»   » ನಟ-ನಿರ್ಮಾಪಕ ಸುದೀಪ್ ವಿರುದ್ಧ ದೂರು ದಾಖಲು

ನಟ-ನಿರ್ಮಾಪಕ ಸುದೀಪ್ ವಿರುದ್ಧ ದೂರು ದಾಖಲು

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada

ಸ್ಯಾಂಡಲ್'ವುಡ್'ನ ಪ್ರಸಿದ್ಧ ನಟ, ನಿರ್ಮಾಪಕ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರವಾಹಿ ನಿರ್ಮಾಣದ ವೇಳೆ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದ ತೋಟ ಮನೆಗೆ ಬಾಡಿಗೆ ನೀಡಿಲ್ಲ ಎಂಬ ಆರೋಪದಡಿಯಲ್ಲಿ ಮನೆ ಮಾಲೀಕರು ದೂರು ದಾಖಲಾಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದ ದೀಪಕ್ ಮಯೂರ್ ಅವರು ಮನೆಯಲ್ಲಿ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರವಾಹಿ ತಂಡ 3 ತಿಂಗಳು ಚಿತ್ರೀಕರಣ ನಡೆಸಿತ್ತು. ಈ ವೇಳೆ ಚಿತ್ರೀಕರಣಕ್ಕಾಗಿ ತೋಟದ ಮನೆಗೆ ದಿನಕ್ಕೆ 6 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ಬಾಕಿ ಉಳಿದ 1.50 ಲಕ್ಷ ರೂಪಾಯಿ ಬಾಡಿಗೆ ಹಣವನ್ನು ಧಾರಾವಾಹಿ ತಂಡ ಇನ್ನೂ ನೀಡಿಲ್ಲ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ.

ಇನ್ನೂ ಮುಂದೆ ಸುದೀಪ್ ಹುಟ್ಟುಹಬ್ಬ ಆಚರಿಸದಿರಲು ಇದೇ ಕಾರಣ..!

Complaint Filed Against Actor Producer Sudeep

ಅಲ್ಲದೆ ಈ ಧಾರವಾಹಿ ಚಿತ್ರೀಕರಣದ ವೇಳೆ ತೋಟದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿಸಿರುವ ಮಾಲೀಕ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ಮಾಪಕ ಕಿಚ್ಚ ಸುದೀಪ್ ಮತ್ತು ಸಹ ನಿಮ್ರಾಪಕ ಮಹೇಶ್ ವಿರುದ್ಧ ದೂರು ನೀಡಿದ್ದಾರೆ.

'ವಾರಸ್ದಾರ' ಧಾರವಾಹಿ ಜೀ-ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾರ್ತಿ 7.30ಕ್ಕೆ ಪ್ರಸಾರವಾಗುತ್ತೆ. ಗಡ್ಡ ವಿಜಿ ನಿರ್ದೇಶನ ಮಾಡುತ್ತಿದ್ದು, ಡ್ರಾಮಾ ಜೂನಿಯರ್ಸ್ ಖ್ಯಾತಿ ಚಿತ್ರಾಲಿ, ರವಿಚೇತನ್ ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ರಾಮ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ಸುದೀಪ್ ಜನ್ಮದಿನದ ನೆಪದಲ್ಲಿ ಹಣ ವಸೂಲಿ: ಅಪ್ಪಿ-ತಪ್ಪಿಯೂ ದುಡ್ಡು ಕೊಡ್ಬೇಡಿ.!

English summary
Deepak, the owner of a house which was used for shooting of the serial 'Varasdara', produced by Sudeep's Kichcha Creations, has filed a case against the actor-director Sudeep. Deepak has alleged that the serial team has not paid Rs 1,50,000 for the house rent

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X