ಹೇಳಿದ್ದಾರೆ.

    English summary
    Complaint against darshan for not following covid protocol in rr nagar campaign.
    Monday, November 2, 2020, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X