For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಹರಿಹರನ್ ಬೆನ್ನಿಗೆ ನಿಂತ ಚೇತನ್ ಗೆ ಶುರುವಾಗಿದೆ ಸಂಕಷ್ಟ.!

  |

  Recommended Video

  ಸರ್ಜಾ ಮೇಲೆ ಶ್ರುತಿ ಮೀ ಟೂ ಆರೋಪ | ಸಾಥ್ ಕೊಟ್ಟ ಚೇತನ್ ಗೆ ಸಂಕಷ್ಟ | FILMIBEAT KANNADA

  #ಮೀಟೂ ಅಭಿಯಾನದಿಂದ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಅತ್ತ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಇತ್ತ ಶ್ರುತಿ ಹರಿಹರನ್ ಕೂಡ ಸುಮ್ಮನೆ ಕೂತಿಲ್ಲ. ಅರ್ಜುನ್ ವಿರುದ್ಧ ದೂರು ನೀಡಿದ್ದಾರೆ.

  ಸದ್ಯ ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಕೇಸ್ ಕೋರ್ಟ್ ಅಂಗಳದಲ್ಲಿದೆ. ಈ ನಡುವೆ 'ಆ ದಿನಗಳು' ಖ್ಯಾತಿಯ ನಟ ಚೇತನ್ ಗೂ ಸಂಕಷ್ಟ ಎದುರಾಗಿದೆ. ಶ್ರುತಿ ಹರಿಹರನ್ ಪರವಾಗಿ ಮಾತನಾಡಿದ ಚೇತನ್ ವಿರುದ್ಧ ಅರ್ಜುನ್ ಸರ್ಜಾ ಸಿಡಿದೆದ್ದಿದ್ದಾರೆ.

  ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

  ನಟ ಚೇತನ್ ಗೆ ತಕ್ಕ ಪಾಠ ಕಲಿಸಲು ಅರ್ಜುನ್ ಸರ್ಜಾ ಹೊಸ ರಣತಂತ್ರ ರೂಪಿಸಿದ್ದಾರೆ. ಅದೇನಪ್ಪಾ ಅಂದ್ರೆ, ನಟ ಚೇತನ್ ವಿರುದ್ಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.

  ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಇವತ್ತು ಫಿಲ್ಮ್ ಚೇಂಬರ್ ಗೆ ಭೇಟಿ ಕೊಟ್ಟು ಚೇತನ್ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. 'ಪ್ರೇಮ ಬರಹ' ಚಿತ್ರಕ್ಕೆ ಮೊದಲು ಚೇತನ್ ರನ್ನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರಿಗೆ ಹತ್ತು ಲಕ್ಷ ರೂಪಾಯಿ ಅಡ್ವಾನ್ಸ್ ಕೂಡ ಕೊಡಲಾಗಿತ್ತು. ಆದ್ರೆ, ಬಳಿಕ ಕಾರಣಾಂತರಗಳಿಂದ ಚೇತನ್ ರನ್ನ ಚಿತ್ರದಿಂದ ಕೈಬಿಡಲಾಗಿತ್ತು.

  ಚೇತನ್ ಮಾತಿಗೆ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡ ಪ್ರಿಯಾಂಕಾ ಉಪೇಂದ್ರ ಚೇತನ್ ಮಾತಿಗೆ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡ ಪ್ರಿಯಾಂಕಾ ಉಪೇಂದ್ರ

  ಹತ್ತು ಲಕ್ಷ ರೂಪಾಯಿ ವಾಪಸ್ ಕೊಡುವಂತೆ ಚೇತನ್ ಗೆ ಹಲವಾರು ಬಾರಿ ಕೇಳಲಾಗಿದೆ. ಆದ್ರೆ, ಹಣ ಕೊಡದೆ ಚೇತನ್ ಸತಾಯಿಸುತ್ತಿದ್ದಾರೆ ಎಂದು ಶಿವಾರ್ಜುನ್ ಫಿಲ್ಮ್ ಚೇಂಬರ್ ನಲ್ಲಿ ಚೇತನ್ ಬಗ್ಗೆ ದೂರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಫಿಲ್ಮ್ ಚೇಂಬರ್ ನಿರ್ಧರಿಸಿದೆ.

  English summary
  Complaint filed against Chethan in KFCC by Arjun Sarja Manager Shivarjun.
  Monday, October 29, 2018, 18:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X