ಮಕ್ಕಳ ಆಯೋಗಕ್ಕೆ ದೂರು ಕೊಟ್ಟ ದುನಿಯಾ ವಿಜಯ್ ಪುತ್ರಿ
ದುನಿಯಾ ವಿಜಯ್ ಮನೆ ಗಲಾಟೆ ದಿನೇ ದಿನೇ ಹೆಚ್ಚಾಗುತ್ತಿದೆ ಹೊರತು ಕಮ್ಮಿ ಆಗುತ್ತಿಲ್ಲ. ಕೀರ್ತಿ ಗೌಡ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಕಾರಣಕ್ಕೆ ನಾಗರತ್ನ ವಿರುದ್ಧ ದೂರು ದಾಖಲಾಗಿದೆ. ನಾಗರತ್ನಗೆ ವಿಚ್ಛೇದನ ನೀಡಲು ದುನಿಯಾ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ನಾಲ್ಕು ದಿನಗಳು ಕಳೆದರೂ, ನಾಗರತ್ನ ಸುಳಿವು ಮಾತ್ರ ಪತ್ತೆ ಆಗಿಲ್ಲ. ಅತ್ತ ನಾಗರತ್ನ ರನ್ನ ಹುಡುಕುವಲ್ಲಿ ಪೊಲೀಸರು ತಲ್ಲೀನರಾಗಿದ್ದರೆ, ಇತ್ತ ಮಕ್ಕಳ ಆಯೋಗಕ್ಕೆ ದುನಿಯಾ ವಿಜಯ್ ಪುತ್ರಿಯರು ದೂರು ಕೊಟ್ಟಿದ್ದಾರೆ. ರಕ್ಷಣೆ ಕೋರಿ ದುನಿಯಾ ವಿಜಯ್ ಪುತ್ರಿಯರು ಮಕ್ಕಳ ಆಯೋಗದ ಮೊರೆ ಹೋಗಿದ್ದಾರೆ.

ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ತಮಗೆ ತೊಂದರೆ ಕೊಡುತ್ತಿದ್ದಾರೆ. ಮನೆಯೊಳಗೆ ತಮ್ಮ ಮೇಲೆ ತಂದೆ ದುನಿಯಾ ವಿಜಯ್ ಹಲ್ಲೆ ಮಾಡಿದ್ದಾರೆ. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಪುತ್ರಿಯರು ಉಲ್ಲೇಖಿಸಿದ್ದಾರಂತೆ.
ಅಂತೂ ದುನಿಯಾ ವಿಜಯ್ ವಿರುದ್ಧ ಪುತ್ರಿಯರಿಬ್ಬರು ತಿರುಗಿ ಬಿದ್ದಿದ್ದಾರೆ. ಮಕ್ಕಳ ಆಯೋಗಕ್ಕೆ ದೂರು ಕೊಟ್ಟಿರುವುದರಿಂದ ದುನಿಯಾ ವಿಜಯ್ ಗೆ ಹೊಸ ಸಂಕಷ್ಟ ಶುರುವಾಗಿದೆ.


Click it and Unblock the Notifications











